ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣಹತ್ಯೆ ತಡೆಗೆ ಬೇಕಿದೆ ಕಠಿಣ ಕ್ರಮ

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಇತ್ತಿತ್ತಲಾಗಿ ಭ್ರೂಣಹತ್ಯೆ ಹೆಚ್ಚಾಗಿದೆ. ಇದಕ್ಕೆ ಸಾಕಷ್ಟು ಕಡಿವಾಣ ಹಾಕಿದರೂ ನಿಲ್ಲುತ್ತಿಲ್ಲ. ಕಲಿತವರು ಕಲಿಯದಿದ್ದವರು ಸ್ಕ್ಯಾನಿಂಗ್ ಮಾಡಿಸಿ ಹೆಣ್ಣು ಮಗು ಎಂದು ಗೊತ್ತಾದ ಕೂಡಲೇ ಆ ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಈಗ ಗಂಡು ಮತ್ತು ಹೆಣ್ಣಿನ ಅನುಪಾತ 2011ರ ಜನಗಣತಿಯ ಪ್ರಕಾರ ಸುಮಾರು 1000 ಗಂಡು ಇದ್ದು ಹೆಣ್ಣು 981 ರಷ್ಟು ಆಗಿದೆ.

ಆದ್ದರಿಂದ ಸರಾಸರಿ ನೋಡಿದರೆ ಹೆಣ್ಣು ಮಕ್ಕಳ ಪ್ರಮಾಣ ಬಹಳ ಕಡಿಮೆ ಕಂಡುಬರುತ್ತದೆ. ಮುಂದಿನ ದಿನಮಾನದಲ್ಲಿ ಹೆಣ್ಣಿನ ಕೊರತೆ ಆಗುವುದಂತೂ ನಿಶ್ಚಿತ. ಭ್ರೂಣ ಹತ್ಯೆಗೆ ಕಡಿವಾಣ ಹಾಕಲು ಭ್ರೂಣ ಹತ್ಯೆ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ಸರ್ಕಾರ ಪ್ರಯತ್ನಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT