ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರಕ್ಕೆ ಮೃದು ಧೋರಣೆ ತೋರಿಲ್ಲ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮದುರೈ, ತಮಿಳುನಾಡು, (ಐಎಎನ್‌ಎಸ್): ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಯಾವತ್ತೂ ಮೃದು ಧೋರಣೆ ತಳೆದಿಲ್ಲ ಎಂದು ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಗುಡುಗಿದ್ದಾರೆ.

ತಮ್ಮ `ಜನಚೇತನ~ ರಥಯಾತ್ರೆಯ ಅಂಗವಾಗಿ ಗುರುವಾರ ಚೆನ್ನೈನಿಂದ ಇಲ್ಲಿಗೆ ಆಗಮಿಸಿದ ಅವರು, ಶುಕ್ರವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಗರಣಗಳಲ್ಲಿ ಭಾಗಿಯಾದವರಲ್ಲಿ ಕೆಲವೇ ಕೆಲವು ಆಯ್ದ ವ್ಯಕ್ತಿಗಳನ್ನು ಗುರಿಮಾಡಿಕೊಂಡು ಅಂಥವರ ವಿರುದ್ಧ ಮಾತ್ರವೇ ಕೇಂದ್ರದ ಯುಪಿಎ ಸರ್ಕಾರ ಕತ್ತಿ ಮಸೆಯುತ್ತಿದೆ ಎಂದು ಅವರು ಆಪಾದಿಸಿದರು.

ಅಣ್ಣಾ ಹಜಾರೆ ಮತ್ತು ಬಿಜೆಪಿ ನಡುವಿನ ಸಂಬಂಧಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದರು.

ಅಪರಾಧಿಗಳಿಗೆ ರಾಜಕೀಯ ಪ್ರೇರಿತ ಕ್ಷಮಾದಾನ ನೀಡಬೇಕೆಂಬ ನಿಲುವನ್ನು ಪಕ್ಷವು ಯಾವತ್ತೂ ಒಪ್ಪುವುದಿಲ್ಲ ಎಂದ ಅವರು, ಇಂತಹ ವಿಷಯಗಳಲ್ಲಿ ನ್ಯಾಯಾಲಯದ ಆದೇಶವನ್ನು ಪರಿಪಾಲಿಸುವುದೇ ಅಖೈರಾಗಬೇಕು ಎಂದರು.

2014ರ ಮಹಾಚುನಾವಣೆಯಲ್ಲಿ ಬಿಜೆಪಿಯು ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಚುನಾವಣೆ ಸಮಯದಲ್ಲೇ ನಿರ್ಧರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT