ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಭ್ರಷ್ಟಾಚಾರ ಮುಕ್ತ ನಗರಕ್ಕೆ ಜೆಡಿಎಸ್ ಬೆಂಬಲಿಸಿ'

Last Updated 25 ಏಪ್ರಿಲ್ 2013, 6:28 IST
ಅಕ್ಷರ ಗಾತ್ರ

ವಿಜಾಪುರ: `ಹಣ-ಹೆಂಡ ಹಂಚುವ ಮೂಲಕ ಹೇಗೂ ಗೆಲ್ಲಬಹುದು ಎಂದು ಹೇಳುತ್ತ ಮತದಾರರ ಸ್ವಾಭಿಮಾನವನ್ನು ಕೆಣಕುವುದು ಬೇಡ' ಎಂದು ಜೆಡಿಎಸ್ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿಯ ದಿವಟಗೇರಿ ಗಲ್ಲಿ, ಗೋಪಾಳಪೂರ ಗಲ್ಲಿಯಲ್ಲಿ ಮನೆ ಮನೆ ತೆರಳಿ ಪ್ರಚಾರ ನಡೆಸಿ ಮಾತನಾಡಿದರು.`ಕಳೆದ 10 ವರ್ಷಗಳಲ್ಲಿ ವಿಜಾಪುರ ನಗರದ ಅಭಿವೃದ್ಧಿಗೆ ಬಂದಿದ್ದ ಕೋಟ್ಯಂತರ ರೂಪಾಯಿ ಸದ್ವಿನಿಯೋಗವಾಗಿಲ್ಲ. ಭ್ರಷ್ಟಾಚಾರದಿಂದ ಗಳಿಸಿದ ಹಣದಿಂದಲೇ ಚುನಾವಣೆ ಗೆಲ್ಲಬಹುದು ಎಂದು ಬಿಜೆಪಿ ಅಭ್ಯರ್ಥಿ ತಿಳಿದಿದ್ದಾರೆ. ಮತದಾರರು ಸ್ವಾಭಿಮಾನಿಗಳು. ಹಣ-ಹೆಂಡ ಹಂಚುವವರಿಗೆ ಸರಿಯಾದ ಬುದ್ಧಿ ಕಲಿಸುತ್ತಾರೆ' ಎಂದರು.

`ಭ್ರಷ್ಟಾಚಾರ ಮುಕ್ತ ವಿಜಾಪುರ ನಿರ್ಮಾಣಕ್ಕಾಗಿ ಪ್ರಜ್ಞಾವಂತ ಮತದಾರರು ಜೆಡಿಎಸ್ ಬೆಂಬಲಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಲಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ' ಎಂದು ಹೇಳಿದರು.

ಜಿ.ಎನ್. ದೇಶಪಾಂಡೆ, ಶಿವಯೋಗೆಪ್ಪ ಹುಂಡೇಕಾರ, ಡಾ.ಮಂಗಲಗಿ, ರಮೇಶ ಬಿದನೂರ , ಅಪ್ಪು ಕಲ್ಯಾಣಶೆಟ್ಟಿ, ಬಸವರಾಜ ಲಿಂಗದಳ್ಳಿ, ಋಷಿಕೇಶ ಕುಲಕರ್ಣಿ, ಆನಂದ ಪುಕಾಳೆ, ವಿಶ್ವನಾಥ ಹಿರೇಮಠ, ರಾಜು ಹರಕಾರಿ, ಬಿ.ಎಂ. ಜರಾಳೆ ಇತರರು ಹಾಜರಿದ್ದರು.

ಜೆಡಿಎಸ್ ಸೇರ್ಪಡೆ: ಯತ್ನಾಳರನ್ನು ಬೆಂಬಲಿಸಿ ಅಲ್ಪಸಂಖ್ಯಾತ ಮುಸ್ಲಿಂ ಸಮಾಜದ ನಿಸಾರ್ ಅಹ್ಮದ, ಹುಸೇನಸಾಬ ಪಿತಾಲಿ, ಗೌಸ್ ಜಮಾದಾರ, ಪೀರಾ ಜಹಗೀರದಾರ, ರಿಯಾಜ್‌ಅಹ್ಮದ ಅಗರಖೇಡ, ಬಸೀರಸಾಬ ಮುಧೋಳ, ಆರೀಪ್ ಪುಣೇಕರ ಜೆ.ಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಹೈಟೆಕ್ ಪ್ರಚಾರ: ಜೆಡಿಎಸ್ ನಗರದಲ್ಲಿ ಹೈಟೆಕ್ ಪ್ರಚಾರ ಆರಂಭಿಸಿದೆ. ತೆರೆದ ವಾಹನದಲ್ಲಿ ಅಳವಡಿಸಿರುವ ಎಲ್‌ಸಿಡಿ ಟಿವಿಯ ಮೂಲಕ ಯತ್ನಾಳರ ಸಾಧನೆ ಕುರಿತು ಗಲ್ಲಿ ಗಲ್ಲಿಗಳಲ್ಲಿ ಕಿರು ಚಿತ್ರ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತಿದೆ.

ನಗರದ ಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಈ ಹೈಟೆಕ್ ಪ್ರಚಾರಕ್ಕೆ ಚಾಲನೆ ನೀಡಿದರು.
ಚಿದಾನಂದ ಇಟ್ಟಂಗಿ, ಚಂದ್ರಕಾಂತ ಹಿರೇಮಠ, ಎಂ.ಎಸ್. ಕರಡಿ, ದತ್ತಾ ಗೋಲಾಂಡೆ, ಶರಣು ಸಬರದ, ಮಾಣಿಕ ಗೋಲಾಂಡೆ, ಸಚಿನ್ ಕೋರಿ, ಎನ್.ಎಂ.ಪ್ಯಾಟಿ, ಪ್ರವೀಣ ಬಿಜ್ಜರಗಿ, ರಾಜಕುಮಾರ ಬಿರಾದಾರ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಜೆಡಿಎಸ್ ಸೇರ್ಪಡೆ: ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ರಮೇಶ ಬಿದನೂರ, ನಗರಸಭೆ ಮಾಜಿ ಸದಸ್ಯ ಯಲ್ಲಾಲಿಂಗ ಹೂಗಾರ, ಅಂಬರಖಾನೆ ತಮ್ಮ ಬೆಂಬಲಿಗರೊಂದಿಗೆ ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾದರು.

ಜೋರಾಪುರ ಪೇಟೆಯಲ್ಲಿ ಯತ್ನಾಳರು ನಡೆಸಿದ ಪ್ರಚಾರದಲ್ಲಿ ಸಂಗಪ್ಪಣ್ಣ ಹೇರಲಗಿ, ಬಸಯ್ಯ ಹಿರೇಮಠ, ಅರುಣ ಹೇರಲಗಿ, ಶಂಕರ ಬನ್ನೂರ, ಬಸವರಾಜ ಸೂಗೂರ, ಶ್ರಿಶೈಲ ಹೇರಲಗಿ, ಭೀಮರಾಯ ಆಸಂಗಿ, ಅನಿಲ್ ಪವಾರ, ಅಶೋಕ ಸೌದಾಗರ, ಸದಾಶಿವ ಹಂಚನಾಳ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT