ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಲಿಕೆಗೆ ನಿರ್ಬಂಧ ಬೇಡ: ಧರಣಿದೇವಿ

Last Updated 8 ಏಪ್ರಿಲ್ 2013, 4:47 IST
ಅಕ್ಷರ ಗಾತ್ರ

ಮೈಸೂರು: `ಶಿಕ್ಷಣದ ಹೆಸರಿನಲ್ಲಿ ಮಕ್ಕಳಿಗೆ ನಿರ್ಬಂಧ ವಿಧಿಸದೆ ಅವರ ಇಷ್ಟಕ್ಕೆ ತಕ್ಕಂತೆ ಬೆಳೆಯಲು ಬಿಡಬೇಕು. ಅವರಲ್ಲಿನ ಪ್ರತಿಭೆ ಗುರುತಿಸಿ ಅವಕಾಶ ಕಲ್ಪಿಸಬೇಕು' ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು.

ಸರಸ್ವತಿಪುರಂನ ಜೆಎಸ್‌ಎಸ್ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜೆಎಸ್‌ಎಸ್ ಮಹಾ ವಿದ್ಯಾಪೀಠ ಹಾಗೂ ಜೆಎಸ್‌ಎಸ್ ಕಲಾಮಂಟಪ ವತಿಯಿಂದ ಭಾನುವಾರ ಏರ್ಪಡಿಸಿದ್ದ `ಎಳೆಯರ ಮೇಳ-2013'ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

`ಎಲ್ಲರ ಜೀವನದಲ್ಲೂ ಬಾಲ್ಯ ಮಹತ್ವದ್ದಾಗಿದ್ದು, ವ್ಯಕ್ತಿತ್ವ ರೂಪಿಸುವ ಅವಧಿಯಾಗಿದೆ. ಬಹುತೇಕ ಸಂದರ್ಭಗಳಲ್ಲಿ ಮಕ್ಕಳನ್ನು ನಿರ್ಜೀವ ವಸ್ತುಗಳಿಗೆ ಹೋಲಿಕೆ ಮಾಡಲಾಗುತ್ತದೆ. ಉದಾಹರಣೆಗೆ ಮಕ್ಕಳು ಮಣ್ಣಿನ ಮುದ್ದೆ, ಮಕ್ಕಳು ಶಿಲೆಯಂತೆ, ಮಕ್ಕಳು ಉದ್ಯಾನದಲ್ಲಿನ ಸುಂದರ ಪುಷ್ಕಗಳು ಎಂದು. ಯಾವುದೇ ಕಾರಣಕ್ಕೂ ಮಕ್ಕಳನ್ನು ನಿರ್ಜೀವ ವಸ್ತುಗಳಿಗೆ ಹೋಲಿಸಬಾರದು. ಅವ ರಲ್ಲೂ ಭಾವನೆ, ಚಿಂತನೆ, ಹೀಗೆಯೇ ಆಗಬೇಕು ಎಂಬ ಗುರಿ, ಆಸೆ ಇರುತ್ತವೆ ಎಂಬುದನ್ನು ಪೋಷ ಕರು ಅರಿಯಬೇಕು. ಮಕ್ಕಳ ಇಷ್ಟಕ್ಕೆ ತಕ್ಕಂತೆ ಕಲಿ ಯಲು ಅವಕಾಶ ನೀಡಬೇಕು' ಎಂದು ತಿಳಿಸಿದರು.

`ಎರಡು-ಮೂರು ದಶಕಗಳ ಹಿಂದೆ ಪಠ್ಯದ ಹೊರೆ ಕಡಿಮೆ ಇತ್ತು. ರಜಾ ದಿನಗಳಲ್ಲಿ ಆಟದ ಜತೆ ಪಾಠ, ನಟನೆ ಕಲಿಯಲು ಅವಕಾಶವಿತ್ತು. ಆದರೆ, ಇಂದಿನ ಮಕ್ಕಳಿಗೆ ಪಠ್ಯ ಭಾರವಾಗುತ್ತಿದೆ. ಹೀಗಾಗಿ ಬೇಸಿಗೆ ಶಿಬಿರ ಆಯೋಜಿಸುವುದು ಒಂದು ರೀತಿಯಲ್ಲಿ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ಇಂತಹ ಶಿಬಿರಗಳಲ್ಲಿ ಮಕ್ಕಳಿಗೆ ಪಠ್ಯೇತರ ವಿಷಯಗಳನ್ನೇ ಹೇಳಿ ಕೊಡಬೇಕು. ಅವರಲ್ಲಿರುವ ಪ್ರತಿಭೆಯನ್ನು ಹೊರತರಬೇಕು' ಎಂದರು.

ರಂಗತಜ್ಞ ಡಾ.ನ.ರತ್ನ ಮಾತನಾಡಿ, `ನಾವು ಚಿಕ್ಕ ವರಿದ್ದಾಗ ಬೇಸಿಗೆ ರಜೆ ಬಂದರೆ ಊರು ಸುತ್ತು ವುದು, ಈಜುವುದು, ಮರ ಹತ್ತುವುದು, ಗಾಳಿಪಟ ಹಾರಿಸೋದು, ಬುಗುರಿ ಆಡುವುದನ್ನು ಮಾಡು ತ್ತಿದ್ದೆವು. ಬದಲಾದ ಕಾಲಘಟ್ಟದಲ್ಲಿ ಬೇಸಿಗೆ ಶಿಬಿರಗಳು ಆರಂಭವಾಗಿದ್ದು, ಮಕ್ಕಳಿಗೆ ರಜೆ ಇಲ್ಲ ದಂತಾಗಿದೆ. ಆದಾಗ್ಯೂ, ಮಕ್ಕಳು ತಮ್ಮ ಪ್ರತಿಭೆ ಯನ್ನು ತಾವೇ ಗುರುತಿಸಿಕೊಂಡು ಮುಂದೆ ಬರಬೇಕು. ತಮಗೆ ಇಷ್ಟವಾಗುವ ಕ್ಷೇತ್ರದಲ್ಲಿ ಮುಂದುವರಿಯಬೇಕು' ಎಂದು ಹೇಳಿದರು.

ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ.ರವಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಚಾಲಕ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT