ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋಗೇಶ್ವರ ದೇವಸ್ಥಾನ, ಕೆರೆ ಅಭಿವೃದ್ಧಿಗೆ ರೂ.30 ಲಕ್ಷ

Last Updated 27 ಸೆಪ್ಟೆಂಬರ್ 2011, 8:40 IST
ಅಕ್ಷರ ಗಾತ್ರ

ಕೆಂಭಾವಿ: ಸಚಿವರಾದ ಮೇಲೆ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜುಗೌಡ) ಅವರನ್ನು ಭೋಗೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಕೆಂಭಾವಿ ಗ್ರಾಮ ಘಟಕ ಹಾಗೂ ಭೋಗೇಶ್ವರ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ರಾಜುಗೌಡ, ಭೋಗೇಶ್ವರ ದೇವಸ್ಥಾನ ತುಂಬಾ ಪುರಾತನವಾಗಿದ್ದು, ಇದಕ್ಕೆ ದೊಡ್ಡ ಇತಿಹಾಸವೇ ಇದೆ. ನಮ್ಮ ತಾಲ್ಲೂಕಿನಲ್ಲಿ ಇಂತಹ ದೇವಸ್ಥಾನ ಇರುವುದೇ ನಮಗೆ ಹೆಮ್ಮೆಯ ವಿಷಯ.

ಈ ದೇವಸ್ಥಾನದ ಅಭಿವೃದ್ಧಿ ಹಾಗೂ ಭೋಗೇಶ್ವರ ಕೆರೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಪ್ಯಾಕೇಜ್‌ನಲ್ಲಿ ಈಗಾಗಲೇ ರೂ.30 ಲಕ್ಷ ನೀಡಲಾಗಿದೆ. ಟೆಂಡರ್ ಕೂಡಾ ಕರೆಯಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.

ಬಿಜೆಪಿ ಕೆಂಭಾವಿ ಘಟಕದ ವತಿಯಿಂದ ಸಚಿವರನ್ನು, ಅಶೋಕ ಸೊನ್ನದ ಸನ್ಮಾನಿಸಿದರು. ಜಿಲ್ಲಾ ಪಂಚಾಯಿತಿ ಪ್ರತಿಪಕ್ಷದ ನಾಯಕ ಎಚ್.ಸಿ. ಪಾಟೀಲ, ರಾಜಾ ಹನುಮಪ್ಪ ನಾಯಕ, ಸುಧಾಕರ ಡಿಗ್ಗಾವಿ, ರವಿ ಸೊನ್ನದ, ಸುಮಿತ್ರಪ್ಪ ಅಂಗಡಿ, ಮೋಹನರಡ್ಡಿ ಡಿಗ್ಗಾವಿ, ರಾಜು ಮುತ್ಯಾ, ಚನ್ನಯ್ಯಸ್ವಾಮಿ, ಶರಣಪ್ಪ ಬಂಡೊಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಗುರುಮೂರ್ತಿ ಪತ್ತಾರ, ಪ್ರಕಾಶ ಸೊನ್ನದ, ಸಂಗಣ್ಣ ತುಂಬಗಿ, ತಾಹೇರಹುಸೇನ್ ಖಾಜಿ, ಬಸವಣ್ಣೆಪ್ಪ, ಡಾ. ರವಿ ಅಂಗಡಿ, ಕರವೇ ಅಧ್ಯಕ್ಷ ಭೀಮನಗೌಡ ಕಾಚಾಪುರ, ಶಮಶುದ್ಧಿನ್ ಕಲಿಫಾ, ಮಲ್ಲು ಸೊನ್ನದ, ಮುದಕಣ್ಣ ಚಿಂಚೊಳ್ಳಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT