ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ದಸರೆಗೆ ವಿಶೇಷ ಮೆರುಗು

Last Updated 23 ಸೆಪ್ಟೆಂಬರ್ 2011, 10:05 IST
ಅಕ್ಷರ ಗಾತ್ರ

ಮೈಸೂರು: ಮಕ್ಕಳ ದಸರೆಯಲ್ಲಿ ಈ ಬಾರಿ ಹಲವು ಬಗೆಯ ವಿಭಿನ್ನ ಕಾರ್ಯಕ್ರಮಗಳು ಮಕ್ಕಳನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯಲಿವೆ. ಹಾವು ಗಳ ಮಾಹಿತಿ, ಪವಾಡ ರಹಸ್ಯ ಬಯಲು, ಮಾತನಾಡುವ ಬೊಂಬೆ ಪ್ರದರ್ಶನದ ಮೂಲಕ ವಿಶೇಷ ಮೆರಗು ನೀಡಲಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಕ್ಕಳ ದಸರಾ ಉಪಸಮಿತಿ ಅಧ್ಯಕ್ಷೆ ಚಿಕ್ಕಮ್ಮ ಬಸವ ರಾಜು, `ಸೆ. 29ರಿಂದ ಅ. 3ರ ವರೆಗೆ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಮಕ್ಕಳ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಪಾಲ್ಗೊಳ್ಳ ಲಿದ್ದಾರೆ~ ಎಂದು ಹೇಳಿದರು.

`ಸೆ. 29ರಂದು 1 ರಿಂದ 10ನೇ ತರಗತಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ ಮಕ್ಕಳಿಂದ ಯಕ್ಷಗಾನ ಕಾರ್ಯ ಕ್ರಮ, ಸೆ. 30ರಂದು ಜಾನಪದ ನೃತ್ಯ ಸ್ಪರ್ಧೆ, ಅಂಗವಿಕಲ ಮಕ್ಕಳಿಂದ ಜಾನ ಪದ ನೃತ್ಯ, ಅ. 1ರಂದು ಭರತನಾಟ್ಯ ಸ್ಪರ್ಧೆ, ಸುಮಾರಾಜ್ ಅವರಿಂದ ಮಾತನಾಡುವ ಬೊಂಬೆ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾ ಗಿದೆ~ ಎಂದರು.

`ಅ. 2ರಂದು ಅಂಗವಿಕಲ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ನವೋದಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ, ಸ್ನೇಕ್ ಶ್ಯಾಮ್ ಅವರಿಂದ ಮಕ್ಕಳಿಗೆ ಹಾವುಗಳ ಬಗ್ಗೆ ಅರಿವು ಕಾರ್ಯಕ್ರಮ, ಅ. 3ರಂದು ಯೋಗ ಪ್ರದರ್ಶನ, ಶ್ರೀಧರ್ ಅವರಿಂದ ಪವಾಡ ರಹಸ್ಯ ಬಯಲು ಪ್ರದರ್ಶನ ಹಾಗೂ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಕಕ್ರಮಗಳು ಜರುಗ ಲಿವೆ~ ಎಂದು ತಿಳಿಸಿದರು.
`ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿದ್ದು, ಅದ ರಲ್ಲಿ ವಿಜೇತರಾದ ತಂಡಕ್ಕೆ ಮಕ್ಕಳ ದಸರಾದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಬಸ್ಸಿನ ವ್ಯವಸ್ಥೆ ಮಾಡ ಲಾಗಿದೆ~ ಎಂದರು.

ಜಿಲ್ಲಾ ಪಂಚಾಯಿತಿ ಸಿಇಓ ಜಿ. ಸತ್ಯವತಿ, ದಸರಾ ಉಪಸಮಿತಿ ಉಪಾಧ್ಯಕ್ಷರಾದ ಗುರುಮಲ್ಲಮ್ಮ, ಮರಿಯಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT