ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಗೆ ಅಪ್ಪಳಿಸಲಿರುವ ಜರ್ಮನಿಯ ಉಪಗ್ರಹ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಜರ್ಮನಿಗೆ ಸೇರಿದ 2.4 ಟನ್ ತೂಕದ ನಿಷ್ಕ್ರಿಯಗೊಂಡಿರುವ ಉಪಗ್ರಹ ಈ ವಾರ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಆದರೆ, ಎಲ್ಲಿ ಮತ್ತು ಯಾವಾಗ ಬೀಳಲಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ರೊಸ್ಯಾಟ್ ಹೆಸರಿನ ಈ ಉಪಗ್ರಹ ಅಕ್ಟೋಬರ್ 21ರಿಂದ 25ರ ಮಧ್ಯದಲ್ಲಿ ಬೀಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.ವಿಕಿರಣ ಅಳೆಯುವ ಉದ್ದೇಶದಿಂದ ಬಿಡಲಾಗಿದ್ದ ಈ ಉಪಗ್ರಹವು ಭೂಮಿಯ ವಾತಾವರಣಕ್ಕೆ ಬರುತ್ತಿದ್ದಂತೆ ಇದರ ಈಗಿರುವ 2.4 ಟನ್ ಭಾರದಿಂದ 1.7 ಟನ್‌ಗೆ ಇಳಿಯಲಿದೆ.

ಅಲ್ಲದೆ ಉಷ್ಣ ಹೆಚ್ಚಾಗಿ ಇದರ 30 ಬೃಹತ್ ಗಾತ್ರದ ಗಾಜು ಮತ್ತು ಇತರೆ ವಸ್ತುಗಳು ಪುಡಿಪುಡಿಯಾಗಿ ಧರೆಗೆ ಅಪ್ಪಳಿಸಲಿವೆ ಎಂದು ಜರ್ಮನಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

`ಗಾಜು ಮತ್ತು ಇತರೆ ವಸ್ತುಗಳನ್ನು ಹೊರತುಪಡಿಸಿದರೆ ದೊಡ್ಡ ಗಾತ್ರದ ವಸ್ತುಗಳು ಉಪಗ್ರಹಗಳೊಂದಿಗೆ ಬೀಳುವ ಸಾಧ್ಯತೆ ತೀರಾ ಕಡಿಮೆ~ ಎಂದು ಜರ್ಮನಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥ ಜನ್ ವಾರ್ನರ್ ತಿಳಿಸಿದ್ದಾರೆ.ಸೆಪ್ಟೆಂಬರ್ ಅಂತ್ಯದಲ್ಲಿ ನಾಸಾಗೆ ಸೇರಿದ ಉಪಗ್ರಹವೊಂದು ಪೆಸಿಫಿಕ್ ಸಾಗರಕ್ಕೆ ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT