ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ನಿರ್ಮಾಣ್ ಕಾರ್ಯ ಶ್ಲಾಘನೀಯ

Last Updated 20 ಫೆಬ್ರುವರಿ 2012, 5:35 IST
ಅಕ್ಷರ ಗಾತ್ರ

ಮಲೇಬೆನ್ನೂರು: ಗ್ರಾಮೀಣ ಪ್ರದೇಶದ ಜನಕಲ್ಯಾಣಕ್ಕೆ ಸಹಕರಿಸುತ್ತಿರುವ ಭಾರತ್ ನಿರ್ಮಾಣ್ ಸ್ವಯಂ ಸೇವಕರ ನಿಸ್ವಾರ್ಥ ಸೇವಾ ಮನೋಭಾವ ಪ್ರಶಂಸನಾರ್ಹ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಹರ್ಷ ವ್ಯಕ್ತಪಡಿಸಿದರು.

ಸಮೀಪದ ಕೊಮಾರನಹಳ್ಳಿಯಲ್ಲಿ ಬುಧವಾರ `ಭಾರತ್ ನಿರ್ಮಾಣ್ ಸ್ವಯಂ ಸೇವಕರ ವಿಭಾಗೀಯ ಸಮಾವೇಶ~ಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಜನತೆ ಸಮಸ್ಯೆಗೆ ಸ್ಪಂದಿಸುತ್ತಿರುವುದು, ಪಾನ ನಿರೋಧ, ಪಡಿತರ ವ್ಯವಸ್ಥೆ ಸುಧಾರಣೆಗೆ ಪ್ರಯೋಗಿಕವಾಗಿ ಆಯ್ಕೆಯಾದ ಹರಿಹರ ತಾಲ್ಲೂಕಿನ 2 ತಂಡ ಕೇಂದ್ರ ಸರ್ಕಾರದ ಗ್ರಾಮ ರತ್ನ ಪ್ರಶಸ್ತಿ ಪಡೆದಿರುವುದು ತಮಗೂ ತಂಡ ಸೇರಲು ಪ್ರೇರೇಪಿಸಿದೆ ಎಂದರು.

ಹರಿಹರ ತಾಲ್ಲೂಕು ಪ್ರಾಯೋಗಿಕವಾಗಿ ಆಯ್ಕೆಯಾಗಿ ಉತ್ತಮ ಕೆಲಸ ಮಾಡಿ ದೇಶದ ಗಮನ ಸೆಳೆದಿದೆ. ಸ್ವಯಂ ಸೇವಕರು ಇನ್ನೂ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಿ ಎಂದು ಜಿ.ಪಂ ಸದಸ್ಯ ಟಿ.ಮುಕುಂದ ಹಾಗೂ ಸಿ.ಎನ್. ವೀರಭದ್ರಪ್ಪ ಸದಸ್ಯರಲ್ಲಿ ಕೋರಿದರು.

ತಾಲ್ಲೂಕು ಪಂಚಾಯ್ತಿ ಇಒ ಎಚ್.ಎನ್. ರಾಜು ಪ್ರಾಸ್ತಾವಿಕ ಮಾತನಾಡಿ, ತಾಲ್ಲೂಕಿನ 573 ಸದಸ್ಯರು ಈಗಾಗಲೇ ತರಬೇತಿ ಪಡೆದಿದ್ದಾರೆ. ಯೋಜನೆಗೆ ಹೊಸದಾಗಿ ಆಯ್ಕೆಯಾದ ಶ್ರಿರಂಗಪಟ್ಟಣ, ಕಾರ್ಕಳ ತಾಲ್ಲೂಕಿನಲ್ಲಿನ ಸದಸ್ಯರಿಗೆ ತರಬೇತಿ ನೀಡಲು 4 ಸದಸ್ಯರು ಹೋಗಿದ್ದಾರೆ. ಜಿ. ಬೇವಿನಹಳ್ಳಿ, ಯಳೆಹೊಳೆ ತಂಡ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದಿವೆ ಎಂಬ ಮಾಹಿತಿ ನೀಡಿದರು.

ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜಯರಾಮ್ ತರಬೇತಿ ನೀಡಿದರು.
ತಾ.ಪಂ. ಅಧ್ಯಕ್ಷೆ ಸರೋಜಮ್ಮ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ಅಣ್ಣೇಶ್ ಐರಣಿ,  ಸೋಮಸುಂದರಪ್ಪ, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಗ್ರಾ.ಪಂ. ಅಧ್ಯಕ್ಷೆ ಕೆಂಚಮ್ಮ, ಸದಸ್ಯರಾದ ಮಂಜುನಾಥ್, ಹನುಮಂತಪ್ಪ, ಗೀತಮ್ಮ, ಪರಮೇಶ್ವರಪ್ಪ, ರುದ್ರಪ್ಪ, ಇಂದೂಧರ್ ಜಿಗಳಿ, ವಿವಿಧ ಗ್ರಾ.ಪಂ ಪಿಡಿಒಗಳು ಹಾಗೂ ಕಾರ್ಯದರ್ಶಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT