ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರು ಅಸ್ಥಿರ ಮನಸ್ಸಿನವರು!

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಭಾರತೀಯರು ಸ್ನೇಹಪರರು ಆದರೆ, ಅಸ್ಥಿರ ಮನಸ್ಸಿನವರು. ನಿರ್ಧಾರ ತೆಗೆದು­ಕೊಳ್ಳು­ವುದಕ್ಕೆ ಮೀನ–ಮೇಷ ಎಣಿಸುತ್ತಾರೆ!

– ಭಾರತೀಯ ಪ್ರವಾಸಿಗರ ಕುರಿತಾಗಿ ಬ್ರಿಟನ್‌ ಸರ್ಕಾರದ ಪ್ರವಾಸೋದ್ಯಮ ಸಂಸ್ಥೆ ‘ವಿಸಿಟ್‌ ಬ್ರಿಟನ್‌’, ರಾಷ್ಟ್ರದ ಎಲ್ಲಾ ಹೋಟೆಲ್‌ಗಳ ಮಾಲೀಕರಿಗೆ ಹೊರಡಿಸಿರುವ ಹೊಸ ಮಾರ್ಗದರ್ಶಿ ಸೂತ್ರದಲ್ಲಿ ಉಲ್ಲೇಖಿಸಿ­ರುವ ಅಂಶಗಳಿವು.

ಭಾಷಾ ಉಚ್ಚಾರಣಾ ಶೈಲಿಯಿಂದ ಭಾರತೀಯರನ್ನು ಹೀಯಾಳಿಸಬೇಡಿ ಎಂದೂ ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ.
ದೇಶದಲ್ಲಿ ಸಾಂಸ್ಕೃತಿಕ ನಿಯಮಗಳ ಉಲ್ಲಂಘನೆಯನ್ನು ತಡೆಯು­ವುದಕ್ಕಾಗಿ ‘ವಿಸಿಟ್‌ಬ್ರಿಟನ್‌’ ಈ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT