ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರ ಅಭಿವೃದ್ಧಿಗೆ ಅನುದಾನ

Last Updated 24 ಜನವರಿ 2012, 6:15 IST
ಅಕ್ಷರ ಗಾತ್ರ

`ಬೀದರ್: ಬೀದರ್ ತಾಲ್ಲೂಕಿನ 45 ಮಂದಿರಗಳ ಜೀರ್ಣೋದ್ಧಾರಕ್ಕೆ ರಾಜ್ಯ ಸರ್ಕಾರ 33.75 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಬಿಜೆಪಿ ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ಮಂದಿರ ಮತ್ತು ಮಠಗಳು ಶಿಥಿಲಗೊಂಡಿದ್ದರಿಂದ ಭಕ್ತರಿಗೆ ಅನಾನುಕೂಲ ಆಗುತ್ತಿದೆ. ಹೀಗಾಗಿ ಇವುಗಳ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ತಮ್ಮ ಬೇಡಿಕೆಗೆ ಸ್ಪಂದಿಸಿ 45 ಮಂದಿರ ಮತ್ತು ಸಮುದಾಯ ಭವನಗಳಿಗೆ ತಲಾ 75 ಸಾವಿರ ರೂಪಾಯಿಯಂತೆ ಅನುದಾನ ಮಂಜೂರು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅನುದಾನ ಮಂಜೂರಾದ ಮಂದಿರಗಳಲ್ಲಿ ಕಾಪಲಾಪುರದ ಮಲ್ಲಣ್ಣ ಮಂದಿರ, ಅಲ್ಲಾಪುರದ ಬೀರೇಶ್ವರ ಮಂದಿರ, ಅಲಿಯಂಬರ್‌ನ ಪರಮೇಶ್ವರ ಮಂದಿರ, ಚಿದ್ರಿಯ ಗಂಗಾಧರ ಮಠ, ಬೊಮ್ಮಗೊಂಡೇಶ್ವರ ಮಂದಿರ, ಅಮಲಾಪುರದ ಗಂಗಾಧರ ಶಿವಾಚಾರ್ಯ ಮಠ, ಯರನಳ್ಳಿಯ ನಾಗೇಶ್ವರ ಮಂದಿರ,
 
ಮಾಣಿಕೇಶ್ವರ ಮಂದಿರ, ವಿಲಾಸಪುರದ ಮುರಳಿ ಮಹಾರಾಜ ಮಂದಿರ, ಫತ್ತೇಪುರದ ಶಾಂತಲಿಂಗೇಶ್ವರ ಮಠ, ಬೊಮ್ಮಗೊಂಡೇಶ್ವರ ಮಂದಿರ, ಬೀರೇಶ್ವರ ಮಂದಿರ, ರಾಜನಾಳದ ಲಕ್ಷ್ಮಣ ಮಹಾರಾಜ ಮಂದಿರ, ಪೋಮಾ ತಾಂಡಾದ ಹನುಮಾನ ಮಂದಿರ, ಬೇನಕನಳ್ಳಿಯ ಭವಾನಿ ಮಾತೆ ಮಂದಿರ, ಮಿರ್ಜಾಪುರದ ಹನುಮಾನ ಮಂದಿರ, ಚಿಲ್ಲರ್ಗಿಯ ಹಿರೇಮಠ, ಕಂಗಟಿಯ ಬೀರಪ್ಪ ಮಂದಿರ, ಯದಲಾಪುರದ ದತ್ತಾನಂದ ಮಠ, ಮರಕಲ್‌ನ ಬಸವೇಶ್ವರ ಮಂದಿರ, ರುಕ್ಮಿಣಿ ಪಾಂಡುರಂಗ ಮಂದಿರ, ಬಸಂತಪುರದ ಹನುಮಾನ ಮಂದಿರ, ಜನವಾಡದ ಪಾಂಡುರಂಗ ಮಂದಿರ, ಬಸವೇಶ್ವರ ಮಂದಿರ, ಕನಕದಾಸ ಮಂದಿರ, ಖಾಜಾಪುರದ ಅಡಿಮಲ್ಲಮ್ಮ ಮಂದಿರ, ಗುಮ್ಮಾದ ಹನುಮಾನ ಮಂದಿರ, ಶ್ರೀಮಂಡಲ್‌ನ ಹನುಮಾನ ಮಂದಿರ, ಬಸವೇಶ್ವರ ಮಂದಿರ, ಚಿಮಕೋಡ್‌ನ ಬೊಮ್ಮಗೊಂಡೇಶ್ವರ ಮಂದಿರ, ಇಸ್ಲಾಂಪುರದ ಭವಾನಿ ಮಂದಿರ, ಸಾಂಗ್ವಿಯ ವೀರಭದ್ರೇಶ್ವರ ಮಂದಿರ, ಸಿದ್ಧಾಪುರದ ಹನುಮಾನ ಮಂದಿರ, ಬೊಮ್ಮಗೊಂಡೇಶ್ವರ ಭವನ, ನಂದಗಾಂವ್‌ನ ಬೀರೇಶ್ವರ ಮಂದಿರ, ಚಿಲ್ಲರ್ಗಿಯ ಪಾಂಡುರಂಗ ಮಂದಿರ, ಚಿದ್ರಿಯ ಬೀರೇಶ್ವರ ಮಂದಿರ, ಸೋಲಪುರದ ಬೀರೇಶ್ವರ ಮಂದಿರ, ಚಾಂಬೋಳ್‌ನ ಭವಾನಿ ಮಾತಾ ಮಂದಿರ, ನಾಗದಗೇರಿಯ ಬೊಮ್ಮಗೊಂಡೇಶ್ವರ ಮಂದಿರ, ಕನ್ನಳ್ಳಿಯ ಬೀರಪ್ಪ ಮಂದಿರ, ಹಳ್ಳದಕೇರಿಯ ದುರ್ಗಾ ಮಂದಿರ, ಮನ್ನಳ್ಳಿಯ ಲಿಂಗಾಯತ ಸಮುದಾಯ ಭವನ ಮತ್ತು ಕಾಡವಾದದ ಲಿಂಗಾಯತ ಸಮುದಾಯ ಭವನ ಸೇರಿವೆ ಎಂದು ತಿಳಿಸಿದ್ದಾರೆ.

ತಮ್ಮ ಬೇಡಿಕೆಗೆ ಸ್ಪಂದಿಸಿ ದೇವಸ್ಥಾನಗಳಿಗೆ ಅನುದಾನ ಮಂಜೂರು ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ಕೃತಜ್ಞತೆ ಅರ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮಂದಿರ ಅಭಿವೃದ್ಧಿಗೆ ಅನುದಾನ~

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT