ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳ ಗ್ರಹದಲ್ಲಿ ಮಾನವನ ವಾಸ?

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಭೂಮಿಯ ನಂತರ ಮಂಗಳ ಗ್ರಹ ಮಾನವನ ವಾಸಕ್ಕೆ ಯೋಗ್ಯ ಸ್ಥಳವಾಗಿದ್ದು, ಮುಂದಿನ ಎರಡು ದಶಕಗಳ ಒಳಗಾಗಿ ಈ ಗ್ರಹದಲ್ಲಿ ಮಾನವನ ವಸಾಹತು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅಮೆರಿಕದ ಗಗನಯಾತ್ರಿ ಅಲ್ಡ್ರಿನ್ ಬಿಚ್ಚಿಟ್ಟಿದ್ದಾರೆ. 2030ರ ವೇಳೆಗೆ ಮಂಗಳ ಮಾನವನ ಎರಡನೇ ಭೂಮಿಯಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ನೀಲ್ ಆರ್ಮ್‌ಸ್ಟ್ರಾಂಗ್ ಜತೆ 1969ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಎರಡನೇ ವ್ಯಕ್ತಿಯಾಗಿರುವ 83 ವರ್ಷದ ಎಡ್ವಿನ್, ಮುಂದಿನ ತಿಂಗಳು ಬಿಡುಗಡೆಯಾಗಲಿರುವ ತಮ್ಮ ಪುಸ್ತಕದಲ್ಲಿ ಈ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಹೊರತರುತ್ತಿರುವ ಈ ಪುಸ್ತಕ ಮೇ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಮಂಗಳ ಗ್ರಹದಲ್ಲಿ ಮಾನವನಿಗೆ ಲಭ್ಯವಿರುವ ಅವಕಾಶ ಮತ್ತು ಖಗೋಳದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಆ ಗ್ರಹದಲ್ಲಿ ಏನಿದೆ ಎಂಬ ಕುತೂಹಲ ಮತ್ತು ಸಾಹಸ ಪ್ರವೃತ್ತಿಯನ್ನು ಉತ್ತೇಜಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

`ನಮ್ಮ ಮುಂದಿನ ಪೀಳಿಗೆ `ಮಂಗಳನ ಪೀಳಿಗೆ'ಯಾಗಬೇಕು. ನಾವು ಅಲ್ಲಿಗೆ ತೆರಳಿ ವಾಸಿಸಬೇಕು ಎಂಬುವುದು ನನ್ನ ಆಶಯ. ಮಾನವನ ಮಂಗಳ ಯಾತ್ರೆಯ ರೂಪುರೇಷೆ ಮತ್ತು ನೀಲನಕ್ಷೆಯನ್ನು ನನ್ನ ಪುಸ್ತಕದಲ್ಲಿ ಚರ್ಚಿಸಿರುವುದಾಗಿ ಅವರು ಹೇಳಿಕೊಂಡಿದ್ದೇನೆ.      

`ಕೇವಲ ಸರ್ಕಾರಿ ಅನುದಾನಿತ ಬಾಹ್ಯಾಕಾಶ ಸಂಸ್ಥೆಗಳಿಗೆ ಸೀಮಿತವಾಗಿದ್ದ ಮತ್ತು ಅತ್ಯಂತ ದುಬಾರಿ ವೆಚ್ಚದ ಬಾಹ್ಯಾಕಾಶ ಯಾತ್ರೆ ಎಲ್ಲರಿಗೂ ಸಾಧ್ಯವಾಗುವ ಕಾಲ ಸನ್ನಿಹತವಾಗಿದೆ. ತಂತ್ರಜ್ಞಾನ ಬೆಳೆದಂತೆ ಅಗ್ಗದ ವಾಣಿಜ್ಯ ಬಾಹ್ಯಾಕಾಶ ಯಾತ್ರೆಯ ಕನಸು ನನಸಾಗುತ್ತಿದೆ.' ಎಂದು ಎಡ್ವಿನ್ ಹೇಳಿದ್ದಾರೆ.

ಗಗನಯಾತ್ರಿಯಾಗಲು ಒಂದಿಷ್ಟು ಧೈರ್ಯ, ತಂಡವನ್ನು ಮುನ್ನಡೆಸುವ ನಾಯಕತ್ವ ಗುಣ, ಹುಮ್ಮಸ್ಸು, ಗಟ್ಟಿ ಮನಸ್ಸು, ಆತ್ಮಬಲ ಈ ಎಲ್ಲದಕ್ಕಿಂತಲೂ ಹೆಚ್ಚಾಗಿ ಶಕ್ತಿಶಾಲಿ ಹೊಟ್ಟೆ ಅಗತ್ಯ. ಫ್ಲಾರಿಡಾದಲ್ಲಿ ಮುಂದಿನ ವರ್ಷ ನಡೆಯಲಿರುವ ಉದ್ದೇಶಿತ `ಲಿಂಕ್ಸ್' ವಾಣಿಜ್ಯ ಬಾಹ್ಯಾಕಾಶ ಯಾತ್ರೆಯ ತರಬೇತಿಗೆ ಹಾಜರಾಗುವ ಗಗನಯಾತ್ರಿಯಲ್ಲಿ ಈ ಎಲ್ಲ ಗುಣಗಳಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT