ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಗಿಂತ ಚಿಕ್ಕದಾದ ಗ್ರಹ ಪತ್ತೆ

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ನಮ್ಮ ಸೌರಮಂಡಲಕ್ಕೆ ಅತಿ ಹತ್ತಿರದಲ್ಲಿ ಭೂಮಿಗಿಂತ ಚಿಕ್ಕದಾದ ಹೊರಗ್ರಹವೊಂದನ್ನು ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಹೊರಗ್ರಹಗಳು ಸೌರಮಂಡಲದ ಹೊರಗೆ ಇತರ ನಕ್ಷತ್ರಗಳ ಸುತ್ತ ಪರಿಭ್ರಮಿಸುವ ಗ್ರಹಗಳು.

ಈ ಗ್ರಹಕ್ಕೆ `ಯುಸಿಎಫ್-1.01~ ಎಂದು ಹೆಸರಿಡಲಾಗಿದ್ದು, ಭೂಮಿಯಿಂದ 33 ಜ್ಯೋತಿರ್ವರ್ಷ ದೂರದಲ್ಲಿ ಈ ಆಕಾಶಕಾಯವಿದೆ. ಭೂಮಿಯ ಎರಡನೇ ಮೂರುಭಾಗದಷ್ಟಿರುವ ಈ ಗ್ರಹದ ವ್ಯಾಸ 8,400 ಕಿ.ಮೀ.ನಷ್ಟಿದೆ.

ಸೌರಮಂಡಲದ ಆಚೆ ನೂರಾರು ಹೊರಗ್ರಹಗಳು ಇದ್ದರೂ ಅವುಗಳಲ್ಲಿ ಬೆರಳೆಣಿಕೆಯಷ್ಟು ಗ್ರಹಗಳು ಮಾತ್ರ ಭೂಮಿಗಿಂತ ಚಿಕ್ಕದಾಗಿವೆ.  ಸ್ಪಿಟ್ಜರ್ ಸ್ಪೇಸ್ ಟೆಲಿಸ್ಕೋಪ್ ನೆರವಿನಿಂದ ಈ ಗ್ರಹ ಪತ್ತೆ ಹಚ್ಚಲಾಗಿದೆ ಎಂದು ವಿಜ್ಞಾನಿಗಳು   ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT