ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ: ಹೋರಾಟಕ್ಕೆ ನಾಯಕ ಬೇಕು

Last Updated 10 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಈ ದೇಶದ ಜನತೆ ಸಿದ್ಧರಿದ್ದಾರೆ. ಸೂಕ್ತ ನಾಯಕತ್ವಕ್ಕಾಗಿ ಅವರು ಕಾಯುತ್ತಿದ್ದಾರೆ ಎಂಬುದನ್ನು ಅಣ್ಣಾ ಹಜಾರೆ ಅವರ ನೇತೃತ್ವದ ಹೋರಾಟಕ್ಕೆ ವ್ಯಕ್ತವಾದ ಜನಬೆಂಬಲ ಸೂಚಿಸುತ್ತದೆ ಎಂದು ಮಂಗಳೂರು ವಿ.ವಿ. ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಅವರು ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಪ್ರೊ.ರಹಮತ್ ತರೀಕೆರೆ ಅಭಿನಂದನಾ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣದಲ್ಲಿ ‘ರಹಮತ್ ತರೀಕೆರೆ- ಪ್ರತಿ ಸಂಸ್ಕೃತಿ ಚಿಂತನೆ’ ಎಂಬ ವಿಷಯ ಮಂಡಿಸಿ ಅವರು ಮಾತನಾಡಿದರು.
 

ಅಣ್ಣಾ ಹಜಾರೆ ನೇತೃತ್ವದ ಚಳವಳಿಗೆ ಬೆಂಬಲ ಸೂಚಿಸುತ್ತಿರುವವರಲ್ಲಿ ಎಲ್ಲ ರೀತಿಯ ಜನರೂ ಇದ್ದಾರೆ. ಮೇಲ್ನೋಟಕ್ಕೆ ಭ್ರಷ್ಟರು ಎನಿಸುವವರೂ ಈ ಚಳವಳಿಗೆ ಬೆಂಬಲ ಘೋಷಿಸುತ್ತಿದ್ದಾರೆ. ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಎಚ್ಚರ ಕಾಪಾಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಚಂದ್ರಶೇಖರ್ ನಾರಾಯಣಪುರ, ಆರ್ಥಿಕ ಬಡತನವನ್ನು ದುಡಿಮೆಯ ಬಲದಿಂದ ನೀಗಿಕೊಳ್ಳಬಹುದು. ಆದರೆ ವ್ಯಕ್ತಿಯ ಮಾನಸಿಕ/ಸಾಂಸ್ಕೃತಿಕ ಬಡತನ ನೀಗಿಕೊಳ್ಳಲು ಅಧ್ಯಯನ ಅನಿವಾರ್ಯ ಎಂದರು.

ಆತ್ಮಶಕ್ತಿ, ಭಾವಶಕ್ತಿ, ಮನಃಶಕ್ತಿಯ ಚೈತನ್ಯದ ಪುನರುಜ್ಜೀವನಕ್ಕೆ ರಹಮತ್ ತರೀಕೆರೆಯಂಥ ಸಂಸ್ಕೃತಿ ಚಿಂತಕರ ಕೃತಿಗಳನ್ನು ಅಭ್ಯಾಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಹಮತ್ ತರೀಕೆರೆ ಮತ್ತು ಅವರ ಪತ್ನಿ ಬಾನು ಅವರನ್ನು ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ರಹಮತ್ ತರೀಕೆರೆ, ನನ್ನ ಬಗ್ಗೆ ನಾಡಿನ ಜನತೆ ತೋರಿರುವ ಗೌರವ ಮತ್ತು ಪ್ರೀತಿಗೆ ಆಭಾರಿಯಾಗಿರುವುದಾಗಿ ತಿಳಿಸಿದರು.
ಅಭಿನಂದನ ಸಮಿತಿಯ ಧ್ರುವನಾರಾಯಣ, ರಾಜೇಶ್, ಎಸ್.ಸುಂದರೇಶ್, ದಿನೇಶ್ ಪಟವರ್ಧನ್, ಶಾಂತಿ ಸರೋಜಿನಿ, ಜಬ್ಬಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT