ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಗ್ರೀನ್ ಟೆಕ್ ಪ್ರಶಸ್ತಿ

Last Updated 29 ಅಕ್ಟೋಬರ್ 2011, 12:05 IST
ಅಕ್ಷರ ಗಾತ್ರ

ನವದೆಹಲಿ ((ಪಿಟಿಐ): ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಸಿಕ್ಕಿಂನಲ್ಲಿನ ತನ್ನ ಪಾಕ್ಯೊಂಗ್ ನ ಗ್ರೀನ್ ಫೋಲ್ಡ್ ವಿಮಾನ ನಿಲ್ದಾಣಕ್ಕಾಗಿ ಗ್ರೀನ್ ಟೆಕ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.

ವಿಮಾನಯಾನ ರಂಗದಲ್ಲಿನ ~ಸ್ವರ್ಣ~ ವರ್ಗದ 2011ರ ಸಿ ಎಸ್ ಆರ್ ಪ್ರಶಸ್ತಿಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವನ್ನು ಗ್ರೀನ್ ಟೆಕ್ ಫೌಂಡೇಷನ್ ಆಯ್ಕೆ ಮಾಡಿದೆ ಎಂದು ಹಿರಿಯ ಎಎಐ ಅಧಿಕಾರಿಯೊಬ್ಬರು ತಿಳಿಸಿದರು.

ಪರಿಸರದ ಮೇಲಿನ ಪ್ರತಿಕೂಲ ಪರಿಣಾಮವನ್ನು ಕಡಿಮೆಗೊಳಿಸಲು ಹೊಸ ತಂತ್ರಜ್ಞಾನಗಳನ್ನು ಹೇಗೆ ಬಳಸಿಕೊಳ್ಳಬಹುದು ಹಾಗೂ ವೆಚ್ಚ ಇಳಿಕೆ ಮತ್ತು ನಿರ್ಮಾಣ ಕಾರ್ಯವನ್ನು ಹೇಗೆ ತ್ವರಿತಗೊಳಿಸಬಹುದು ಎಂಬುದಕ್ಕೆ ಸಿಕ್ಕಿಂ ವಿಮಾನ ನಿಲ್ದಾಣದ ನಿರ್ಮಾಣವು ನೈಜ ನಿದರ್ಶನವಾಗಿದೆ ಎಂದು ಅವರು ಹೇಳಿದರು.

ಸಿಎಸ್ಆರ್ ಪ್ರಯತ್ನಗಳ ಭಾಗವಾಗಿ ಎಎಐ ಇಲ್ಲಿ ಕಾಗದ ಮರುಬಳಕೆ ಘಟಕ, ಗ್ರಾಮಗಳಲ್ಲಿ ವೈದ್ಯಕೀಯ ಶಿಬಿರಗಳಲ್ಲದೆ ಗ್ರಾಮಸ್ಥರಿಗೆ ಶಿಕ್ಷಣ ಸವಲತ್ತನ್ನು ಕಲ್ಪಿಸಿದೆ.

ಅಂದಾಜು 66 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪಾಕ್ಯೊಂಗ್ ಕೇಂದ್ರವನ್ನು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ನಿರ್ಮಿಸಲಾಗಿದೆ. ನಿಲ್ದಾಣವನ್ನು ನಾಗರಿಕ ವಿಮಾನ  ಇಲಾಖೆಯ ಮಾಜಿ ಕಾರ್ಯದರ್ಶಿ ಎಂ.ಎಂ. ನಂಬಿಯಾರ್ ಕಳೆದ ವರ್ಷ ಉದ್ಘಾಟಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT