ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನ ಮಣ್ಣು ಮೊಗೆಯಲು ಕ್ಯೂರಿಯಾಸಿಟಿ ಸಜ್ಜು!

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಮಂಗಳ ಗ್ರಹದ ಮೇಲಿರುವ ಕ್ಯೂರಿಯಾಸಿಟಿ ರೋವರ್ ಇದೀಗ ಮತ್ತೊಂದು ಮಹತ್ವದ ಘಟ್ಟದ ಹೊಸ್ತಿಲಲ್ಲಿದ್ದು, ಅಲ್ಲಿನ ನೆಲದಿಂದ ಮೊದಲ ಬೊಗಸೆ ಮಣ್ಣನ್ನು ಮೊಗೆದುಕೊಳ್ಳುವ ತಯಾರಿಯಲ್ಲಿದೆ.

ಆಗಸ್ಟ್‌ನಲ್ಲಿ ಅಂಗಾರಕನ ಅಂಗಳಕ್ಕಿಳಿದ ಕ್ಯೂರಿಯಾಸಿಟಿಯು ಇದೀಗ ಅಲ್ಲಿನ `ರಾಕ್‌ನೆಸ್ಟ್~ ಎಂದು ಕರೆಯಲಾಗಿರುವ ಮಣ್ಣಿನ ಗುಡ್ಡದ ಬಳಿಗೆ ತೆರಳಿದೆ. ಇನ್ನೆರಡು ವಾರಗಳಲ್ಲಿ ಅದರ ರೋಬಾಟಿಕ್ ತೋಳುಗಳು ಮೊದಲ ಬೊಗಸೆ ಮಣ್ಣನ್ನು ಮೊಗೆಯಲಿವೆ ಎಂದು ನಾಸಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ನಂತರ ಈ ಮಣ್ಣನ್ನು ವಿಶ್ಲೇಷಣೆಗೆ ಒಳಪಡಿಸಲಾಗುವುದು. ಮಂಗಳನ `ರಾಕ್‌ನೆಸ್ಟ್~ ಪ್ರದೇಶವಾಗಲೀ, ಅಥವಾ ದೊಡ್ಡ ಕುಳಿಯಾದ `ಗೇಲ್ ಕ್ರೇಟರ್~ ಆಗಲೀ, ಹಿಂದೆ ಎಂದಾದರೊಮ್ಮೆ ಸೂಕ್ಷ್ಮಾಣುಜೀವಿ ಪೋಷಕ ತಾಣವಾಗಿತ್ತೇ ಎಂಬುದನ್ನು ಪತ್ತೆ ಹಚ್ಚಲು ಈ ಪರೀಕ್ಷೆಯಿಂದ ಸಾಧ್ಯವಾಗಲಿದೆ.

ಹಾಗೆಯೇ, ಮಂಗಳನ ಮೇಲಿನ ಖನಿಜಾಂಶಗಳ ವಿಶ್ಲೇಷಣೆಯು ಗತಕಾಲದ ಪರಿಸರದ ಸ್ಥಿತಿಯನ್ನು ಅರಿಯಲು ನೆರವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT