ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಭಾಷಾ ಪ್ರಶ್ನೆ ರಾಷ್ಟ್ರೀಯತೆ ಚಳವಳಿಯ ಅಂಗ'

Last Updated 9 ಏಪ್ರಿಲ್ 2013, 6:33 IST
ಅಕ್ಷರ ಗಾತ್ರ

ಬಳ್ಳಾರಿ: ಭಾರತೀಯ ಭಾಷಾ ಪ್ರಶ್ನೆಯು ರಾಷ್ಟ್ರೀಯತೆಯ ಚಳವಳಿಯ ಅವಿಭಾಜ್ಯ ಅಂಗವಾಗಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ರಾಬರ್ಟ್ ಜೋಸ್ ತಿಳಿಸಿದರು.

ವಿವಿಯ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ `ರಾಷ್ಟ್ರೀಯತೆಯ ಚರ್ಚೆಯೊಳಗಿನ ಭಾಷಾ ನಿರೂಪಣೆ' ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳು ಭಾರತದಲ್ಲಿ ಆಂಗ್ಲ ಭಾಷೆಯನ್ನು ಶಿಕ್ಷಣದ ಮಾಧ್ಯಮವನ್ನಾಗಿ ಜಾರಿಗೆ ತಂದರು. ಅದರಲ್ಲಿ ಮುಖ್ಯವಾಗಿ ಶ್ರೀಮಂತ ವರ್ಗ ಹಾಗೂ ಮದ್ಯಮ ವರ್ಗದ ಜನತೆ ಮಾತ್ರ ಈ ಸೌಲಭ್ಯವನ್ನು ಪಡೆದುಕೊಂಡರು ಎಂದು ಅವರು ತಿಳಿಸಿದರು.

ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ರಾಷ್ಟ್ರೀಯತೆಯ ಚಳವಳಿಯಿಂದ ವಸಾಹತು ಶಾಹಿ ವ್ಯವಸ್ಥೆಯ ವಿರುದ್ಧ ಮಾತ್ರವಲ್ಲದೆ, ಆಂತರಿಕವಾದ ಅಧಿಕಾರವನ್ನೂ ವಿರೋಧಿಸಲಾಗಿತ್ತು ಎಂದು ವಿವರಿಸಿದರು. ವಿವಿಯ ಕುಲಪತಿ ಡಾ. ಮಂಜಪ್ಪ ಹೊಸಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೌಲ್ಯಮಾಪನ ಕುಲಸಚಿವ  ಡಾ. ರಂಗರಾಜ್ ವನದುರ್ಗ, ಡಾ. ಕೆ. ವಿಜಯಕುಮಾರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜೆ. ಸೋಮಶೇಖರ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಂದ್ರಕುಮಾರ್, ಡಾ. ಬಸವರಾಜ್ ಬೆಣ್ಣಿ, ಡಾ. ರಾಜೇಂದ್ರಪ್ರಸಾದ್, ರಶ್ಮಿ, ನಿರ್ಮಲಾ, ಅರುಣಕುಮಾರ್, ರವಿನಾರಾಯಣ್, ಡಾ. ಶಾಂತನಾಯ್ಕ, ಪ್ರಶಾಂತ್, ಡಾ. ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು. ಡಾ. ಹೊನ್ನೂರ್‌ಅಲಿ ಸ್ವಾಗತಿಸಿದರು. ಡಾ. ಮೋಹನ್‌ದಾಸ್ ನಿರೂಪಿಸಿದರು, ಕೆ. ವಿಜಯ್‌ಕುಮಾರ್ ವಂದಿಸಿದರು. ವಿವಿಯ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT