ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕು ಸಂರಕ್ಷಣೆಗೆ ಸಲಹೆ

Last Updated 5 ಫೆಬ್ರುವರಿ 2011, 13:30 IST
ಅಕ್ಷರ ಗಾತ್ರ

ಹನುಮಸಾಗರ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಕಾನೂನುಗಳು ಮತ್ತು ವಿಶೇಷ ಹಕ್ಕುಗಳಿವೆ. ಅವುಗಳನ್ನು ಪ್ರೋತ್ಸಾಹಿಸುವ ಮನಸ್ಸು ಪಾಲಕರಲ್ಲಿಲ್ಲ ಎಂದು ವಕೀಲ ಮಹಾಂತೇಶ ಕುಷ್ಟಗಿ ಹೇಳಿದರು.

ಶನಿವಾರ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಎನ್‌ಪಿಇಜಿಇಎಲ್ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳು ಹಾಗೂ ಸಂರಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೆಲ್ಲ ಪಾಲಕರಿಗೆ ಗೊತ್ತಿದ್ದರೂ ನಿರುತ್ಸಾಹದಿಂದಿರುವುದೇ ಮಕ್ಕಳು ಅಪರಾಧ ಲೋಕದಲ್ಲಿ ಕಾಣಲು ನೇರವಾಗಿ ಅವರೇ ಕಾರಣರಾಗಿದ್ದಾರೆ, ಹತ್ತಾರು ಹೊಂಗನಸನ್ನು ತುಂಬಿಕೊಂಡಿರುವ ಎಳೆಯ ಮಕ್ಕಳು ಬೆಳೆಯಲು ಪ್ರೋತ್ಸಾಹ ನೀಡಿ ಅವರನ್ನು ಶೋಷಣೆಯಿಂದ ಮುಕ್ತಗೊಳಿಸಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮುಖ್ಯಶಿಕ್ಷಕ ಖಾಸೀಮಾಬ ಬಂಗಾರಗುಂಡು ಮಾತನಾಡಿ ಮಕ್ಕಳನ್ನು ಸನ್ಮಾರ್ಗದೆಡೆಗೆ ಸಾಗಿಸಲು ಸರ್ಕಾರದ ಹಲವಾರು ಯೋಜನೆಗಳು ಜಾರಿಗೆ ತಂದಿದೆ ಅಲ್ಲದೆ ಶಿಕ್ಷಣ ಮನೆ ಬಾಗಿಲಿಗೆ ಹತ್ತಿರವಾಗಿದೆ

ಹೀಗಿದ್ದಾಗಲೂ ಅದರ ಪ್ರಯೋಜನೆ ಪಡೆದುಕೊಳ್ಳದೆ ಮಕ್ಕಳಿಗೆ ಶಿಕ್ಷಣದ ಬದಲಿಗೆ ಭಾರವಾದ ಕೆಲಸ ನೀಡಿ ಅವರನ್ನು ಶಿಕ್ಷಣದ ಹಕ್ಕಿನಿಂದ ವಂಚಿತರನ್ನಾಗಿಸಿದ್ದೇವೆ ಎಂದು ವಿಷಾದಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಅಂದಾನಪ್ಪ ಕಟಗಿ ಕಾರ್ಯಕ್ರಮ ಉದ್ಘಾಟಿಸಿದರು. ಶಂಕ್ರಪ್ಪ ಮುದುಟಗಿ, ಫರಿದಾಬೇಗಂ ಮಾತನಾಡಿದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT