ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜುನಾಥನ ಗುಣಗಾನ

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

ಚಿತ್ರದ ಹೆಸರು `ಮಂಜುನಾಥ ಬಿ ಎ ಎಲ್‌ಎಲ್‌ಬಿ~. ನಾಯಕ ಜಗ್ಗೇಶ್. ಅಂದ ಮೇಲೆ `ಎದ್ದೇಳು ಮಂಜುನಾಥ ಚಿತ್ರದ ನೆನಪು ಇಲ್ಲದಿದ್ದರೆ ಹೇಗೆ? ಹೌದು. ಜಗ್ಗೇಶ್ ಮೊದಲಿಗೆ ಆ ಚಿತ್ರದ ನೆನಪಿಗೆ ಜಾರಿದರು. `ಎದ್ದೇಳು ಮಂಜುನಾಥ~ ತಮಗೆ ಐದು ವರ್ಷ ಬದುಕು ನೀಡಿತು. `ಮಂಜುನಾಥ ಬಿಎ ಎಲ್‌ಎಲ್‌ಬಿ~ ಮತ್ತೆ ಐದು ವರ್ಷ ಬದುಕು ನೀಡುವುದು ದಿಟ ಎಂದು ಭರವಸೆ ತುಂಬಿಕೊಂಡರು.

ಅದು `ಮಂಜುನಾಥ ಬಿಎ ಎಲ್‌ಎಲ್‌ಬಿ~ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. `ಯುವ ನಟರ ಸಿನಿಮಾಗಳು ಯಶಸ್ವಿಯಾದರೆ ಪರಭಾಷಾ ಚಿತ್ರಗಳನ್ನು ಕರ್ನಾಟಕದಿಂದ ಹೊರಗಿಡಬಹುದು. ಬಾಕ್ಸ್ ಆಫೀಸ್‌ನಲ್ಲಿ ಕನ್ನಡ ಚಿತ್ರಗಳಿಗೆ ಐದನೇ ಸ್ಥಾನ ದಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿದ್ದರೆ ಸಾಧನೆ ಸಾಧ್ಯ~ ಎಂದು ಜಗ್ಗೇಶ್ ಏರುದನಿಯಲ್ಲಿ ನುಡಿದರು.

ಚಿತ್ರಕ್ಕಾಗಿ ಜಗ್ಗೇಶ್ ಕವಿ ಜಿ.ಪಿ.ರಾಜರತ್ನಂ ಬರೆದಿರುವ `ಬ್ರಹ್ಮ ನಿಂಗೆ ಜೋಡಿಸ್ತೀನಿ..~ ಹಾಡನ್ನು ಹಾಡಿದ್ದಾರೆ. ಕೇವಲ ಒಂದು ಗಂಟೆಯಲ್ಲಿ ಜಗ್ಗೇಶ್ `ಬ್ರಹ್ಮ..~ ಹಾಡನ್ನು ಹಾಡಿ ಸಂಗೀತ ನಿರ್ದೇಶಕ ವಿನಯ್ ಚಂದ್ರ ಅವರಿಗೆ ಅಚ್ಚರಿಯುಂಟು ಮಾಡಿದರಂತೆ. ಚಿತ್ರದ ನಿರೂಪಣೆಯನ್ನು ಮೆಚ್ಚಿಕೊಂಡ ವಿನಯ್ ಚಂದ್ರ, `ಎರಡು ಕುಡಿತದ ಹಾಡು, ಮತ್ತೆರಡು ಯುಗಳ ಗೀತೆ ಚಿತ್ರದಲ್ಲಿವೆ~ ಎಂದರು.

`ಚಿತ್ರವಿಡೀ ಜಗ್ಗೇಶ್ ತಮ್ಮ ವಿಶೇಷ ಮ್ಯಾನರಿಸಂನಿಂದ ನಗಿಸುತ್ತಾರೆ. ಕೊನೆಯಲ್ಲಿ ಕತೆ ಇರುತ್ತದೆ. ಸಂಪೂರ್ಣ ಹಾಸ್ಯಮಯವಾದ ಈ ಸಿನಿಮಾವನ್ನು ನಿರ್ದೇಶಿಸುವುದೇ ಒಂದು ಖುಷಿ. ಜಗ್ಗೇಶ್ ಅವರ ನಟನೆಯನ್ನು ಕಂಡು ಬೆರಗಾದ ಸಂದರ್ಭಗಳು ಬಹಳಷ್ಟಿವೆ~ ಎಂದರು ನಿರ್ದೇಶಕ ಮೋಹನ್.

ನಟಿ ಸ್ಫೂರ್ತಿ ಅವರಿಗೆ ಜಗ್ಗೇಶ್, ಚಿತ್ರದಲ್ಲಿ ನಟಿಸುವುದು ಹೆಮ್ಮೆಯೊಂದಿಗೆ ಸಂತಸದ ವಿಚಾರವಂತೆ. `ಮಂಜುನಾಥ ಬಿ ಎ ಎಲ್‌ಎಲ್‌ಬಿ~ ಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ. ಇದೀಗ ಪ್ರಥಮ ಪ್ರತಿ ಸಿದ್ಧವಾಗುತ್ತಿದೆ. ಸಮಾರಂಭದಲ್ಲಿ ನಟರಾದ ಯೋಗೀಶ್, ಯಶ್, ನಟಿ ರಾಗಿಣಿ, ನಿರ್ಮಾಪಕ ಮುನಿರತ್ನ, ಥ್ರಿಲ್ಲರ್ ಮಂಜು, ದಿನೇಶ್ ಗಾಂಧಿ, ನಾಗೇಂದ್ರ ಮಾಗಡಿ, ಎನ್. ಎಂ. ಸುರೇಶ್, ಕೆ. ಮಂಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT