ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲೂ ಪ್ರಭಾವ

Last Updated 5 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ತಾಯಿ ಖಿನ್ನತೆಯ ಇತಿಹಾಸ ಹೊಂದಿದ್ದರೆ ಮಕ್ಕಳು ನಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವ ಅಪಾಯ ಹೆಚ್ಚು ಎಂದು ಹೊಸ ಸಂಶೋಧನೆಯೊಂದು ವರದಿ ಮಾಡಿದೆ.

ಅಪ್ಪುಗೆ, ಮುದ್ದು, ನಗುವಿನಂತಹ ಸಾಮಾನ್ಯ ವಾತ್ಸಲ್ಯಗಳ ಕೊರತೆಯಿಂದ ಮಗು ಖಿನ್ನತೆಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎಂದು ಮಿಚಿಗನ್ ವಿಶ್ವವಿದ್ಯಾಲಯ ಹಾಗೂಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಸಂಶೋಧಕರು 140 ತಾಯಂದಿರು ಹಾಗೂ 202 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿದ್ದರು. ಖಿನ್ನತೆಗೆ ಒಳಗಾದ ಹಾಗೂ ಒಳಗಾಗದ ತಾಯಂದಿರ ಮಕ್ಕಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ನಂತರ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಹಾಗೂ ನಕಾರಾತ್ಮಕ ಭಾವನೆಗಳನ್ನು ಪ್ರಚೋದಿಸುವ ಕೆಲಸಗಳನ್ನು ನೀಡಲಾಯಿತು. ಖಿನ್ನತೆಯ ಇತಿಹಾಸ ಹೊಂದಿದ್ದ ತಾಯಂದಿರ ಮಕ್ಕಳು ಅಂತಹದೇ ಮನೋಭಾವವನ್ನು ಪ್ರದರ್ಶಿಸಿದ್ದು ವರದಿಯಾಯಿತು.

ಗುಣಾತ್ಮಕ ಚಿಂತನೆಯ ಕೊರತೆಯೂ ಕೂಡ ಖಿನ್ನತೆಗೆ ಕಾರಣ ಎಂಬುದು ಅಧ್ಯಯನದಿಂದ ತಿಳಿದು ಬಂದಿತು. ಅದೇನೇ ಇರಲಿ, ಪಾಲಕರು ಅಥವಾ ಪೋಷಕರು ಮಕ್ಕಳ ಹತಾಶೆ ಹಾಗೂ ದುಃಖವನ್ನು ಕಡೆಗಣಿಸಬಾರದು. ಈ ಮನೋಭಾವ ಮುಂದೆ ಅವರನ್ನು ಖಿನ್ನತೆಗೆ ಗುರಿಮಾಡುತ್ತದೆ ಎಂದು ಹಿರಿಯ ಸಂಶೋಧಕ ನೆಸ್ಟೊರ್ ಲೊಪೇಜ್ ದುರನ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT