ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಸಾಮರಸ್ಯ ಅಗತ್ಯ: ಸದಾನಂದ ಗೌಡ

Last Updated 26 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಮೂಡಿಗೆರೆ: ದೇಶದ ಸರ್ವಾಂಗಿಣ ಅಭಿವೃದ್ಧಿಗೆ ಉತ್ತಮ ಸಂಸ್ಕೃತಿ ಹಾಗೂ ಭಾಷಾ ಸಾಮರಸ್ಯ ಅಗತ್ಯವಾಗಿದ್ದು, ಸ್ನೇಹಪರರಾದ ತುಳುನಾಡಿಗರು ವಿಶ್ವದ ಎಲ್ಲೆಡೆ ತುಳುನಾಡ ಸಂಸ್ಕೃತಿ ಬೆಳೆಸಲು ಮುಂದಾಗಿ ಎಂದು ಸಂಸದ ಡಿ.ವಿ.ಸದಾನಂದ ಗೌಡ ಉತ್ತೇಜಿಸಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶನಿವಾರ ತಾಲ್ಲೂಕು ತುಳು ಒಕ್ಕೂಟ ಆಯೋಜಿಸಿದ್ದ, ತುಳು ವೈಭವ-2011 ಬೃಹತ್ ಕಾರ್ಯಕ್ರಮ ಉದ್ಘಾಟಿಸಿದ ಅವರು, ಜನ ಸಾಮರಸ್ಯದಿಂದ ಇದ್ದಾಗಲಷ್ಟೇ ದೇಶದ ಅಭಿವೃದ್ಧಿ ಸಾಧ್ಯ. ದೇಶದ ಪ್ರಗತಿಯಲ್ಲಿ ಭಾಷೆಯ ಪಾತ್ರವೂ ಮುಖ್ಯ. ತುಳುನಾಡಿಗರ ಆತ್ಮವಿಶ್ವಾಸದಿಂದ ಎಲ್ಲಾ ದೇಶಗಳಲ್ಲಿ ತುಳುಭಾಷೆ ಹರಡಿದೆ ಎಂದರು.

ಶಾಸಕ ಕುಮಾರಸ್ವಾಮಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು, ಒಕ್ಕೂಟದ ಅಧ್ಯಕ್ಷ ಕೇಶವ ಸುವರ್ಣ, ರಾಜ್ಯ ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮ ಅಧ್ಯಕ್ಷ ಪ್ರಾಣೇಶ್, ಕೋಮಾರ್ಕ್ ಅಧ್ಯಕ್ಷ ಸುಬ್ಬೇಗೌಡ, ತುಳು ಅಕಾಡೆಮಿ ಕಾರ್ಯದರ್ಶಿ ಚಂದ್ರಹಾಸ ರೈ, ಯದುಪತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಸೇಸಪ್ಪ ರೈ, ವಿಶ್ವನಾಥ್ ರೈ, ಅಶೋಕ್ ಶೆಟ್ಟಿ, ರಮೇಶ್ ಆಚಾರ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಾವೀದ್ ಹುಸೇನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜ್ಯೋತಿ, ಅರೇಕೊಡಿಗೆ ಶಿವಣ್ಣ, ಧರ್ಮಗುರು ಅಬ್ದುಲ್ ಅಜೀಜ್ ದಾರಿಮಿ, ಫಾ.ಲ್ಯಾನ್ಸಿ ಪಿಂಟೊ, ಕಾಫಿ ಬೆಳೆಗಾರ ಗಂಗಯ್ಯ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT