ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳ ಗ್ರಹದಲ್ಲಿ `ಹೂವು'?

Last Updated 6 ಜನವರಿ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಹೂವಿನ ದಳದ ಆಕಾರದ ವಿಶಿಷ್ಟವಾದ ಗುಚ್ಛವನ್ನು ನಾಸಾದ ವಿಜ್ಞಾನಿಗಳು ಮಂಗಳ ಗ್ರಹದಲ್ಲಿ ಪತ್ತೆ ಹಚ್ಚಿದ್ದಾರೆ. ಅಂಗಾರಕನ ಅಂಗಳದಲ್ಲಿ ಹೂವುಗಳು ಅರಳುತ್ತವೆ ಎಂಬ ವದಂತಿಗೆ ಇದು ಮತ್ತಷ್ಟು ನೀರೆದಿದೆ.

ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ, ಕೆಂಪು ಗ್ರಹಕ್ಕೆ ಕಳುಹಿಸಿರುವ `ಕ್ಯೂರಿಯಾಸಿಟಿ' ರೋವರ್ ಕಳೆದ ತಿಂಗಳು ಸೆರೆ ಹಿಡಿದಿರುವ ಚಿತ್ರದಲ್ಲಿ ಈ `ಹೂವು' ಕಂಡು ಬಂದಿದೆ. ಹವಳದ ಬಣ್ಣ ಹೊಂದಿರುವ ಎಸಳುಗಳು ನೆಲದಿಂದ ಚಿಗುರಿದಂತೆ ಗೋಚರಿಸಿದೆ.

ಚಿತ್ರದಲ್ಲಿ ಕಂಡು ಬಂದಿರುವ ಎಸಳಿನ ಆಕಾರದ ಗುಚ್ಛವು ಶಿಲೆಯೊಂದಿಗೆ ಕೂಡಿಕೊಂಡಿರುವ ಬೆಣಚುಕಲ್ಲು ಆಗಿರುವ ಸಾಧ್ಯತೆ ಇದೆ ಎಂದು ಅಂತರಿಕ್ಷ ಕುತೂಹಲಿಗಳು ಅಂತರಜಾಲದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಪ್ರತಿಪಾದಿಸಿದ್ದಾರೆ.

ಇದು ಅರಳುತ್ತಿರುವ ಹೂವಿನ ಶಾಲಾಕೆಯಾಗಿರಬಹುದು ಎಂದು ಇನ್ನು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ ಎಂದು `ನ್ಯೂಯಾರ್ಕ್ ಡೈಲಿ ನ್ಯೂಸ್' ವರದಿ ಮಾಡಿದೆ.

ಕಳೆದ ವರ್ಷ ಕೂಡ ಮಂಗಳನಲ್ಲಿ ಇಂತಹದೇ ಗುಚ್ಛವೊಂದು ಕಂಡು ಬಂದಿತ್ತು. ಆದರೆ ಅದು ರೋವರ್‌ನಿಂದಲೇ ಬಿದ್ದಿದ್ದ ಪ್ಲಾಸ್ಟಿಕ್‌ನ ಒಂದು ತುಂಡಾಗಿತ್ತು.
`ಈಗ ಪತ್ತೆ ಮಾಡಲಾಗಿರುವ ಹೂವಿನ ದಳದ ಆಕಾರದ ಗೊಂಚಲು ಶಿಲೆಯೊಂದರ ಭಾಗದಂತೆ ಭಾಸವಾಗುತ್ತಿದೆ' ಎಂದು ನಾಸಾದ ವಕ್ತಾರ ಗಾಯ್ ವೆಬ್‌ಸ್ಟರ್ ಹೇಳಿದ್ದಾರೆ.

`ಆಕಾರವನ್ನು ನೋಡಿ ಕೆಲವರು ಆ ಗೊಂಚಲನ್ನು `ಹೂವು' ಎಂದು ಬಣ್ಣಿಸಿರಬಹುದಷ್ಟೇ ಹೊರತು, ಮಂಗಳ ಗ್ರಹದಲ್ಲಿ ಹೂವುಗಳಿವೆ ಎಂಬ ಅರ್ಥದಲ್ಲಿ ಹೇಳಿರುವ ಸಾಧ್ಯತೆ ಇಲ್ಲ ಎಂದು ನನಗನ್ನಿಸುತ್ತದೆ' ಎಂದು ವೆಬ್‌ಸ್ಟರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT