ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸೃಜನೋತ್ಸವ 22ಕ್ಕೆ-1716 ಚಿಣ್ಣರು ಭಾಗಿ

Last Updated 21 ಜನವರಿ 2012, 8:05 IST
ಅಕ್ಷರ ಗಾತ್ರ

ಮಂಗಳೂರು: ನಗರ ಹೊರವಲಯದ ಪಿಲಿಕುಳದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಬಾಲ ಭಾರತ್ ಸೃಜನೋತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳಿಂದ 1716 ಮಕ್ಕಳು ಪಾಲ್ಗೊಳ್ಳಲಿದ್ದಾರೆ.

ಇವರಲ್ಲಿ 350 ಮಂದಿ ಮಕ್ಕಳು ಹೊರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ. ಇವರ ಬೆಂಗಾವಲಿಗೆ 48 ಮಂದಿ  ಸಿಬ್ಬಂದಿ ಹಾಗೂ 9 ಅಧಿಕಾರಿಗಳು ಇರುತ್ತಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ 866 ಮಕ್ಕಳು ಮತ್ತು ಅವರ ಬೆಂಗಾವಲಿಗೆ 70 ಮಂದಿ ಹಾಗೂ 30 ಅಧಿಕಾರಿಗಳು ಇರುತ್ತಾರೆ. ಉಡುಪಿ ಜ್ಲ್ಲಿಲೆಯಿಂದ 150 ಮಕ್ಕಳು ಬೆಂಗಾವಲಿಗೆ 15 ಜನ 4 ಅಧಿಕಾರಿಗಳು ಇರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ 350 ಮಕ್ಕಳು ಇವರಿಗೆ ಬೆಂಗಾವಲಿಗೆ 30 ಜನ ಹಾಗೂ 8 ಅಧಿಕಾರಿಗಳು ಇರುತ್ತಾರೆ.

ಸುರಕ್ಷತೆಯ ದೃಷ್ಟಿಯಿಂದ ಮಕ್ಕಳಿಗೆ ನಗರದ ವಿವಿಧ ಆರು ಕಡೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ  ಹೊರ ರಾಜ್ಯದ 450 ಮಕ್ಕಳಿಗೆ ವಸತಿ ಕಲ್ಪಿಸಲಾಗಿದೆ.

ವಾಮಂಜೂರಿನ ಮಂಗಳಜೋತಿ ಸಮಗ್ರ ಶಾಲೆಯಲ್ಲಿ 200 ಮಕ್ಕಳು, ವಿದ್ಯಾಜ್ಯೋತಿ ಶಾಲೆಯಲ್ಲಿ 200 ಮಕ್ಕಳು, ಪಿ.ವಿ.ಎಸ್. ಸರ್ಕಲ್ ಬಳಿಯಿರುವ ಕುದ್ಮುಲ್ ರಂಗರಾವ್ ವಸತಿ ನಿಲಯದಲ್ಲಿ 100 ಮಕ್ಕಳು ವಾಸ್ತವ್ಯ ಹೂಡುವರು.

ಸ್ಕೌಟ್ ಭವನದಲ್ಲಿ 200 ಮಕ್ಕಳು ವಾಸ್ತವ್ಯ ಹೂಡಲಿದ್ದಾರೆ. ಈ ಆರು ವಸತಿ ಕೇಂದ್ರಗಳಲ್ಲಿ ಮಕ್ಕಳಿಗೆ ಹಾಸಿಗೆ, ಹೊದಿಕೆ, ದಿಂಬು, ಸೊಳ್ಳೆ ಬತ್ತಿ, ನೀರಿನ ಬಕೆಟ್‌ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸೃಜನೋತ್ಸವದಲ್ಲಿ ಭಾಗವಹಿಸಲಿರುವ ಮಕ್ಕಳಿಗೆ, ಸ್ವಯಂಸೇವಕರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ,ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ನಡೆಯುವ ನಾಲ್ಕೂ ದಿನ 3000ಕ್ಕೂ ಹೆಚ್ಚು ಮಕ್ಕಳಿಗೆ ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಇತರ ಕಡೆಗಳಿಂದ ಆಗಮಿಸುವ ಮಕ್ಕಳನ್ನು ವಸತಿ ಕಲ್ಪಿಸಿರುವ  ಕಡೆ ಕರೆದೊಯ್ಯಲು 50 ಬಸ್‌ಗಳನ್ನು ನಿಯೋಜಿಸಲಾಗಿದೆ.

ಭಾಲಭಾರತ್ ಸೃಜನೋತ್ಸವದ ಉದ್ಘಾಟನೆ ಭಾನುವಾರ ಸಂಜೆ 5.30ಕ್ಕೆ ನಿಗದಿಯಾಗಿದೆ.
ಮಳಿಗೆ ಲಭ್ಯ: ಪಿಲಿಕುಳ ನಿಸರ್ಗಧಾಮದಲ್ಲಿರುವ ಅರ್ಬನ್ ಹಾಥ್‌ನಲ್ಲಿ ನಡೆಯಲಿರುವ ಮಕ್ಕಳ ಸೃಜನೋತ್ಸವ  ಸಂದರ್ಭದಲ್ಲಿ ಆಹಾರ ಮಳಿಗೆ ತೆರೆಯಲಾಗುವುದು. ಶಾಖಾಹಾರಿ ಮಳಿಗೆ, ಐಸ್‌ಕ್ರೀಮ್ ಮಳಿಗೆ, ಕಬ್ಬಿನ ಹಾಲು, ತಂಪುಪಾನೀಯಗಳ ಮಳಿಗೆ ತೆರೆಯಲು ಅವಕಾಶ ಇದೆ. ಮಾಹಿತಿಗಾಗಿ ದ.ಕ. ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರನ್ನು (ಮೊ: 9341723429) ಸಂಪರ್ಕಿಸಬಹುದು.

ಇಂದು ಪರಿಶೀಲನೆ: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಸಿ.ಸಿ.ಪಾಟೀಲ ಅವರು ಶನಿವಾರ 5 ಗಂಟೆಗೆ  ಪಿಲಿಕುಳದಲ್ಲಿ ಸೃಜನೋತ್ಸವ ನಡೆಯುವ ಕಾರ್ಯಕ್ರಮ ಸ್ಥಳಕ್ಕೆ ತೆರಳಿ ಪರಿಶಿಲನೆ ನಡೆಸುವರು. ಕಾರ್ಯಕ್ರಮ ತಯಾರಿ ಕುರಿತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT