ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋಪಾಲ್ ದುರಂತ: ಸಂತ್ರಸ್ತರಿಂದ ಸಂಸತ್ ಮುಂದೆ ಪ್ರತಿಭಟನೆ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೂಕ್ತ ಪರಿಹಾರ, ಸರಿಯಾದ ಚಿಕಿತ್ಸೆ, ಪುನರ್ವಸತಿ ಸೇರಿ­ದಂತೆ ಹಲವು ಬೇಡಿಕೆಗಳನ್ನು ಈಡೇರಿ­ಸು­ವಂತೆ ಒತ್ತಾಯಿಸಿ ಭೋಪಾಲ್‌ ಅನಿಲ ದುರಂತದ ಸಂತ್ರಸ್ತರು ಬುಧವಾರ ಸಂಸತ್­ ಮುಂದೆ ಪ್ರತಿಭಟನೆ ನಡೆಸಿದರು.

ಸಿಪಿಐ (ಎಂ) ನಾಯಕ ಬಸುದೇವ್‌ ಆಚಾರ್ಯ ಹಾಗೂ ‘ಭೋಪಾಲ್ ಅನಿಲ ದುರಂತ ಸಂತ್ರಸ್ತರ ಪರ ಹೋರಾಟ ಸಮಿತಿ’ಯ ಸಂಚಾಲಕ ಸಾದ್ನ ಕಾರ್ಣಿಕ್ ನೇತೃತ್ವದಲ್ಲಿ ಪ್ರತಿ­ಭಟನೆ ನಡೆಯಿತು. ನಂತರ, 11 ಬೇಡಿಕೆ­ಗಳನ್ನೊಳಗೊಂಡ ಮನವಿ ಪತ್ರವನ್ನು ಸಂತ್ರಸ್ತರ ನಿಯೋಗವು ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಿತು.

‘ದುರಂತದಲ್ಲಿ ಸಂತ್ರಸ್ತರಾದ 5 ಲಕ್ಷ ಹಾಗೂ ಮಡಿದ 50 ಸಾವಿರ ಜನರ ಕುಟುಂಬಗಳಿಗೆ ತಲಾ ₨ 10 ಲಕ್ಷ ಪರಿಹಾರ, ಜೀವನ ಪರ್ಯಂತ ₨ 500  ಪಿಂಚಣಿ, ಉದ್ಯೋಗ, ಪುನರ್ವಸತಿ, ಸೂಕ್ತ ಚಿಕಿತ್ಸೆ, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ದುರಂತಕ್ಕೆ ಯೂನಿ­ಯನ್ ಕಾರ್ಬೈಡ್ ಕಂಪೆನಿ ಹಾಗೂ ಡೌ ಕಂಪೆನಿಗಳನ್ನು ಹೊಣೆಗಾರರನ್ನಾಗಿ ಮಾಡು­­ವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆಯಬೇಕು’ ಎಂಬ ಒತ್ತಾಯ ಸೇರಿದಂತೆ ಹಲವು ಬೇಡಿಕೆಗಳನ್ನು ಪತ್ರ ಒಳಗೊಂಡಿದೆ.

ಅಲ್ಲದೆ, ‘ದೇಶವನ್ನೇ ತಲ್ಲಣಗೊಳಿಸಿದ ಈ ದುರಂತದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಘಟನೆ­ಯಲ್ಲಿ ಕೇವಲ 5,295 ಜನ ಮಾತ್ರ ಸತ್ತಿದ್ದಾರೆ ಎಂದು ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿವೆ’ ಎಂದು ಪತ್ರದಲ್ಲಿ ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT