ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಲಹೆ

Last Updated 3 ಸೆಪ್ಟೆಂಬರ್ 2011, 5:45 IST
ಅಕ್ಷರ ಗಾತ್ರ

ಹಾನಗಲ್ಲ: `ಭ್ರಷ್ಟಾಚಾರ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನೈತಿಕತೆ ಈ ಸಮಾಜದ್ದಾಗಬೇಕಾಗಿದ್ದು, ವಿದ್ಯಾರ್ಥಿ ಗಳು ದೇಶ ಪ್ರೇಮವನ್ನು ಅಳವಡಿಸಿ ಕೊಳ್ಳುವ ಅಗತ್ಯವಿದೆ~ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶೀತಲ್ ಕುರ್ಡೆಕರ ಕರೆ ನೀಡಿದರು.

 ಇಲ್ಲಿನ ಕುಮಾರೇಶ್ವರ ಕಾಲೇಜಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಏರ್ಪಡಿಸಿದ ತಾಲ್ಲೂಕು ಮಟ್ಟದ ಅಭ್ಯಾಸ ವರ್ಗದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು,

 ನಮ್ಮ ಸಂಸ್ಕೃತಿಯ ವಾಸ್ತವಗಳನ್ನು ಅರಿಯದೇ ಪರಕೀಯರ ದಾಸರಾಗುವ ದುಸ್ಸಾಹಸ ಎಂದಿಗೂ ಬೇಡ. ಪಾಶ್ಚಾ ತ್ಯರ ಆಕರ್ಷಣೆ ವಿಷ ಪಾಷಾಣವಾಗುವ ಮೊದಲು ನಾವು ಎಚ್ಚತ್ತುಕೊಳ್ಳ ಬೇಕಾಗಿದೆ. ವಿದ್ಯಾರ್ಥಿ ಸಂಘಟನೆಗಳು ಯುವ ಸಮುದಾಯವನ್ನು ಜವಾ ಬ್ದಾರಿಯುತ ನಾಗರಿಕರ ನ್ನಾಗಿಸಲು ಮುಂದಾಗಬೇಕಾಗಿದೆ. ನಮ್ಮ ನಾಡು ನುಡಿ ಸಂಸ್ಕೃತಿ ರಕ್ಷಣೆಯ ಹೊಣೆ ನಮ್ಮದೇ ಆಗಿದೆ. ಇದರ ಅರಿವು ವಿದ್ಯಾರ್ಥಿ ಮೂಡಬೇಕು ಎಂದರು.

ಜಗದ್ಗುರು ಪಂಚಾಚಾರ್ಯ ವಿದ್ಯಾ ಪೀಠದ ಅಧ್ಯಕ್ಷ ಡಾ. ವಿ.ಎಸ್.ಪುರಾ ಣಿಕಮಠ ಮುಖ್ಯ ಅತಿಥಿಯಾಗಿ ಮಾತ ನಾಡಿ, ಬದಲಾದ ಸಾಮಾಜಿಕ ವ್ಯವಸ್ಥೆಯಲಿ ್ಲಸೌಲಭ್ಯಗಳ ಸದು ಪಯೋಗಕ್ಕಿಂತ ದುರುಪಯೋಗವೇ ಹೆಚ್ಚು ಹೆಚ್ಚಾಗಿದೆ. ಜನ ಸೇವೆ ಅತ್ಯವಶ್ಯ, ಜ್ಞಾನ ಯೋಗ ಆಹಾರ ವಿಹಾರಗಳೆಲ್ಲವೂ ನಮ್ಮ ಆರೋಗ್ಯಕ್ಕೆ ಬೇಕು. ದೇಶ ಭಕ್ತಿ ನಮ್ಮ ತಾಯ್ನಾಡಿನ ರಕ್ಷಣೆಗೆ ಬೇಕು ಎಂದ ಅವರು ನಮ್ಮ ಸಂಸ್ಕೃತಿಯಲ್ಲಿನ ವೈಜ್ಞಾನಿಕ ಅಂಶ ಗಳನ್ನು ಮರೆಯುವಂತಿಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ,       ಸಂಘ ಟನೆಯ ಹಾವೇರಿ ಹಾಗೂ ಧಾರವಾಡ ಜಿಲ್ಲಾ ಕಾರ್ಯದರ್ಶಿ ಗುರುನಾಥ ಮಾತನಾಡಿದರು.      

ಉಪನ್ಯಾಸಕ ಎ.ಎಸ್.ಜಗದೀಶಪ್ಪ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾವೇರಿ ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ಸಂತೋಷ ಆಲದಕಟ್ಟಿ ಅತಿಥಿ ಗಳಾಗಿದ್ದರು.

  ರೇಖಾ ಹಾಗೂ ನಿಖಿತಾ ಪ್ರಾರ್ಥನೆ ಹಾಡಿದರು. ಗಣೇಶ ಸ್ವಾಗತಿಸಿದರು. ಚಂದ್ರಿಕಾ ಪ್ರಸ್ತಾವಿಕ ಮಾತನಾಡಿದರು. ಹರ್ಷ ಲೆಕ್ಕದವರಮಠ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT