ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 2-10-1962

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಏನೇ ಆದರೂ ಚೀಣದೊಡನೆಸಂಧಾನಕ್ಕೆ ಸಿದ್ಧ
ನವದೆಹಲಿ, ಅ. 1 - ಏನೇ ಆದರೂ, ಚೀಣಿಯರು ಭಾರತದ ಬಗ್ಗೆ ಸೌಜನ್ಯ - ಗೌರವಗಳಿಂದ್ದರೆ ಅವರೊಡನೆ ಸಂಧಾನಕ್ಕೆ ತಾವು ಸದಾ ಸಿದ್ದರಿರುವುದಾಗಿ ಪ್ರಧಾನ ಮಂತ್ರಿ ನೆಹರೂ ಇಂದು ಘೋಷಿಸಿದರು.

ಈಶಾನ್ಯ ಗಡಿ ಪ್ರದೇಶದಲ್ಲಿ ಈಚಿನ ಘಟನೆಗಳ ದೃಷ್ಟಿಯಿಂದ ಭಾರತ - ಚೀಣ ಮಾತುಕತೆ ಸಲಹೆಯನ್ನು ಹಿಂತೆಗೆದುಕೊಳ್ಳುವಿರಾ ಎಂದು ವರದಿಗಾರನೊಬ್ಬ

ಕೇಳಿದಾಗ ನೆಹರು ತೊಡೆತಟ್ಟಿ ಹೇಳಿದರು: `ಏನೇ ಆದರೂ ಮಾತುಕತೆಗೆ ನಾನು ಸದಾ ಸಿದ್ಧ. ಆದರೆ ಅವರು ನಮ್ಮ ಬಗ್ಗೆ ಸೌಜನ್ಯ, ಗೌರವಗಳಿಂದಿರಬೇಕು. ಯಾರೊಡನೆ ಮಾತನಾಡಲು ನಾನು ಎಂದೂ ನಿರಾಕರಿಸಿಲ್ಲ~.

ಬರ‌್ಲಿನ್ ಗೋಡೆ ಕೆಡವುವಜೂತ್ಷಿ ಅವರ ಯತ್ನಕ್ಕೆಅಧಿಕಾರಿಗಳ ಅಡ್ಡಿ
ಬರ್ಲಿನ್, ಅ. 1 - ಬರ್ಲಿನ್ ಗಡಿ ಗೋಡೆಯನ್ನು ನಾಳೆ ಸುತ್ತಿಗೆಯಿಂದ ಕೆಡವಲು ಭಾರತದ ಶಾಂತಿವಾದಿ ಶ್ರೀ ತಾಪೇಶ್ವರನಾಥ ಜೂತ್ಷಿಯವರು ನಡೆಸಲಿರುವ ಯತ್ನವನ್ನು ತಾವು ಅಡ್ಡಿಪಡಿಸುವುದಾಗಿ ಪಶ್ಚಿಮ ಬರ್ಲಿನ್ ನಗರದ ಅಧಿಕಾರಿಗಳು ಇಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT