ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನ ಪುಟ್ಟ ಶಿಲೆ ಬಲು ದುಬಾರಿ!

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಉಲ್ಕಾಪಾತದ ಸಂದರ್ಭದಲ್ಲಿ ಭೂಮಿಗೆ ಬಿದ್ದಿದ್ದ ಮಂಗಳ ಗ್ರಹದಲ್ಲಿ ರೂಪುಗೊಂಡಿದ್ದ ಪುಟ್ಟ ಶಿಲೆಯು ಅಮೆರಿಕದಲ್ಲಿ ನಡೆಯಲಿರುವ ಹರಾಜಿನಲ್ಲಿ 1.6 ಲಕ್ಷ ಪೌಂಡ್‌ಗೆ (ಸುಮಾರು 1,34,40,000 ರೂಪಾಯಿ) ಬಿಕರಿಯಾಗುವ ನಿರೀಕ್ಷೆ ಇದೆ.

ಈ ಶಿಲೆಯು ಕೇವಲ 3.5 ಇಂಚು ಉದ್ದ ಮತ್ತು 326 ಗ್ರಾಂ ತೂಕ ಹೊಂದಿದೆ.

ಲಕ್ಷಾಂತರ ವರ್ಷದ ಹಿಂದೆ ಕ್ಷುದ್ರಗ್ರಹವೊಂದು ಅಪ್ಪಳಿಸಿದ ಕಾರಣದಿಂದ ಮಂಗಳ ಗ್ರಹದಿಂದ ಶಿಲೆಯ ತುಂಡೊಂದು ಸಿಡಿದಿತ್ತು. ಅಂತರಿಕ್ಷದಲ್ಲಿ ಪ್ರಯಾಣಿಸುತ್ತಾ ಉಲ್ಕಾಪಾತದ ಭಾಗವಾಗಿ ಈ ಶಿಲೆಯು ಕಳೆದ ವರ್ಷ ಮೊರಾಕ್ಕೊದ ಮರುಭೂಮಿಯಲ್ಲಿ ಬಿದ್ದಿತ್ತು. ಟಿಸ್ಸಿಂಟ್ ಎಂಬ ಗ್ರಾಮದಲ್ಲಿ ಈ ಉಲ್ಕಾಶಿಲೆ ದೊರೆತಿದ್ದರಿಂದ ಅದಕ್ಕೆ ಟಿಸ್ಸಿಂಟ್ ಎಂಬ ಹೆಸರಿಡಲಾಗಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT