ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜು, ಹಿಮಪಾತಕ್ಕೆ ಸಂಪರ್ಕ ವ್ಯತ್ಯಯ

Last Updated 23 ಡಿಸೆಂಬರ್ 2013, 11:19 IST
ಅಕ್ಷರ ಗಾತ್ರ

ಶ್ರೀನಗರ, ಜೈಪುರ, ಜಮ್ಮು(ಪಿಟಿಐ): ಕಾಶ್ಮೀರ ಕಣಿವೆಯಲ್ಲಿ ಹಿಮಪಾತ ಮುಂದುವರಿದಿದ್ದು, ಜಮ್ಮು–ಶ್ರೀನಗರ ಸಂಪರ್ಕದ 300 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮಪಾತದಿಂದಾಗಿ ಎರಡನೇ ದಿನವೂ ಸಂಚಾರ ಬಂದ್ ಆಗಿದೆ. ರಾಜಸ್ಥಾನದಲ್ಲೂ ದಟ್ಟ ಮಂಜು ಕವಿದಿದ್ದು, ರಸ್ತೆ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.

ಶ್ರೀನಗರ ಮತ್ತು ಜಮ್ಮು, ಕಾಶ್ಮೀರದಲ್ಲಿ ಹಿಮಪಾತದ ಜತೆ ಭಾನುವಾರ ರಾತ್ರಿ 0.5 ಮಿ.ಮೀ. ಮಳೆಯೂ ಬಿದ್ದಿದ್ದು, ಕನಿಷ್ಠ ತಾಪಮಾನ 0.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶನಿವಾರ ರಾತ್ರಿ 0.3ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಸ್ಥಾನದ ಬಹುತೇಕ ಕಡೆ ಎರಡನೇ ದಿನವೂ ದಟ್ಟ ಮಂಜು ಕವಿದಿರುವುದರಿಂದ ದಾರಿ ಸರಿಯಾಗಿ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಸ್ತೆ, ಸಂಚಾರ ಮತ್ತು ರೈಲು ಸಂಚಾರ ವ್ಯತ್ಯಯವಾಗಿದೆ. 31 ರೈಲುಗಳು ತಡವಾಗಿ ಪ್ರಯಾಣ ಆರಂಭಿಸಿವೆ. ಆರು ರೈಲುಗಳ ಪ್ರಯಾಣದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಕನೇರ್ ನಲ್ಲಿ ರಾಜ್ಯದಲ್ಲೇ ಅತ್ಯಂತ ಕನಿಷ್ಠ 4.5 ಡಿ.ಸೆ. ತಾಪಮಾನ ದಾಖಲಾಗಿದೆ.

ಪ್ರಾಣಿಗಳ ರಕ್ಷಣೆ: ವಡೋದರದ ಸಯಾಜಿ ಬಾಗ್ ಪ್ರಾಣಿ ಸಂಗ್ರಹಾಲಯದಲ್ಲಿ 850 ಪ್ರಾಣಿ ಹಾಗೂ ಪಕ್ಷಿಗಳಿಗೆ ಚಳಿಯಿಂದ ರಕ್ಷಣೆ ಕೊಡಲು ಹಾಗೂ ಚಳಿಗಾಲದಲ್ಲಿ ಎರುರಾಗಬಹುದಾದ ಕಾಯಿಲೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ನಗರಸಭೆ ಆಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT