ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ನಿರ್ಮೂಲನೆ ಯುವಶಕ್ತಿಯಿಂದ ಸಾಧ್ಯ

Last Updated 13 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ರಾಯಚೂರು: ದೇಶಾದ್ಯಂತ ವ್ಯಾಪಿಸಿರುವ ಭ್ರಷ್ಟಾಚಾರ ನಿರ್ಮೂಲನೆ ಯಾವುದೇ ತಂತ್ರಜ್ಞಾನದಿಂದ ಸಾಧ್ಯವಾಗುವುದಿಲ್ಲ. ಬದಲಾಗಿ ಯುವಶಕ್ತಿಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕಾಶೀರಾವ್ ಪಾಟೀಲ್ ತಿಳಿಸಿದರು.ಇಲ್ಲಿನ ಸರ್ಕಾರಿ ನೌಕರರ ಸಭಾಭವನದಲ್ಲಿ ಕರ್ನಾಟಕ ಜನ ಜಾಗೃತಿ ಸಮಿತಿಯು ಭಾನುವಾರ  ಆಯೋಜಿಸಿದ್ದ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಭ್ರಷ್ಟಾಚಾರದ ವಿರುದ್ಧ ಒಂದೆಡೆ ಜನಜಾಗೃತಿ ಹಾಗೂ ಮತ್ತೊಂದೆಡೆ ಹೋರಾಟ ನಡೆಸುತ್ತ ಬರಲಾಗಿದೆ. ಆದರೆ, ಇಂಥ ಹೋರಾಟಗಳಿಗೆ ಮುಂದಾಳತ್ವ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಇರುವುದು ವಿಪರ್ಯಾಸ ಎಂದು ಕಳವಳ ವ್ಯಕ್ತಪಡಿಸಿದರು.

ಡಾ.ಟಿ.ಎಸ್ ಸುನೀತ್‌ಕುಮಾರ ಮಾತನಾಡಿದರು. ಡಾ.ವಿಠಲ ಉದಗಟ್ಟಿ, ಡಾ. ವಿ.ಎ ಮಾಲಿಪಾಟೀಲ್, ಟಿ.ಆರ್ ರಾವ್, ದುರ್ಗಾ ಪ್ರಸಾದ, ಪಿ.ಎಸ್ ಹಿರೇಮಠ ಮಾತನಾಡಿದರು. ಎನ್.ಎಸ್.ವೀರೇಶ ಅಧ್ಯಕ್ಷತೆವಹಿಸಿದ್ದರು. ರಾಮಣ್ಣ,ಅಶೋಕ ಪ್ಯಾಟಿ, ಬಿ.ಆರ್ ಅಪರ್ಣ, ರಾಮಣ್ಣ, ಸಿ.ಮಹೇಶ, ಚನ್ನಬಸವ ಜಾನೇಕಲ್, ಶರಣಬಸವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT