ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನ ಕಸ ಗುಡಿಸಿದ ರೋವರ್!

Last Updated 8 ಜನವರಿ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಮಂಗಳನ ಅಂಗಳದಲ್ಲಿ ಹೂವಿನಾಕಾರದ ಚಿತ್ರವನ್ನು ಸೆರೆ ಹಿಡಿದು ಕುತೂಹಲ ಮೂಡಿಸಿದ್ದ `ಕ್ಯೂರಿಯಾಸಿಟಿ' ರೋವರ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಲ್ಲಿ  ಕಸ ಗುಡಿಸುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿದೆ.

ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ `ನಾಸಾ' ಕಳುಹಿಸಿರುವ ರೋವರ್ ಇದೇ ಮೊದಲ ಬಾರಿಗೆ ಸ್ವಯಂಚಾಲಿತ ತೋಳಿನಲ್ಲಿ ಅಳವಡಿಸಲಾಗಿದ್ದ ಪೊರಕೆಯಂತಹ ಬ್ರಷ್‌ನಿಂದ ಕಸ ಗುಡಿಸಿ, ದೂಳು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದೆ.

ಮಂಗಳ ಗ್ರಹದಲ್ಲಿ ಇಳಿದ ಬಳಿಕ ರೋವರ್ ಇದೇ ಮೊದಲ ಬಾರಿಗೆ ಈ ಸ್ವಯಂಚಾಲಿತ ತೋಳು ಮತ್ತು ಸಲಕರಣೆ ಬಳಸುತ್ತಿರುವುದು ವಿಶೇಷ. 

ಈ ಕಾರ್ಯಕ್ಕಾಗಿ ವಿಜ್ಞಾನಿಗಳು ಗೇಲ್ ಎಂಬ ದೊಡ್ಡ ಗುಳಿಯ ಬಳಿ `ಎಕ್ವಿರ್-1'ಎಂಬ ಚಪ್ಪಟೆ ಕ್ಲ್ಲಲನ್ನು ಆಯ್ಕೆಮಾಡಿದ್ದರು. ಸ್ವಚ್ಛಗೊಳಿಸಲಾದ ಕಲ್ಲನ್ನು ನಂತರದ ದಿನಗಳಲ್ಲಿ ರೋವರ್ ತನ್ನ ಮತ್ತೊಂದು ತೋಳಿನಲ್ಲಿರುವ ಸುತ್ತಿಗೆಯಂತಹ ಸಾಧನದಿಂದ ಕುಟ್ಟಿ ಪುಡಿ ಮಾಡಿ, ಸಂಗ್ರಹಿಸಲಿದೆ. 

`ರೋವರ್ ಭಾಗಕ್ಕೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ  ಚಪ್ಪಟೆ ಶಿಲೆಯನ್ನು ಆಯ್ಕೆ ಮಾಡಲಾಗಿತ್ತು. ನಿಗದಿತ ಕೆಲಸವನ್ನು ರೋವರ್ ಯಶಸ್ವಿಯಾಗಿ ಮಾಡಿ ಮುಗಿಸಿದೆ' ಎಂದು ಕ್ಯಾಲಿಫೋರ್ನಿಯಾದಲ್ಲಿರುವ ನಾಸಾ ವಿಜ್ಞಾನಿ ಡಯಾನಾ ಟ್ರುಜಿಲ್ಲೋ ಹರ್ಷ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್‌ನ ಹನಿಬೀ ರೋಬೊಟಿಕ್ಸ್ ಸಂಸ್ಥೆ, ಧೂಳು ತೆಗೆಯುವ ವಿಶೇಷ ಸಲಕರಣೆಯನ್ನು ತಯಾರಿಸಿದೆ.

ಈ ಮೊದಲು ಮಂಗಳ ಗ್ರಹಕ್ಕೆ ಹಾರಿ ಬಿಡಲಾಗಿದ್ದ `ಸ್ಪಿರಿಟ್' ಮತ್ತು `ಅಪಾರ್ಚುನಿಟಿ' ಉಪಗ್ರಹಗಳಲ್ಲಿ ಅಳವಡಿಸಲಾಗಿದ್ದ ಕಲ್ಲು ಕೊರೆಯುವ ಪುಟ್ಟ ಯಂತ್ರಗಳನ್ನು ಇದೇ ಸಂಸ್ಥೆ ತಯಾರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT