ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಭ್ರಷ್ಟಾಚಾರ ನಿರ್ಮೂಲನೆ ಮಕ್ಕಳ ಪಕ್ಷದ ಉದ್ದೇಶ'

Last Updated 13 ಏಪ್ರಿಲ್ 2013, 6:48 IST
ಅಕ್ಷರ ಗಾತ್ರ

ಚಿಟಗುಪ್ಪಾ: ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉದ್ದೇಶದಿಂದ ಕರ್ನಾಟಕ ಮಕ್ಕಳ ಪಕ್ಷ ಸ್ಥಾಪಿಸಿದ್ದೇನೆ ಎಂದು ನೈಸ್ ಮುಖ್ಯಸ್ಥ ಅಶೋಕ ಖೇಣಿ ಹೇಳಿದ್ದಾರೆ.

ಶುಕ್ರವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಸಂಜಯಖೇಣಿ, ಹಲವು ಬೆಂಬಲಿಗರು ಹಾಗೂ ಹಲವು ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಅಧಿಕೃತವಾಗಿ ಮಕ್ಕಳ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ 30 ಅಭ್ಯರ್ಥಿಗಳು ಮಕ್ಕಳ ಪಕ್ಷದಿಂದ ಕಣದಲ್ಲಿ ಸ್ಪರ್ಧಿಸುತ್ತಿದ್ದು, ಜಿಲ್ಲೆಯ ಔರಾದ್, ಬಸವ ಕಲ್ಯಾಣ, ಬೀದರ ದಕ್ಷಿಣ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.ಜನರ ಜೀವನ ಮಟ್ಟ ಸುಧಾರಿಸಲು, ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಅಧಿಕಾರದ ಸ್ಥಾನ ಬೇಕಾಗಿರುವುದರಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿದ್ದು, ಶಾಸಕನಾಗಿ ವಿಜೇತನಾದಲ್ಲಿ ಕೇವಲ 2 ವರ್ಷದಲ್ಲಿ ಬೀದರ ದಕ್ಷಿಣ ಕ್ಷೇತ್ರದ ಪ್ರಗತಿ ರಾಜ್ಯಕ್ಕೆ ಮಾದರಿ ಆಗುವಂತೆ ಪ್ರಗತಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ನುಡಿದರು.

ರಾಜ್ಯಾದ್ಯಂತ ನಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಜನ ಬೆಂಬಲ ಮಕ್ಕಳ ಪಕ್ಷಕ್ಕೆ ಲಭಿಸುತ್ತಿದ್ದು, ಜಿಲ್ಲೆಯಲ್ಲಿಯ ರಾಜಕೀಯ ನಾಯಕರಿಗೆ ಸ್ವಯಂ ಅಭಿವೃದ್ಧಿ ಮಾಡಲು ಸಾಧ್ಯವಾಗಲಾರದಕ್ಕೆ ಜಾತಿಯ ಬಣ್ಣ ನಮಗೆ ಹಚ್ಚುತ್ತಿದ್ದಾರೆ ಎಂದು ಆರೋಪಿಸಿದ ಅವರು ಮಕ್ಕಳ ಪಕ್ಷ ಜಾತಿ ಮತಗಳೆನ್ನದೆ ರಾಜ್ಯದ 6 ಕೋಟಿ ಕನ್ನಡಿಗರ ಪಕ್ಷವಾಗಿದೆ ಬರುವ ಏ 17ಕ್ಕೆ ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಅಧಿಕೃತವಾಗಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.

ರಾಜು ಕಡ್ಯಾಳ್, ರಾಜಕುಮಾರ ಪಸಾರೆ, ಶಿವರಾಜ್ ಕಲ್ಲಪ್ಪ ನೀಲಾ, ಸಂತೋಷ ಹಳ್ಳಿಖೇಡ್, ಅಶೋಕರೆಡ್ಡಿ ಘಾಳೆ, ಗುರುನಾಥ ರಾಜಗೀರಾ, ಕಾಶಿನಾಥ ಸಲಗರ್, ಸುರೇಖಾ ಸಲಗರ್, ನಾರಾಯಣರೆಡ್ಡಿ ಬಿರಾದಾರ್ ಮಂಗಲಗಿ ಮತ್ತಿತರರು ಮಕ್ಕಳ ಪಕ್ಷಕ್ಕೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT