ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಕಬಳಿಕೆ: ಡಿಎಂಕೆ ಮಾಜಿ ಸಚಿವ ಸೇರಿ ಐವರ ಬಂಧನ

Last Updated 4 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಈರೋಡ್/ತಮಿಳುನಾಡು(ಪಿಟಿಐ): ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮತ್ತು ಡಿಎಂಕೆ ಮುಖಂಡ ಎನ್.ಕೆ.ಕೆ.ಪಿ. ರಾಜಾ ಹಾಗೂ ಇತರೆ ನಾಲ್ವರನ್ನು ಗುರುವಾರ ಬಂಧಿಸಲಾಗಿದೆ.

ಭೂ ಕಬಳಿಕೆ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದ ಡಿಎಂಕೆ ಪಕ್ಷಕ್ಕೆ ಸೇರಿದ ಎರಡನೇ ಮುಖಂಡ ಇವರಾಗಿದ್ದು, ಜುಲೈ 30ರಂದು ವೀರಪಾಂಡಿ ಆರ‌್ಮುಗಂ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಕೈಮಗ್ಗ ಸಚಿವರಾಗಿದ್ದ ರಾಜಾ, ಈರೋಡ್ ಮಹಾನಗರ ಪಾಲಿಕೆ ಮೇಯರ್ ಕೆ.ಕುಮಾರ ಮುರುಗೇಶ್, ಡಿಎಂಕೆ ಜಿಲ್ಲಾ ಉಪ ಕಾರ್ಯದರ್ಶಿ ಒ.ಸಿ. ವಿಶ್ವನಾಥನ್, ಇವರ ಪುತ್ರರಾದ ರಾಜೇಂದ್ರನ್ ಮತ್ತು ಸುಬ್ರಮಣಿಯಮ್ ಅವರನ್ನು ವಿಶೇಷ ಪೊಲೀಸ್ ಪಡೆ ಗುರುವಾರ ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದೆ.

`2007ರಲ್ಲಿ ರಾಜಾ ಸೇರಿದಂತೆ 11 ಜನರು ತಮ್ಮ ಮನೆಗೆ ನುಗ್ಗಿ, ಥೆಂಡ್ರಾಲ್ ನಗರದಲ್ಲಿರುವ ನನಗೆ ಸೇರಿದ 60.5 ಎಕರೆ ಜಮೀನನ್ನು ಬಲವಂತವಾಗಿ ಬರೆಸಿಕೊಂಡಿದ್ದರು. ಮತ್ತು ಸುಬ್ರಮಣಿಯಮ್ ಎಂಬುವರಿಂದ ಸಾಲ ಪಡೆದು ಆತನಿಗೆ ನೀಡಿದ್ದರು. ಹಾಗೂ ನನಗೆ ಜಮೀನಿನ ಹಣ ಕೂಡ ಸಂದಾಯ ಮಾಡಿರಲಿಲ್ಲ~ ಎಂದು ರಾಮಸ್ವಾಮಿ ಎಂಬುವವರು ಕೆಲವು ದಿನಗಳ ಹಿಂದೆ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಜರುಗಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT