ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತ, ಪ್ರೇತ ಕೇವಲ ಭ್ರಮೆ: ಡಾ.ಚಂದ್ರಶೇಖರ್

Last Updated 6 ಫೆಬ್ರುವರಿ 2011, 10:15 IST
ಅಕ್ಷರ ಗಾತ್ರ

ಪಾಂಡವಪುರ: ‘ಭೂತ, ಪ್ರೇತ ಕೇವಲ ಭ್ರಮೆಗಳಾಗಿದ್ದು, ಜನರು ತಮ್ಮ ಮಾನಸಿಕ ಭಯವನ್ನು ಬಿಟ್ಟು ನಿಶ್ಚಿಂತೆಯಿಂದ ಜೀವನ ನಡೆಸಿ. ಸತ್ತ ಮೇಲೆ ಉಳಿಯುವುದು ಶೂನ್ಯ’ ಎಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಮನೋ ವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅಭಿಪ್ರಾಯಪಟ್ಟರು.ಉಂಡಬತ್ತಿ ಕೆರೆ ದುರಂತದಲ್ಲಿ ದುರ್ಮರಣಕ್ಕೀಡಾಗಿದ್ದವರು ದೆವ್ವಗಳಾಗಿದ್ದಾರೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಶುಕ್ರವಾರ ನಡೆದ ‘ಆಕಸ್ಮಿಕ ಸಾವುಗಳು, ಮನಸ್ಸಿನ ಮೇಲಾಗುವ ಪರಿಣಾಮಗಳು ಮತ್ತು ಪರಿಹಾರ ಮಾರ್ಗಗಳು’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾವಿದ್ದಾಗ ದುಃಖ ಸಹಜವಾಗಿರುತ್ತದೆ. ಆದರೆ ಮಾನಸಿಕ ಅಸ್ವಸ್ಥರಾಗದೆ ಖಿನ್ನತೆಯನ್ನು ಬೆಳೆಸಿಕೊಳ್ಳಬೇಡಿ. ಕೆಲವು ದುರ್ಬಲ ಮನಸ್ಸುಗಳು ಸುಳ್ಳು ವದಂತಿಯನ್ನು ಹರಡುತ್ತವೆ.ಇದರಿಂದ ಅಧೈರ್ಯಗೊಳ್ಳದೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಮಾನಸಿಕ ಧೈರ್ಯ ಮತ್ತು ಸ್ಥೈರ್ವನ್ನು ಬೆಳೆಸಿಕೊಳ್ಳಿ’ ಎಂದರು.ತಮ್ಮ ಸಂಬಂಧಿಕರನ್ನು ಕಳೆದುಕೊಂಡು ದುಃಖ ತಪ್ತರಾಗಿರುವ ಕುಟುಂಬಗಳ ಕಷ್ಟ ಸುಖಗಳಿಗೆ ಊರಿನ ಜನ ಭಾಗಿಯಾಗಬೇಕು. ಮನಸ್ಸಿಗೆ ಸಾಂತ್ವನ ಹೇಳಿ ದೈನಂದಿನ ಚಟುವಟಿಕೆಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಹೇಳಿದ ಚಂದ್ರಶೇಖರ್, ಊರಿನ ಜನ ಒಟ್ಟಿಗೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ನೊಂದವರನ್ನು ಕ್ರೀಯಾಶೀಲರಾಗಿ ಮಾಡಬೇಕು ಎಂದರು.

ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಪ್ರೊ. ಸತ್ಯನಾರಾಯಣರಾವ್, ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ವಸುಂದರ ಭೂಪತಿ ಮಾತನಾಡಿದರು. ಜಿಪಂ ಸದಸ್ಯರಾದ ಎ.ಎಲ್.ಕೆಂಪೂಗೌಡ, ನಾಗೇಶ್ ಅರಳಕುಪ್ಪೆ, ಲೇಖಕ ಹರವು ದೇವೇಗೌಡ ಇದ್ದರು.ಮಂಡ್ಯ ಜಿಲ್ಲೆ ವಿಜ್ಞಾನ ವೇದಿಕೆಯ ಎಸ್.ಲೋಕೇಶ್ ಹಾಗೂ ಎನ್.ಮಹದೇವಪ್ಪ ತಂಡದವರಿಂದ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT