ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳ ಯಾನ: 20 ಸಾವಿರ ಭಾರತೀಯರ ಅರ್ಜಿ!

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಡಚ್‌ ಕಂಪೆನಿ­ಯೊಂದು ಖಾಸಗಿ ಮಂಗಳಗ್ರಹ ಯಾನ­­ಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಜಗ­ತ್ತಿ­ನಾದ್ಯಂತ ಈ ವಿಶಿಷ್ಟ ಯಾನ­ಕ್ಕಾಗಿ ಎರಡು  ಲಕ್ಷ ಜನ ಅರ್ಜಿ ಸಲ್ಲಿಸಿ­ದ್ದಾರೆ. ಅವರಲ್ಲಿ ೨೦ ಸಾವಿರ ಮಂದಿ ಭಾರತೀ­ಯರೂ ಅರ್ಜಿ ಸಲ್ಲಿಸಿದ್ದಾರೆ.

ಈ ‘ಮಾರ್ಸ್‌ ಒನ್‌’ ಹೆಸರಿನ ಯೋಜನೆ ಅನ್ವಯ 2023ರಲ್ಲಿ  ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರನ್ನು ಮಂಗಳಗ್ರಹಕ್ಕೆ ಕಳು­ಹಿಸ­ಲಾಗುತ್ತದೆ.
ಅಂಗಾರಕನ ಅಂಗಳದಲ್ಲಿ ಶಾಶ್ವತ ವಸಾಹತು ನಿರ್ಮಿಸುವ ಉದ್ದೇಶ­ದೊಂದಿಗೆ  ಈ ಒಮ್ಮುಖ ಪ್ರಯಾಣ ರೂಪಿಸಲಾಗಿದೆ.

ಐದು ತಿಂಗಳ ಅವಧಿಯಲ್ಲಿ ಡೆನ್ಮಾರ್ಕ್‌ ಮೂಲದ ಮಾರ್ಸ್‌ ಒನ್‌ ಪ್ರತಿಷ್ಠಾನಕ್ಕೆ ವಿಶ್ವದ 140 ದೇಶಗಳ ಒಟ್ಟು 2,02,586 ಅರ್ಜಿಗಳು ಬಂದಿವೆ. ಆ ಪೈಕಿ ಶೇ 10ರಷ್ಟು ಅರ್ಜಿಗಳು ಭಾರತದಿಂದಲೇ ಬಂದಿವೆ.  ಅಮೆರಿಕದಿಂದ ಅರ್ಜಿಗಳ ಮಹಾ­ಪೂರವೇ ಹರಿದು ಬಂದಿದೆ.

ಅಲ್ಲಿಂದ ಶೇ 24ರಷ್ಟು ಅರ್ಜಿಗಳು ಬಂದಿದ್ದು, ಭಾರತ ದ್ವಿತೀಯ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಚೀನಾ (ಶೇ 6), ಬ್ರೆಜಿಲ್‌ (ಶೇ 5), ಬ್ರಿಟನ್‌, ಕೆನಡಾ, ರಷ್ಯಾ ಮತ್ತು ಮೆಕ್ಸಿಕೊ (ಶೇ 4) ಮುಂತಾದ ರಾಷ್ಟ್ರಗಳಿವೆ.

ಈ ಅರ್ಜಿಗಳ ಪೈಕಿ ಮಂಗಳ ಗ್ರಹದಲ್ಲಿ ಶಾಶ್ವತವಾಗಿ ನೆಲೆಸಲು ಅರ್ಹರಾಗಿರುವರನ್ನು  ಆಯ್ಕೆ ಸಮಿತಿ ಎರಡು ವರ್ಷಗಳ ಅವಧಿಯಲ್ಲಿ ಆಯ್ಕೆ ಮಾಡಲಿದೆ.  ಆಕಾಂಕ್ಷಿಗಳು ಹಲವು ಹಂತದ ಕಠಿಣ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT