ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಷಣ ನಾಯ್ಕಗೆ ಟೋಪಿ!

ಐಷಾರಾಮಿ ಕಾರು ಮಾಲೀಕನಿಗೆ `ರಿಕ್ಷಾ'
Last Updated 22 ಏಪ್ರಿಲ್ 2013, 7:07 IST
ಅಕ್ಷರ ಗಾತ್ರ

ಕಾರವಾರ: ಟೋಪಿ, ಡಿಸೇಲ್ ಪಂಪ್, ಸಿಲಿಂಗ್ ಫ್ಯಾನ್, ಬ್ಯಾಟುಗಾರ, ಬ್ಯಾಟ್, ಆನೆ, ಆಟೋ ರಿಕ್ಷಾ, ಹೊಲಿಗೆ ಯಂತ್ರ, ಟೆಲಿವಿಷನ್, ಟೆಬಲ್. ಇವು ಯಾವುದೋ ವಸ್ತು ಪ್ರದರ್ಶನದಲ್ಲಿ ಮಾರಾಟಕ್ಕಿರುವ ವಸ್ತುಗಳಲ್ಲ. ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ನೀಡಿರುವ ಚಿಹ್ನೆ.

ವಿವಿಧ ಕ್ಷೇತ್ರಗಳ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ನೀಡಿರುವ ಚಿಹ್ನೆ ಇಂತಿವೆ:
ಕುಮಟಾ ವಿಧಾನಸಭಾ ಕ್ಷೇತ್ರ:
ಹಿಂದೂಸ್ತಾನ ನಿರ್ಮಾಣ ದಳದಿಂದ ಸ್ಪರ್ಧಿಸಿರುವ  ನಾಗರಾಜ ಶೇಟ ಅವರಿಗೆ ಟೋಪಿ, ಅಶೋಕ ಮಡಿವಾಳ - ಅಟೋ ರಿಕ್ಷಾ, ಮಹಾಬಲೇಶ್ವರ ಭಟ್ಟ ಮದ್ಗುಣಿ- ಡಿಸೇಲ್ ಪಂಪ್ ಹಾಗೂ ಮೋಹನ ಪಟಗಾರ ಅವರಿಗೆ ಬ್ಯಾಟುಗಾರ ಚಿಹ್ನೆಯನ್ನು  ಚುನಾವಣಾ ಆಯೋಗ ನೀಡಿದೆ.

ಕಾರವಾರ-ಅಂಕೋಲಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉದಯ ಖಾಲ್ವಾಡೇಕರ್ ಅವರಿಗೆ ಬಕೆಟ್, ದೀಪಕ ಕುಡಾಳಕರ ಅವರಿಗೆ ಟೇಬಲ್ ಲ್ಯಾಂಪ್, ಸತೀಶ ಉಳ್ವೇಕರ ಅವರಿಗೆ ಬ್ಯಾಟರಿ ಟಾರ್ಚ್, ಸುಭಾಷ ನಾಯ್ಕಪ-ಅಲಮಾರು, ಶ್ರೀಕಾಂತ ಸೈಲ್- ಕ್ಯಾಮೆರಾ, ಸಂಜಯ ನಾಯ್ಕ-ಟೇಬಲ್ ಮತ್ತು ಸತೀಶ ಸೈಲ ಅವರಿಗೆ ಅಟೋ ರಿಕ್ಷಾದ ಚಿಹ್ನೆಯನ್ನು ಆಯೋಗ ನೀಡಿದೆ.

ಹಳಿಯಾಳ- ಜೊಯಿಡಾ ಕ್ಷೇತ್ರ:ಇಂದಿರಾ ನಿಂಬಾಳ ಅವರಿಗೆ ಲೇಡಿಸ್ ಪರ್ಸ್, ಉದಯ ಖಾಲ್ವೇಡೇಕರ್- ಬಾಟಲ್, ಎಲಿಯಾ ಕಾಟಿ- ಅಟೋ ರಿಕ್ಷಾ, ಚಂದ್ರಕಾಂತ ಕಾದ್ರೋಳ್ಳಿ- ಕ್ಯಾಮೆರಾ, ಜಹಾಂಗೀರ್ ಬಾಬುಖಾನ್-ಕಪ್ಪು ಹಲಗೆ, ಪ್ರೇಮಾನಂದ ಗವಸ- ಡಿಸೇಲ್ ಪಂಪ್, ವಿ.ಬಿ. ರಾಮಚಂದ್ರ-ಬ್ಯಾಟುಗಾರ ಹಾಗೂ ಶಿವಾನಂದ ಗಗ್ಗರಿ ಅವರಿಗೆ ಬ್ಯಾಟ್ ಚಿಹ್ನೆಯನ್ನು ಆಯೋಗ ನೀಡಿದೆ.

ಭಟ್ಕಳ ಕ್ಷೇತ್ರ:ಕುಮಾರ ನಾಗಪ್ಪ ಹೆಬಳೆ ಅವರಿಗೆ ಆಟೋ ರಿಕ್ಷಾ, ಭೂಷಣ ನಾಯ್ಕ-ಟೋಪಿ, ಮುಲ್ಲಾ ನದೀಮ್ ಅಹ್ಮದ್-ಗಾಳಿಪಟ ಹಾಗೂ ಮಂಕಾಳ ವೈದ್ಯ-ಗ್ಯಾಸ್ ಸಿಲಿಂಡರ್ ಚಿಹ್ನೆ ನೀಡಲಾಗಿದೆ.

ಶಿರಸಿ-ಸಿದ್ದಾಪುರ ಕ್ಷೇತ್ರ:ಅಣ್ಣಪ್ಪ ಆಕಾಶ್ ಮಡಿವಾಳ್ ಅವರಿಗೆ ಚುನಾವಣಾ ಆಯೋಗ ಹೊಲಿಗೆ ಯಂತ್ರದ ಚಿಹ್ನೆಯನ್ನು ಆಯೋಗ ನೀಡಿದೆ.

ಯಲ್ಲಾಪುರ-ಮುಂಡಗೋಡ: ಉಮಾಕಾಂತ್ ಕ್ಷತ್ರಿಯ ಅವರಿಗೆ ಟೆಲಿಫೋನ್, ಗಣೇಶ ಪಾಟಣಕರ್-ಆಟೋ ರಿಕ್ಷಾ, ಸಂಗಮೇಶ ಬಿದರಿ- ಬ್ಯಾಟ್, ವೆಂಟ್ರಮಣ ಭಾಗ್ವತ- ಡಿಸೇಲ್ ಪಂಪ್, ಗಣೇಶ ಭಂಡಾರಕರ್-ಟೇಬಲ್, ಮಾರುತಿ ಕರಾಂಡೆ- ಟೆಲಿವಿಷನ್ ಚಿಹ್ನೆಯನ್ನು ಆಯೋಗ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT