ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರಿಗೆ ನೌಕರಿ- ಬ್ರಿಟನ್ ಯೋಜನೆ

Last Updated 20 ಫೆಬ್ರುವರಿ 2011, 18:20 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಮಾಹಿತಿ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ 20,000 ಭಾರತೀಯರಿಗೆ ಪ್ರತಿವರ್ಷ ನೌಕರಿಗೆ ಅವಕಾಶ ನೀಡಲು ಬ್ರಿಟನ್ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಐರೋಪ್ಯ ಒಕ್ಕೂಟ ಮತ್ತು ಭಾರತ ಮುಕ್ತ ವ್ಯಾಪಾರ ಒಪ್ಪಂದದ ಕುರಿತಂತೆ ಬ್ರಸೆಲ್ಸ್‌ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ ಎಂದು ಸಂಡೆ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅಂತರ ಕಂಪೆನಿ ವರ್ಗಾವಣೆ ವೀಸಾ ಅನ್ವಯ ಬ್ರಿಟನ್ ಪ್ರವೇಶಿಸಲು ಪರಿಣತರಿಗೆ ಅವಕಾಶ ನೀಡಲಾಗುವುದು.

ಈ ವೀಸಾ ಅನ್ವಯ ಪ್ರವೇಶ ಪಡೆದವರು ಐದು ವರ್ಷಗಳ ಕಾಲ ಇಲ್ಲಿ ವಾಸಿಸಹುದಾಗಿದೆ. ಈ ಹೊಸ ಒಪ್ಪಂದಕ್ಕೆ ಜೂನ್ ಅಂತ್ಯದ ವೇಳೆಗೆ ಸಹಿ ಬೀಳುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT