ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕುಗಳ ಅರಿವಿಗೆ ಸಲಹೆ

Last Updated 13 ಡಿಸೆಂಬರ್ 2013, 9:14 IST
ಅಕ್ಷರ ಗಾತ್ರ

ವಿಜಯಪುರ: ‘ಮೂಲಭೂತ ಸೌಲಭ್ಯ ಗಳಿಂದ ಯಾರೂ ವಂಚಿತರಾಗಬಾರ ದು’ ಎಂದು ಅಪರ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರಾದ ಯು.ಎಮ್. ಅಡಿಗ ತಿಳಿಸಿದರು. ಪಟ್ಟಣ ಸಮೀಪದ ಚನ್ನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಾನವಹಕ್ಕುಗಳ ಜಾಗೃತಿ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾ ಟಿಸಿ ಅವರು ಮಾತನಾಡಿದರು.

‘ಮಕ್ಕಳಿಗೆ ಮಕ್ಕಳ ಹಕ್ಕುಗಳ ಕಾನೂನಿನ ಅರಿವು ಮೂಡಿಸುವುದು ಅವಶ್ಯ’ ಎಂದರು. ಮುಖ್ಯ ಆಥಿತಿಗಳಾಗಿ ಉಪಸ್ಥಿತರಿದ್ದ ಹಿರಿಯ ಸಿವಿಲ್ ನ್ಯಾಯಧೀಶರಾದ ಎಸ್.ನಟರಾಜ್ ಮಾತನಾಡಿ, ‘ಮಕ್ಕಳಿ ಗಾಗಿ ದಾನಿಗಳ ಸಹಕಾರದಿಂದ ವಿದ್ಯಾರ್ಥಿ ಮಿತ್ರ ಪತ್ರಿಕೆ ಬಿಡುಗಡೆ ಯಾಗುತ್ತಿರುವುದು ಒಳ್ಳೆಯ ಪ್ರಯತ್ನ. ಮಕ್ಕಳು ಬಾಲ್ಯದಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಭವಿಷ್ಯದಲ್ಲಿ  ಜ್ಞಾನವಂತರಾಗಬಹುದು ಎಂದರು. ದೇಶದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ಯವಿದೆ’ ಎಂದರು.

ಜಿ.ಪಂ.ಸದಸ್ಯ ಬಿ. ರಾಜಣ್ಣ ಮಾತ ನಾಡಿ, ‘ಯಾರೂ ಶಿಕ್ಷಣದಿಂದ ವಂಚಿತ ರಾಗಬಾರದು. ಆಹಾರ ಭದ್ರತಾ ಕಾಯಿದೆ, ಬಾಲಕಾರ್ಮಿಕ  ನಿಷೇಧ ಕಾಯಿದೆ ಕುರಿತು ಅರಿವು ಬೆಳೆಸಿಕೊಳ್ಳ ಬೇಕು’ ಎಂದರು. ಚನ್ನಹಳ್ಳಿಯ ಮೂರ್ತಿ ಅವರು, ಹತ್ತನೇ ತರಗತಿ ಮಕ್ಕಳಿಗೆ ಪ್ರತಿ ದಿನ ನೀಡಲು ಉದ್ದೇಶಿಸಿರುವ ವಿದ್ಯಾರ್ಥಿ ಮಿತ್ರ ಪತ್ರಿಕೆ ಬಿಡುಗಡೆ ಮಾಡಿ ಮಾತ ನಾಡಿದರು. ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಮೇತನ ಹಳ್ಳಿ ಲಕ್ಷ್ಮಣಸಿಂಗ್ ಮಾತ ನಾಡಿದರು. 

ಉಪತಹಶೀಲ್ದಾರ್ ಅಜಿತ್ ರೈ ಮಾತನಾಡಿದರು. ನ್ಯಾಯಾಧೀಶರಾದ ಜೈಬುನ್ನೀಸಾ, ಮಾನವಹಕ್ಕುಳ ಜಾಗೃತಿ ಸಮಿತಿ ತಾಲ್ಲೂಕು ಅಧ್ಯಕ್ಷ ಎ.ಎಂ. ನಾರಾಯಣಸ್ವಾಮಿ , ರಾಜ್ಯ ಉಪಾ ಧ್ಯಕ್ಷ ಶ್ರೀನಿವಾಸ್, ಚನ್ನಹಳ್ಳಿ ಗ್ರಾ.ಪಂ. ಮುಖಂಡ ರಾಧ ಕೃಷ್ಣ, ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ, ಪ್ರಧಾನ ಕಾರ್ಯದರ್ಶಿ ಮುನಿ ರಾಜ್, ಖಜಾಂಚಿ ವೆಂಕಟೇಶ್, ವಕೀಲ ರಾದ ರಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭೈರೇಗೌಡ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ವೀಣಾ ಸ್ವಾಗತಿಸಿದರು. ಶಿಕ್ಷಕ ಸುಬ್ರಮಣಿ ನಿರೂಪಿಸಿ, ಬಸವರಾಜ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT