ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಚಿತ್ರಕ್ಕೆ ಅವಮಾನ: ಪ್ರತಿಭಟನೆ

Last Updated 2 ಅಕ್ಟೋಬರ್ 2012, 5:15 IST
ಅಕ್ಷರ ಗಾತ್ರ

ಹಿರೇಕೆರೂರ: ಮೈಸೂರು ಜಿಲ್ಲೆ ಎಚ್. ಡಿ. ಕೋಟೆ ತಾಲ್ಲೂಕಿನ ಶಾಂತಿಪುರದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ಸಮಾಜದ ವಿವಿಧ ಸಂಘಟನೆಗಳಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕ, ವಾಲ್ಮೀಕಿ ಯುವಸೇನೆ ಹಾಗೂ ಏಕಲವ್ಯ ಬಳಗ ಸಮಾಜ ಬಾಂಧವರು ಸರ್ವಜ್ಞ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ತಹಸೀಲ್ದಾರ ಕಚೇರಿಯವರೆಗೆ ಬಂದು ತಹಸೀಲ್ದಾರ ಇಸ್ಮಾಯಿಲ್ ಶಿರಹಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಜಿ.ಎಚ್. ತಳವಾರ, ಆದಿ ಕವಿ, ರಾಮಾಯಣದ ಕತೃ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ಸಮಾಜ ಸಹಿಸಲಸಾಧ್ಯ. ಇದರಿಂದ ಸಮಾಜದ ಜನತೆಗೆ ನೋವಾಗಿದೆ. ಭಾವಚಿತ್ರಕ್ಕೆ ಅವಮಾನ ಮಾಡಿ ಕಿಡಿಗೇಡಿಗಳು ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾ.ಪಂ. ಸದಸ್ಯ ಚಂದ್ರು ಅಣ್ಣಪ್ಪನವರ, ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು; ಇಂಥ ಪ್ರಕರಣ ಮರುಕಳಿಸದಂತೆ ಜಾಗೃತಿ ವಹಿಸಬೇಕು ಎಂದರು.

ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಬಿ.ಬಿ. ಎಲ್ಲಕ್ಕನವರ, ಪಟ್ಟಣದ ಯುವಸೇನೆಯ ಅಧ್ಯಕ್ಷ ಬಸವರಾಜ ಕಟ್ಟೀಮನಿ, ತಾಲ್ಲೂಕು ಯುವಸೇನೆ ಅಧ್ಯಕ್ಷ ಬಸವರಾಜ ತಳವಾರ, ಕಾರ್ಯದರ್ಶಿ ಚನ್ನೇಶ ದೀವಿಗಿಹಳ್ಳಿ, ಚಂದ್ರಪ್ಪ ಮಾರವಳ್ಳಿ, ಮಾರುತಿ ಮಣಕೂರ, ರವಿ ನಾಯ್ಕರ, ಫಕ್ಕೀರಪ್ಪ ಕಲ್ಲೇರ, ಲಿಂಗರಾಜ ನಾಯ್ಕರ, ಫಕ್ಕೀರಪ್ಪ ಮೂಲೇರ, ಚಂದ್ರಪ್ಪ ಕೋಟಿಹಾಳ, ಗೋವಿಂದಪ್ಪ ವಾಲ್ಮೀಕಿ, ಮಲ್ಲೇಶಪ್ಪ ಕೋಟಿಹಾಳ, ಆನಂದ ನಾಯ್ಕರ, ಬಿ.ಎಚ್. ದೊಡ್ಡಮನಿ, ಸಂತೋಷ ನಿಂಗಮನಿ, ಮಂಜು ಕಾಂಬಳೆ, ಶಿವಾನಂದ ಅಳಲಗೇರಿ, ನಾರಾಯಣ ಬೆಳ್ಳೂರ, ದುರಗಪ್ಪ ದೊಡ್ಡತಳವಾರ, ಹೊನ್ನಪ್ಪ ಸಾಲಿ, ಹುಚ್ಚಪ್ಪ ಗೋಣೇರ, ರವಿ ಓಲೇಕಾರ, ರಮೇಶ ಜಂಬೂರ, ಭರಮಪ್ಪ ಬಾಲಣ್ಣನವರ, ಮಾರುತಿ ಕನವಳ್ಳಿ ಹಾಗೂ ಸಮಾಜದ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT