ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಮುಕ್ತ ಸಮಾಜ ಪ್ರವಾದಿಗಳಲ್ಲಿ ಪರಿಹಾರ

Last Updated 10 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಭಟ್ಕಳ: ದೇಶವನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡಲು ಮಹ್ಮದ್ ಪೈಗಂಬರರ ಅನುಸರಣೆಯಲ್ಲಿ ಪರಿ ಹಾರವಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಅಧ್ಯಕ್ಷ ಅಬ್ದುಲ್ಲಾ ಜಾವೀದ್ ಹೇಳಿದರು.
ಪಟ್ಟಣದ ನವಾಯತ್ ಕಾಲೋನಿಯ ಮೈದಾನದಲ್ಲಿ ಇತ್ತೀಚೆಗೆ ನಡೆದ ಪ್ರವಾದಿ ಮಹ್ಮದ್‌ರ ಕುರಿತಾದ ಸೀರತ್ ಸಂದೇಶದ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ದರು.

ಸಮಾಜದಲ್ಲಿರುವ ಎಲ್ಲ ಕೆಡುಕು ಗಳಿಗೆ ಪರಿಹಾರ ಮತ್ತು ಸಮಸ್ಯೆಗಳಿಗೆ ಉತ್ತರವನ್ನು ಅವರ ಜೀವನ ಮತ್ತು ಸಂದೇಶಗಳಿಂದ ನಮಗೆ ದೊರಕುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಭಟ್ಕಳ ಮುಸ್ಲಿಮ್ ಜಮಾತ್ ದುಬೈ ಇದರ ಉಪಾಧ್ಯಕ್ಷರಾದ ಮೌಲಾನಾ ಸೈಯದ್ ಹಾಶಿಮ್ ನದ್ವಿ ಮಾತನಾಡಿ, ಪ್ರವಾದಿ ಮಹ್ಮದರು ಲೋಕೋದ್ದಾರ ಕ್ಕಾಗಿ ಅಲ್ಲಾಹನ ಅಂತಿಮ ಸಂದೇಶ ವಾಹಕರಾಗಿ ಈ ಭೂಮಿಗೆ ಆಗಮಿ ಸಿದ್ದರು. ಅವರು ಕೇವಲ ಮುಸ್ಲಿಮರಿಗೆ ಪ್ರವಾದಿಯಾಗಿರದೇ ಇಡೀ ಸಮಾಜಕ್ಕೆ ಪ್ರವಾದಿ ಮಹ್ಮದರಾಗಿದ್ದರು ಎಂದು ಬಣ್ಣಿಸಿದರು.

ಜ.ಇ.ಹಿಂ,ಶಿವಮೊಗ್ಗ ವಿಭಾಗದ ಉಪ ಸಂಚಾಲಕ ಮೌಲಾನ ಅಬ್ದುಲ್ ಗಫಾರ್ ಹಮೀದ್ ಉಮ್ರಿ,ಮೌಲಾನ ಇಕ್ಬಾಲ್ ನಾಯ್ತೆ ನದ್ವಿ ಮಾತನಾಡಿ ದರು.

ಮರ್ಕಜಿ ಜಮಾತುಲ್ ಮುಸ್ಲಿಮಿನ್ ಖಾಜಿ ಮೌಲಾನಾ ಮಹ್ಮದ್ ಇಕ್ಬಾಲ್ ಮುಲ್ಲಾ ನದ್ವಿ ಇವರು ಶಾಂತಿ ಪ್ರಕಾಶನದಿಂದ ಹೊರ ತಂದ `ಸಹೀರ್ ಬುಖಾರಿ~ ಕನ್ನಡ ಅನುವಾದ ಗ್ರಂಥವನ್ನು ಬಿಡುಗಡೆ ಮಾಡಿದರು.
ಮೌಲಾನಾ ಮಹ್ಮದ್ ಜಾಫರ್ ನಿರೂಪಿಸಿದರು.

ಜ.ಇ.ಹಿಂ.ಭಟ್ಕಳ ಘಟಕದ ಅಧ್ಯಕ್ಷ ಖಾದೀರ್ ಮೀರಾ ಪಟೇಲ್ ವಂದಿಸಿ ದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರವಾದಿ ಸ್ತುತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಾಮಿಯಾ ಇಸ್ಲಾಮಿಯಾದ ಶಾರೀಖ್ ಅಹ್ಮದ್, ದ್ವಿತೀಯ ಸ್ಥಾನ ಪಡೆದ ಅಂಜುಮನ್ ಬಾಲಕರ ಪ್ರೌಢಶಾಲೆಯ ಮಹ್ಮದ್ ಶುರೇಮ್, ತೃತೀಯ ಸ್ಥಾನ ಪಡೆದ ಇಸ್ಲಾಮಿಯಾ ಅಂಗ್ಲೋ ಉರ್ದು ಪ್ರೌಢಶಾಲೆಯ ಅಲಿ ಮುರ್ತುಜಾ ಇವರಿಗೆ ಕ್ರಮವಾಗಿ 1 ಸಾವಿರ, 700, 300 ರೂ ನಗದು ಬಹುಮಾನದ ಜತೆಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

`ಅನರ್ಹತೆಗೆ ಆಗ್ರಹ~
ಹೊನ್ನಾವರ: ರಾಜ್ಯ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದ ಆರೋಪಿ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಜೆ.ಡಿ.ಎಸ್. ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ.ಭಂಡಾರಿ ಹಾಗೂ ಕಸ್ತೂರಿ ಕನ್ನಡ ಹೆಚ್.ಡಿ.ಕುಮಾರಸ್ವಾಮಿ ಅಭಿ ಮಾನಿಗಳ ರಾಜ್ಯ ಸೇವಾಬಳಗದ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ಗೌಡ ತಲಗೋಡ ರಾಜ್ಯಪಾಲ ರನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ರಾಜ್ಯಪಾಲರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ಹಿಂದೆಂದೂ ಕಂಡರಿಯದಷ್ಟು ಭ್ರಷ್ಟಾ ಚಾರ ಹಾಗೂ ಚಾರಿತ್ರ್ಯಹೀನ      ಕಾರ್ಯಗಳಲ್ಲಿ ಭಾಗವಹಿಸಿರುವ ಸದಸ್ಯರನ್ನೊಳ ಗೊಂಡ ಬಿ.ಜೆ.ಪಿ. ಪಕ್ಷ ಜನರ ವಿಶ್ವಾಸ ವನ್ನು ಕಳೆದು ಕೊಂಡಿದೆ. ಲಕ್ಷ್ಮಣ ಸವದಿ, ಬಿ.ಸಿ.ಪಾಟೀಲ, ಕೃಷ್ಣ ಪಾಲೇಮಾರ   ಮಹಿಳೆಯರನ್ನು ಗೌರವಿಸುವ ನಮ್ಮ ನಾಗರಿಕ ಸಮಾಜ ತಲೆತಗ್ಗಿಸುವ ಕಾರ್ಯ ಮಾಡಿದ್ದಾ ರೆಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT