ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಕುರಿತು ಮಾತನಾಡಲು ಪ್ರಧಾನಿಗೆ ನೈತಿಕ ಅಧಿಕಾರವಿಲ್ಲ - ಬಿಜೆಪಿ

Last Updated 11 ಅಕ್ಟೋಬರ್ 2012, 10:05 IST
ಅಕ್ಷರ ಗಾತ್ರ

ಪಣಜಿ (ಐಎಎನ್‌ಎಸ್): ಸ್ವತಃ ಕಲಿದ್ದಲು ಗಣಿ ಹಗರಣದಲ್ಲಿ ಸಿಲುಕಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭ್ರಷ್ಟಾಚಾರ ಕುರಿತಂತೆ ಮಾತನಾಡಲು ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಢಿ ಗುರುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ರೂಢಿ ಅವರು ~ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಅವರು ಮಾಡಿರುವ ಅವ್ಯವಹಾರ ಆರೋಪಗಳ ಕುರಿತು ತನಿಖೆಗೆ ನಡೆಸಲಿ~ ಎಂದು ಆಗ್ರಹಿಸಿದರು.

`ಸಿಬಿಐ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವ ಸಮಯದಲ್ಲಿ (ಬುಧವಾರ) ಪ್ರಧಾನಿಯವರು ಭ್ರಷ್ಟಾಚಾರ ವಿರೋಧಿ ಕಾನೂನಿನ ವಿಸ್ತಾರವು ಖಾಸಗಿ ವ್ಯಕ್ತಿಗಳಿಗೂ ಸಹ ವಿಸ್ತರಿಸುವ ಮಾತನಾಡಿದ್ದಾರೆ. ಅವರು ಸ್ವತಃ ಕಲಿದ್ದಲು ಹಗರಣದಲ್ಲಿ ಭಾಗವಹಿಸಿರುವುದರಿಂದ ಭ್ರಷ್ಟಾಚಾರ ಕುರಿತಂತೆ ಮಾತನಾಡಲು ಅವರಿಗೆ ಯಾವುದೇ ನೈತಿಕ ಅಧಿಕಾರವಿಲ್ಲ~ ಎಂದು ಹೇಳಿದರು.

ಪ್ರಧಾನಿ ಅವರು ಖಾಸಗಿ ವಲಯಗಳನ್ನು ಕೂಡ ಭ್ರಷ್ಟಾಚಾರ ಕಾನೂನಿನಡಿ ಎಳೆತರಲು ಒತ್ತು ನೀಡಬೇಕು ಎಂದಿದ್ದಾರೆ. ಆದ್ದರಿಂದ ಲಂಚ `ಪೂರೈಕೆ ಬದಿ~ಯನ್ನು ಗಣನೆಗೆ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.

ವಾದ್ರಾ ವಿರುದ್ಧದ ಕೇಜ್ರಿವಾಲ್ ಅವರ ಆರೋಪ ಕುರಿತಾದ ಪ್ರಶ್ನೆಗೆ ಉತ್ತರಿಸಿದ ರೂಢಿ `(ಅವರನ್ನು) ಸಂಪೂರ್ಣ ತನಿಖೆಗೆ ಒಳಪಡಿಸುವ ಅಗತ್ಯವಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT