ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ: ಸೈನಿಕರಿಗೆ ಗಾಯ, ಸೇನಾ ಬಂಕರ್‌ಗೆ ಹಾನಿ

Last Updated 18 ಸೆಪ್ಟೆಂಬರ್ 2011, 17:15 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಭಾನುವಾರ ಸಂಜೆ ಸಂಭವಿಸಿದ ಭಾರಿ ಭೂಕಂಪದಿಂದಾಗಿ ಸಿಕ್ಕಿಂನಲ್ಲಿ ಸೇನಾ ಬಂಕರ್‌ಗಳಿಗೆ ಹಾನಿಯಾಗಿದ್ದು, ಹಲವು ಸೈನಿಕರು ಗಾಯಗೊಂಡಿದ್ದಾರೆ.

ಪೂರ್ವ ಸಿಕ್ಕಿಂನಲ್ಲಿನ ಭಾರತ-ಚೀನಾ ಗಡಿಯಲ್ಲಿ ನಿಯೋಜಿಸಲ್ಪಟ್ಟಿದ್ದ, ಸೇನಾ ಬಂಕರ್‌ಗಳು ಭೂಕಂಪಕ್ಕೆ ಸಿಕ್ಕು ಹಾನಿಗೀಡಾಗಿವೆ. ಇದರಲ್ಲಿದ್ದ ಹಲವಾರ ಸೈನಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ತಂಡ ಹೆಲಿಕಾಪ್ಟರ್‌ಗಳ ಮೂಲಕ ಗಾಯಗೊಂಡ ಸೈನಿಕರನ್ನು ರಕ್ಷಿಸಲು ತೊಡಗಿದ್ದಾರೆ. ಈ ಪ್ರದೇಶದಲ್ಲಿ ಸರಿಸುಮಾರು 2 ನಿಮಿಷಗಳ ಕಾಲ ಭೂಮಿ ನಡುಗಿತ್ತೆಂದು ತಿಳಿದುಬಂದಿದೆ.

ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT