ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ದೂರು: ರೈಲ್ವೆ ಗೆ ಅಗ್ರಸ್ಥಾನ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಭ್ರಷ್ಟಾಚಾರ ಮತ್ತು ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ವಿರುದ್ಧ ಅತಿ ಹೆಚ್ಚು ದೂರುಗಳು ಬರುತ್ತವೆ ಎಂದು ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಹೇಳಿದೆ.

2010ರಲ್ಲಿ ಸ್ವೀಕರಿಸಿದ ಒಟ್ಟು 25,359 ದೂರುಗಳ ಪೈಕಿ 8,330 ದೂರುಗಳು ರೈಲ್ವೆ ಇಲಾಖೆಗೆ ಸಂಬಂಧಿಸಿದವು. ಬ್ಯಾಂಕಿಂಗ್ ಕ್ಷೇತ್ರದಿಂದ 6,520, ದೂರಸಂಚಾರ ಇಲಾಖೆಯಿಂದ 1,572 ಮತ್ತು ಪೆಟ್ರೋಲಿಯಂ ಇಲಾಖೆ ವಿರುದ್ಧ 1,836 ದೂರುಗಳು ದಾಖಲಾಗಿವೆ ಎಂದು ಸಿವಿಸಿ ತಿಳಿಸಿದೆ.

ಅಬಕಾರಿ ಮತ್ತು ಸುಂಕ ಇಲಾಖೆ ವಿರುದ್ಧ 1,317, ಉಕ್ಕು ಸಚಿವಾಲಯದ ಸಿಬ್ಬಂದಿ ವಿರುದ್ಧ 1,105 , ಕಲ್ಲಿದ್ದಲು ಸಚಿವಾಲಯದ ವಿರುದ್ಧ 1,106 ಮತ್ತು ದೆಹಲಿ ಸರ್ಕಾರಿ ನೌಕರರ ವಿರುದ್ಧ 693 ದೂರುಗಳು ಬಂದಿವೆ ಎಂದು ಸಿವಿಸಿ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT