ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರ ಮೇಲಿನ ಹಲ್ಲೆ: ಯುವಕನ ವಿಚಾರಣೆ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): 2009ರಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಆರು ಮಂದಿ ಭಾರತೀಯರ ಮೇಲೆ ಹಲ್ಲೆ ನಡೆಸಲು ತನ್ನ ಸ್ನೇಹಿತರಿಗೆ ನೆರವು ನೀಡಿದ ಇಲ್ಲಿನ ಹದಿಹರೆಯದ ವ್ಯಕ್ತಿಯೊಬ್ಬನನ್ನು ವಿಕ್ಟೋರಿಯ ನ್ಯಾಯಾಲಯ ವಿಚಾರಣೆಗೆ ಒಳಪಡಿಸಿತು.

18ರ ಹರೆಯದ ರಿಕ್ಕಿ ಪೆಟ್ರುಸಿಕ್, ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ತಾನು ನಡೆಸಿದ ಕೃತ್ಯವನ್ನು ವಿವರಿಸಿದ್ದಲ್ಲದೆ ಅದಕ್ಕಾಗಿ ಕ್ಷಮೆ ಕೋರಿದನು ಎಂದು ‘ದಿ ಏಜ್’ ಪತ್ರಿಕೆ ವರದಿ ಮಾಡಿದೆ.

ಭಾರತೀಯರ ಮೇಲೆ ಹಲ್ಲೆ ನಡೆಸಲು ತನ್ನಿಬ್ಬರು ಸ್ನೇಹಿತರು ಹೊರಟು ನಿಂತಾಗ ತಾವೇ ಕಾರು ಚಲಾಯಿಸಿದ್ದಾಗಿ ರಿಕ್ಕಿ ತಿಳಿಸಿದ್ದಾನೆ. 2009ರ ಡಿಸೆಂಬರ್ 7 ರಿಂದ 11ರ ಅವಧಿಯಲ್ಲಿ ಆರು ಮಂದಿ ಭಾರತೀಯರ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಲಾಗಿತ್ತು ಎಂದು ಪತ್ರಿಕೆ ವರದಿ ಮಾಡಿದೆ.

ತನ್ನ ಸ್ನೇಹಿತರು ಮಾಡುತ್ತಿರುವ ಕೃತ್ಯದ ಸಂಪೂರ್ಣ ಅರಿವು ತನಗಿತ್ತು ಎಂದು ರಿಕ್ಕಿ ತಿಳಿಸಿದ್ದಾನೆ. ತಾನು ಮಾಡುತ್ತಿರುವುದು ತಪ್ಪು ಎಂದೂ ಆತನಿಗೆ ತಿಳಿದಿತ್ತು ಎಂದು ನ್ಯಾಯವಾದಿ ಡಾಮಿನ್ ಹನ್ನನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT