ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಚಿತ್ರ, ಜೀವಮಾಪಕ ಸಂಗ್ರಹಕ್ಕೆ ಸೇವಾ ಕೇಂದ್ರ ಆರಂಭ

Last Updated 23 ಮೇ 2012, 6:20 IST
ಅಕ್ಷರ ಗಾತ್ರ

ಶಿವಮೊಗ್ಗ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿವಮೊಗ್ಗ ನಗರದ ಅನೌಪಚಾರಿಕ ಪಡಿತರ ಪ್ರದೇಶದ ವ್ಯಾಪ್ತಿಯಲ್ಲಿ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಕುಟುಂಬದ ಸದಸ್ಯರ ಭಾವಚಿತ್ರ ಮತ್ತು ಜೀವಮಾಪಕಗಳ ಸಂಗ್ರಹಕ್ಕಾಗಿ ನಗರ ವಿವಿಧ ಪ್ರದೇಶಗಳಲ್ಲಿ ಸೇವಾಕೇಂದ್ರಗಳನ್ನು ಗುರುತಿಸಿದೆ.

ಅರ್ಜಿದಾರರು ಸಂಪತ್‌ಕುಮಾರ್, ಭಾಗ್ಯಲಕ್ಷ್ಮೀ ಸೈಬರ್ ಪಾಯಿಂಟ್, ಕೆ.ಎಚ್.ಬಿ. ಕಾಲೊನಿ, ವಿನೋಬನಗರ ಮೊಬೈಲ್: 98447 74955, ಆರ್. ರೂಪೇಶ್, ವೆಬ್‌ಜೋನ್ ಟೆಕ್ನಾಲಜೀಸ್, ದುರ್ಗಿಗುಡಿ, ಮೊಬೈಲ್: 98447 18008, ಆರ್, ಅರುಣ್‌ಕುಮಾರ್, ನ್ಯೂ ಟ್ರೇಡ್ ಇನ್‌ಫೋಟೆಕ್ ಸೆಂಟರ್, ವಿಕಾಸ ಶಾಲೆ ಹತ್ತಿರ, ವಿನೋಬನಗರ, ಮೊಬೈಲ್: 98440 26403, ಮಂಜುನಾಥ, ಎಸ್.ಆರ್.ಆರ್.ಆರ್. ಕಂಪ್ಯೂಟರ್, ಕೆಂಚಪ್ಪ ಕಾಂಪ್ಲೆಕ್ಸ್ ದುರ್ಗಿಗುಡಿ, ಮೊಬೈಲ್: 99002 54360, ಎಂ.ಹರಿಪ್ರಸಾದ್ ಫ್ರೆಡ್ಸ್ ಕಮ್ಯೂನಿಕೇಷನ್ಸ್, ಎನ್.ಟಿ. ರಸ್ತೆ, ಆಂಜನೇಯ ದೇವಸ್ಥಾನ ಹತ್ತಿರ, ಮೊಬೈಲ್: 99162 78446, ಷಣ್ಮುಗಂ, ರೀತುನ್ ಕಮ್ಯೂನಿಕೇಷನ್ಸ್, ಸಹ್ಯಾದ್ರಿ ಕಾಲೇಜ್ ಎದುರು, ಮೊಬೈಲ್: 96860 51989, ಎಸ್. ಭರತ್, ಕಿಡ್ಸ್ ಕಂಪ್ಯೂಟರ್, ಪದ್ಮಾ ಟಾಕೀಸ್ ಹತ್ತಿರ, ಮೊಬೈಲ್:99645 87610, ಎಂ.ಜೆ.ಚನ್ನೇಶ್, ಶ್ರೀ ನಂದಿ ಅಸೋಸಿಯೇಟ್ಸ್, ನಳಂದ ಹೋಟೆಲ್ ಕೆಳಗೆ, ಜಯನಗರ, ಮೊಬೈಲ್: 91646 8900, ಕೆ.ಬಿ. ರುದ್ರೇಶ್, ರಚನಾ ಸೈಬರ್, ಗಾಂಧಿನಗರ, ಮೊಬೈಲ್: 89714 13437, ಸುಂದರರಾಜ್, ಬಾಲರಾಜ ಅರಸ್‌ರಸ್ತೆ, ಮೊಬೈಲ್: 98459 01201, ಹಾಗೂ ಸುನಿಲ್, ಶಬರಿ ಕನೆಕ್ಟ್, ಲಕ್ಷ್ಮೀ ಟಾಕೀಸ್ ಹತ್ತಿರ ಮೊಬೈಲ್: 99863 94360ನ್ನು ಸಂಪರ್ಕಿಸಬಹುದು.  
                                                                          
ನಗರ ಪ್ರದೇಶದಲ್ಲಿ ಬಿಪಿಎಲ್ ಪಡಿತರ ಚೀಟಿ ಅರ್ಜಿ ಸಲ್ಲಿಸಿದ ಕುಟುಂಬ ಮುಖ್ಯಸ್ಥರು ತಹಶೀಲ್ದಾರರಿಂದ ಆದಾಯ ದೃಢೀಕರಣ ಮತ್ತು ಸ್ವಯಂ ಘೋಷಣಾ ಪತ್ರವನ್ನು ಪಡೆದು ತಮ್ಮ ಮನೆಯ ಸಮೀಪದ ಸೇವಾ ಕೇಂದ್ರಕ್ಕೆ ನೀಡಬೇಕು. ಮಾಹಿತಿ ನೀಡಿದ ಕುಟುಂಬದ ಸದಸ್ಯರಿಗೆ ಮೊಬೈಲ್ ಮೂಲಕ ಭಾವಚಿತ್ರ ಮತ್ತು ಜೀವಮಾಪಕಗಳನ್ನು ಸೆರೆಹಿಡಿಯುವ ಬಗ್ಗೆ ಸಂದೇಶ ಕಳುಹಿಸಲಾಗುವುದು.

ಅರ್ಜಿದಾರರು ತಮ್ಮ ಮೊಬೈಲ್‌ಗೆ ಫೋಟೋ ತೆಗೆಸಿಕೊಳ್ಳಲು ಬಂದಿರುವ ಸಂದೇಶವನ್ನು ಅಳಿಸದೆ ಹಾಗೂ ಗೌಪ್ಯಸಂಖ್ಯೆಯನ್ನು ಇತರರಿಗೆ ತೋರಿಸದೆ ಗೌಪ್ಯ ಆಗಿಟ್ಟುಕೊಳ್ಳಬೇಕು. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಕುಟುಂಬದ ಮುಖ್ಯಸ್ಥರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT