ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಬಗ್ಗೆ ಕೀಳರಿಮೆ ಬೇಡ

Last Updated 2 ನವೆಂಬರ್ 2011, 6:20 IST
ಅಕ್ಷರ ಗಾತ್ರ

ಶಿರಹಟ್ಟಿ: ನಮ್ಮ ಭಾಷೆ ಬಗ್ಗೆ ಕೀಳರಮೆ ಸಲ್ಲದು. ನಮ್ಮ ನೆಲ. ಜಲ, ಮತ್ತು ಸಂಸ್ಕ್ರತಿ ಅರಿವುನ್ನು ಬೆಳಸಿಕೊಳ್ಳಬೇಕು. ಭಾಷಾ ಅಭಿಮಾನದ ಬಗ್ಗೆ ನೆರೆ ರಾಜ್ಯಗಳಿಂದ ನಾವು  ಪಾಠ ಕಲಿಯ ಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಹೇಳಿದರು.

ಕನ್ನಡ ರಾಜ್ಯೋತ್ಸವ ಅಂಗವಾಗಿ ಮಂಗಳವಾರ ಶಿರಹಟ್ಟಿಯ ಜ.ಫಕೀರೇಶ್ವರ ಸಮುದಾಯ ಭವನ ದಲ್ಲಿ ಜರುಗಿದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಾವಿರಾರು ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿದೆ. ಕನ್ನಡ ಭಾಷೆ ಬಗ್ಗೆ ಪ್ರತಿ ಕನ್ನಡಿಗರಲ್ಲಿ ಅಭಿಮಾನ ಮೂಡಬೇಕು. ಕನ್ನಡದ ಕಂಪನ್ನು ಪಸರಿಸುವಲ್ಲಿ ಎಲ್ಲರ ಪಾತ್ರ ಮಹತ್ವವಾದದು ಎಂದರು.

ತಹಶೀಲ್ದಾರ್ ಆರ್.ಡಿ. ಉಪ್ಪಿನ ಮಾತನಾಡಿ, ಪ್ರತಿ ಇಲಾಖೆಗಳಲ್ಲಿ ಕಡತ ಗಳು ಕನ್ನಡಲ್ಲೆ ಇರಬೇಕು. ಆಡಳಿತ ಭಾಷೆ ಯಾದ ಕನ್ನಡವನ್ನು ಕಡ್ಡಾಯ ವಾಗಿ ಕಚೇರಿಗಳಲ್ಲಿ ಬಳಸಬೇಕು. ಕನ್ನಡ ಭಾಷೆ ಅಭಿವೃದ್ದಿಗಾಗಿ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕನ್ನಡ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳು ವುದರ ಮೂಲಕ ಜಾಗೃತಿ ಮುಡಿಸ ಬೇಕು ಎಂದು ಮನವಿ ಮಾಡಿದರು.

ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವ ಕಾರ್ಯ ಕನ್ನಡ ರಾಜ್ಯೋತ್ಸವ ದಿನದಂದು ಮಾತ್ರ ಆಗಬಾರದು. ಅದು ನಿರಂತರವಾಗಿರಬೇಕು ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಚ್.ಡಿ. ಮಾಗಡಿ ಹೇಳಿದರು.

ಕಡಕೋಳ ಕಾಲೇಜಿನ ಪ್ರಾಚಾರ್ಯ ಹೊಳೆಯಪ್ಪ ಯಲಬುರ್ಗಿ ಉಪನ್ಯಾಸ ನೀಡಿದರು.
ಶಾಸಕ ರಾಮಣ್ಣ ಲಮಾಣಿ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಯಲ್ಲಪ್ಪಗೌಡ್ರ ಅಣ್ಣಿಗೇರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ. ಡಾ.ಡಿ. ಮೋಹನ, ಈಶ್ವರ ಲಮಾಣಿ, ವೈ.ಎಸ್. ಪಾಟೀಲ, ಸಿಸಿಎನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ, ಅಶೋಕ ಮಡಿವಾಳರ, ಶೇಖಮ್ಮ ಮಜ್ಜಗಿ, ತಿಪ್ಪವ್ವ ತಳವಾರ, ಪ್ರಕಾಶ ಹಡಗಲಿ, ಎಂ.ಎನ್.ನಾಯಕ, ಬಿ.ಎನ್. ರಾಟಿ, ಪ.ಪಂ ಮುಖ್ಯಾಧಿಕಾರಿ ಬಿ.ಎಫ್. ಜಿಡ್ಡಿ, ಕೆ.ಎ. ಬಳಿಗೇರ, ಎಚ್.ಆರ್. ಬೆನಹಾಳ ಮತ್ತಿತರರು ಉಪಸ್ಥಿತರಿದ್ದರು.  

ಸಮಾರಂಭಕ್ಕೂ ಮುನ್ನ ಭುವನೇಶ್ವರ ಭಾವಚಿತ್ರಕ್ಕೆ ಶಾಸಕ ರಾಮಣ್ಣ ಲಮಾಣಿ ಪೂಜೆ ಸಲ್ಲಿಸುವದರ ಮೂಲಕ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿದ ಮೆರವಣಿಗೆ ಫಕೀರೇಶ್ವರ ಮಠದಲ್ಲಿ ಸಮಾರೋಪ ಗೊಂಡಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಅಂದಾನಪ್ಪ ವಡಗೇರಿ ಸ್ವಾಗತಿಸಿದರು. ಎಂ.ಕೆ. ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಸಮನ್ವಯಾಧಿಕಾರಿ ಕೆ.ಎ. ಬಳಿಗೇರ ವಂದಿಸಿದರು.

ಪಟ್ಟಣ ದ ವಿವಿಧ ಶಾಲೆಯ ಮಕ್ಕಳು ಧರಿಸಿದ್ದ ಜಗಜ್ಯೋತಿ ಬಸವೇಶ್ವರ, ಕಿತ್ತೂರು ಚನ್ನಮ್ಮ, ಟೀಪು ಸುಲ್ತಾನ್, ಒನಕೆ ಓಬವ್ವ, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಕುವೆಂಪು ಸೇರಿದಂತೆ ಹಲವಾರು ಸಾಹಿತಿಗಳ ವೇಷ ಭೂಷಣಗಳು ಸಾರ್ವಜನಿಕರ ಆಕರ್ಷಿಸಿದವು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT