ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಪತಿ ಜೋಡಿಗೆ ಆಘಾತ

Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಮಹೇಶ್‌ ಭೂಪತಿ ಮತ್ತು ಸ್ವೀಡನ್‌ನ ರಾಬೆರ್ಟಾ ಲಿಂಡ್‌ಸ್ಟೆಟ್‌ ಥಾಯ್ಲೆಂಡ್‌ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ 6–2, 3–6, 8–10ರಲ್ಲಿ ಸ್ಪೇನ್‌ನ ಡೇನಿಯಲ್‌ ಗಿಮೆನೊ ಇಟಲಿಯ ಪವೊಲೊ ಲೊರ್ನೆಂಜಿ ಎದುರು ಸೋಲು ಕಂಡರು.

ಸೋಮದೇವ್‌ಗೆ ಸೋಲು: ಕ್ವಾಲಾಲಂಪುರದಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಸೋಮದೇವ್‌ ದೇವವರ್ಮನ್‌ ಮೊದಲ ಸುತ್ತಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ.

ಎಟಿಪಿ ಕ್ರಮಾಂಕದಲ್ಲಿ 98ನೇ ಸ್ಥಾನ ಹೊಂದಿರುವ ಸೋಮದೇವ್‌ 3–6, 3–6ರಲ್ಲಿ ತಮಗಿಂತ ಕಡಿಮೆ ಕ್ರಮಾಂಕದ ಇಟಲಿಯ ಮಾಟ್ಟೊಯೊ ವಿಯೊಲಾ ಎದುರು ಮುಗ್ಗರಿಸಿದರು. ಈ ಪಂದ್ಯ ಒಂದು ಗಂಟೆ 15 ನಿಮಿಷ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT