ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ: ಜನವರಿಯಿಂದ ದಾಖಲಾತಿ ಪ್ರಕ್ರಿಯೆ ಆರಂಭ

Last Updated 4 ಡಿಸೆಂಬರ್ 2012, 8:15 IST
ಅಕ್ಷರ ಗಾತ್ರ

ಮಡಿಕೇರಿ: ದುರ್ಬಲ ವರ್ಗದ ಮಕ್ಕಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿಯೂ ವ್ಯಾಸಂಗ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಈಗಾಗಲೇ ಜಾರಿಗೆ ತಂದಿದ್ದು, ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ  ಜನವರಿಯಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅವರು, 6ರಿಂದ 14 ವರ್ಷ ವಯೋಮಿತಿಯ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ (1 ರಿಂದ 8ನೇ ತರಗತಿವರೆಗಿನ) ಶಿಕ್ಷಣವನ್ನು ನೆರೆಹೊರೆಯ ಶಾಲೆಯಲ್ಲಿ ಒದಗಿಸಬೇಕೆಂದು ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದಿದ್ದಾರೆ.

ಯಾವ ಶಾಲೆಗಳಿಗೆ ಅನ್ವಯಿಸುತ್ತದೆ?: ಸರ್ಕಾರದಿಂದ ಪೂರ್ಣವಾಗಿ ಅಥವಾ ಭಾಗಶಃ ಅನುದಾನ ಪಡೆಯುತ್ತಿರುವ ಶಾಲೆ ಹಾಗೂ ಯಾವುದೇ ರೀತಿಯ ಅನುದಾನ ಅಥವಾ ಸಹಾಯಧನವನ್ನು  ಪಡೆಯದೇ ಇರುವ  ಅನುದಾನರಹಿತ ಶಾಲೆಗಳು ಇದರ ವ್ಯಾಪ್ತಿಗೆ ಸೇರಿಕೊಳ್ಳುತ್ತವೆ.

ಯಾರಿಗೆ ಅನ್ವಯಿಸುವುದಿಲ್ಲ: ಅಲ್ಪ ಸಂಖ್ಯಾತ ಸಂಸ್ಥೆಗಳೆಂದು ಮಾನ್ಯತೆ ಪಡೆದ ಶಾಲೆಗಳಿಗೆ ಅನ್ವಯವಾಗುವುದಿಲ್ಲ.  ಕರ್ನಾಟಕ ರಾಜ್ಯದಲ್ಲಿ ಈ ರೀತಿ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳೆಂದು ಮಾನ್ಯತೆ ಪಡೆದ ಶಾಲೆಗಳ ಪಟ್ಟಿಯನ್ನು ಡಿಡಿಡಿ.ಠ್ಚಟಟ್ಝಛಿಛ್ಠ್ಚಠಿಜಿಟ್ಞ.ಚ್ಟ.್ಞಜ್ಚಿ.ಜ್ಞಿ ರಲ್ಲಿ ಪ್ರಕಟಿಸಲಾಗಿದೆ.

ಹಣಕಾಸಿನ ಜವಾಬ್ದಾರಿ: ಈ ಕಾಯಿದೆಯ ಅನುಷ್ಠಾನಕ್ಕೆ ಅಗತ್ಯವಾದ ಹಣಕಾಸು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜವಾಬ್ದಾರಿಯನ್ನು ಹೊಂದಿವೆ. ಈ ಸಂಬಂಧ ರಾಜ್ಯಗಳಿಗೆ ತಗಲಬಹುದಾದ ಹೆಚ್ಚುವರಿ ವೆಚ್ಚಗಳ ಅಂದಾಜನ್ನು ಕೇಂದ್ರವು ತಯಾರಿಸಿ ರಾಜ್ಯಗಳಿಗೆ ತನ್ನ ಪಾಲಿನ ನೆರವನ್ನು ಒದಗಿಸಬೇಕು. ರಾಜ್ಯ ಸರ್ಕಾರವು ತನ್ನ ಪಾಲಿನ ಹಣಕಾಸು ಒದಗಿಸಬೇಕು. ರಾಜ್ಯ ಸರ್ಕಾರವು ತನ್ನ ಪಾಲಿನ ಹಣಕಾಸು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ.

ಪೋಷಕರ ಜವಾಬ್ದಾರಿ:
ಪ್ರತಿಯೊಬ್ಬ ಮಗುವನ್ನು ತಮ್ಮ ನೆರೆ ಹೊರೆಯ ಶಾಲೆಯಲ್ಲಿ ದಾಖಲು ಮಾಡಿ ಶಿಕ್ಷಣವನ್ನು (1ರಿಂದ 8ನೇ ತರಗತಿವರೆಗೆ) ಕೊಡಿಸುವುದು ಅಂತಹ ಮಗುವಿನ ಪಾಲಕರು, ಪೋಷಕರು ಅಥವಾ ಮಗುವಿನ ಜವಾಬ್ದಾರಿ ಹೊಂದಿದವರ ಕರ್ತವ್ಯವಾಗಿದೆ.
ಶಾಲೆಗಳ ಮತ್ತು ಶಿಕ್ಷಕರ ಜವಾಬ್ದಾರಿ:ಈ ಕಾಯಿದೆಯ ಅಡಿಯಲ್ಲಿ ಶಾಲೆಯಲ್ಲಿ ದಾಖಲಾದ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವುದು ಪ್ರತಿಯೊಂದು ಶಾಲೆಯ ಕರ್ತವ್ಯವಾಗಿದೆ.

ಮಕ್ಕಳಿಂದ ಅಥವಾ ಪೋಷಕರಿಂದ ಯಾವುದೇ ರೀತಿಯ ದೇಣಿಗೆ ಇತ್ಯಾದಿಗಳನ್ನು ಪಡೆಯುವಂತಿಲ್ಲ ಹಾಗೂ ಮಗುವನ್ನು ಅಥವಾ ಪಾಲಕ/ಪೋಷಕರನ್ನು ಯಾವುದೇ ರೀತಿಯ ಆಯ್ಕೆ ಪರೀಕ್ಷಗೆ ಒಳಪಡಿಸುವಂತಿಲ್ಲ.

ಮೀಸಲಾತಿ: ಅನುದಾನಿತ ಶಾಲೆಗಳಲ್ಲಿ 1 ರಿಂದ 8ನೇ ತರಗತಿವರೆಗೆ ಪ್ರತಿ ತರಗತಿಯಲ್ಲಿ ಲಭ್ಯವಿರುವ ಸೀಟುಗಳ ಪೈಕಿ ಆಯುಕ್ತರ ಸುತ್ತೋಲೆ ಸಂಖ್ಯೆ ಆರ್.ಟಿ.ಇ.01.2012-13. 2012ರ ಮೇ 10 (ಡಿಡಿಡಿ.ಠ್ಚಟಟ್ಝಛಿಛ್ಠ್ಚಠಿಜಿಟ್ಞ.ಚ್ಟ.್ಞಜ್ಚಿ.ಜ್ಞಿ)  ರಲ್ಲಿ ಸೂಚಿಸಲಾದ ಸೂತ್ರದ ಪ್ರಕಾರ ಮತ್ತು ಶಾಲೆಗೆ ದುರ್ಬಲ ವರ್ಗದ ಮಕ್ಕಳಿಗೆ ಸೀಟುಗಳನ್ನು ಮೀಸಲಿಡಬೇಕು.

ಪ್ರವೇಶ ವಂಚಿತ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಶೇ.25 ರಷ್ಟು ಸೀಟುಗಳನ್ನು ಮೀಸಲಾತಿ ಇಟ್ಟು ದಾಖಲಾತಿ ಮಾಡಿಕೊಳ್ಳಬೇಕಾಗಿರುತ್ತದೆ.

ಅವಕಾಶ ವಂಚಿತ ಮತ್ತು ದುರ್ಬಲವರ್ಗದ ಮಕ್ಕಳಿಗೆ ಮೀಸಲಾದ ಕೋಟಾದ ಅಡಿಯಲ್ಲಿ ದಾಖಲಾದ ಮಕ್ಕಳಿಂದ ಶಾಲೆಯವರು ಯಾವುದೇ ರೀತಿಯ ಶುಲ್ಕವನ್ನು ವಸೂಲು ಮಾಡುವಂತಿಲ್ಲ.

ಶುಲ್ಕ ಮರುಪಾವತಿ ಅವಕಾಶ:
ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಮೀಸಲಾತಿ ಕೋಟಾದ ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾದ ಮಕ್ಕಳ ಪರವಾಗಿ ರಾಜ್ಯ ಸರ್ಕಾರವು ಪ್ರತಿ ವಿದ್ಯಾರ್ಥಿಯ ಶಿಕ್ಷಣದ ಮೇಲೆ ವ್ಯಯ ಮಾಡಲಾಗುವ ತಲಾವಾರು ವೆಚ್ಚದ ಆಧಾರದ ಮೇಲೆ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ ತಲಾ ಗರಿಷ್ಟ ರೂ.11,848 ಮಿತಿಯೊಳಗೆ ಹಾಗೂ ಅನುಮತಿ ನಡೆಸಲಾಗುತ್ತಿರುವ ಪೂರ್ವ ಪ್ರಾಥಮಿಕ ಶಾಲಾ ಹಂತಕ್ಕೆ ತಲಾ ಗರಿಷ್ಟ ರೂ.5,924 ಶಾಲೆಗೆ ಸರ್ಕಾರದಿಂದ ಮರುಪಾವತಿ ಮಾಡಲು ಅವಕಾಶ ಇದೆ.

ಉಲ್ಲಂಘನೆ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲು ಮಂಜೂರಾತಿ ಪ್ರಾಧಿಕಾರ: ಕಾಯಿದೆ ಉಲ್ಲಂಘನೆಯ ಕ್ರಮ ರಾಜ್ಯದಲ್ಲಿ ಕಾಯಿದೆ ಮತ್ತು ನಿಯಮಗಳ ಉಲ್ಲಂಘನೆಯ ವಿರುದ್ಧ ಕ್ರಮಕ್ಕೆ ಮಂಜೂರಾತಿ ನೀಡಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಕ್ಷಮ ಪ್ರಾಧಿಕಾರಿ. ಕಾಯಿದೆಯ ಆಶಯವನ್ನು ಸಾಕಾರಗೊಳಿಸಲು ಶಿಕ್ಷಣ ಅಧಿಕಾರಿಗಳ ಜೊತೆ ಖಾಸಗಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಾಲಾಭಿವದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು, ಪೋಷಕರು ಮತ್ತು ಸಮುದಾಯದವರು ಸಹಕರಿಸಬೇಕೆಂದು ಶಿಕ್ಷಣಾಧಿಕಾರಿ ಸುರೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT