ಜೋಹಾನ್ಸ್ಬರ್ಗ್ (ಎಪಿ): ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೆಲಾ ಅವರ ಆರೋಗ್ಯ ಸುಧಾರಿಸಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
94 ವರ್ಷದ ಮಂಡೆಲಾ ಅವರನ್ನು ಶ್ವಾಸಕೋಶದ ಸೋಂಕು ಮತ್ತು ಮೂತ್ರ ಕೋಶದ ಚಿಕಿತ್ಸೆಗಾಗಿ ಡಿ.8ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು.