ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಕಣ್ಣಿನ ಆಘಾತ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಮಕ್ಕಳ ಕಣ್ಣಿಗೆ ಗಾಯವಾಗುವುದು ಆಕಸ್ಮಿಕ ಘಟನೆಗಳಿಂದ ಮತ್ತು ವಿಶೇಷವಾಗಿ ಕಣ್ಣಿಗೆ ಸಂಬಂಧಿಸಿದಂತೆ, ಇರುತ್ತದೆ. ಬಹಳಷ್ಟು ಗಾಯಗಳಾಗುವುದು ಅಥವಾ ಕಣ್ಣಿಗೆ ಹಾನಿಯಾಗುವುದು ಯಾಂತ್ರಿಕವಾಗಿರುತ್ತದೆ.

ಕಣ್ಣಿಗೆ ಆಗುವ ಗಾಯದಿಂದ (ತಿವಿಯುವಿಕೆಯಿಂದ) ಅಂತಿಮವಾಗಿ ಆಗುವ ಪರಿಣಾಮಗಳು ಹಲವು. ಅಂದರೆ ದೃಷ್ಟಿ ಮಂದತೆ, ಮುಖದ ಕಾಂತಿ ಕುಂದುವುದು ಮತ್ತು ಸಂಬಂಧಿಸಿದ ಮಾನಸಿಕ ತೊಂದರೆಗಳು ಇತ್ಯಾದಿ.

ಆದ್ದರಿಂದ ಕಣ್ಣಿಗೆ ಆಗುವ ಗಾಯವನ್ನು ತಡೆಗಟ್ಟುವುದು ಅತ್ಯಂತ ಮಹತ್ವಪೂರ್ಣವಾಗಿದೆ.  ಮಕ್ಕಳಲ್ಲಿ ಆಗುವ ಒಟ್ಟು ಗಾಯಗಳಲ್ಲಿ ಕಣ್ಣಿಗೆ ಆಗುವ ಗಾಯದ ಪ್ರಮಾಣ 8 ರಿಂದ14%. ನಂತರದಲ್ಲಿ ದೃಷ್ಟಿಹೀನತೆ. ಮಕ್ಕಳಲ್ಲಿ ಒಂದು ಕಣ್ಣಿನ ಕುರುಡುತನವನ್ನು ಪ್ರಮುಖವಾಗಿ ಕಣ್ಣಿನ ಗಾಯದಿಂದ ಆಗುವುದನ್ನು ತಡೆಗಟ್ಟಬಹುದಾಗಿದೆ.

ಕಣ್ಣಿನ ಗಾಯಗಳನ್ನು ಸಂರಕ್ಷಿಸುವುದು

ಗರ್ಭಾಶಯದಲ್ಲಿ, ಹೆರಿಗೆಯ ಸಮಯದಲ್ಲಿ ಮತ್ತು ಜನನದ ನಂತರ
ಮಕ್ಕಳ ವಯಸ್ಸಿನ ಆಧಾರಿತವಾಗಿ ನಿರ್ದಿಷ್ಟ ಕಣ್ಣಿನ ಗಾಯಗಳು ಆಗುತ್ತವೆ:

ಮೂರು ವರ್ಷದ ಒಳಗಿನ ಮಕ್ಕಳಲ್ಲಿ ಕೆಲವು ನಿರ್ದಿಷ್ಟ ಗಾಯಗಳನ್ನು ಪಾಲಕರ ಕಾಳಜಿಯಿಂದ (ಮೆಲ್ವಿಚಾರಣೆಯಿಂದ) ಸಂರಕ್ಷಿಸಲಾಗುವುದು. ಆದರೂ ಮೂರು ವರ್ಷದ ಒಳಗಿನ ಮಕ್ಕಳಿಗೆ ಕೈಯಿಂದ ಮುಟ್ಟುವುದು, ಎತ್ತಿಕೊಂಡು ಆಡಿಸುವುದರಿಂದ ಕೆಲವು ಕಣ್ಣಿನ ಗಾಯಗಳು ಆಗುತ್ತವೆ.

ಉದಾ: ತಾಯಿ ಅಥವಾ ಮಗುವನ್ನು ನೋಡಿಕೊಳ್ಳುವವರ ಬೆರಳಿನ ಉಗುರು ತಗಲುವುದರಿಂದ, ಬಟ್ಟೆ ಹೊಲೆಯುವ ಸೂಜಿ, ಚಾಕು ಮತ್ತು ಕತ್ತರಿಯಂತಹ ಚೂಪಾದ ವಸ್ತುಗಳು ತಗಲುವುದರಿಂದ ಕಣ್ಣಿನ ಗಾಯಗಳಾಗುತ್ತವೆ.

3 ರಿಂದ 6 ವರ್ಷದ ಮಕ್ಕಳು ಆಕಸ್ಮಿಕವಾಗಿ ತಮ್ಮಷ್ಟಕ್ಕೆ ತಾವೇ ಕಣ್ಣಿಗೆ ಗಾಯಗಳನ್ನು ಚೂಪಾದ ವಸ್ತುಗಳಿಂದ, ಆಟಿಕೆ ಸಾಮಾನುಗಳಿಗಿರುವ ಮೊಳೆಗಳಿಂದ ಪೆನ್ಸಿಲ್, ಬಾಣಗಳು, ಕೋಡುಗಳು ಮತ್ತು ಕಲ್ಲುಗಳಿಂದ ಮಾಡಿಕೊಳ್ಳುತ್ತಾರೆ. 6 ರಿಂದ 10 ವರ್ಷದ ಮಕ್ಕಳು ಪ್ರಬಲವಾದ ಪ್ರಮುಖ ಕಣ್ಣಿನ ಗಾಯಗಳು ಮಾಡಿಕೊಳ್ಳುವುದನ್ನು ಕಾಣುತ್ತೇವೆ. ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮಷ್ಟಕ್ಕೆ ತಾವೇ ಹೊರಗಿನ ಪರಿಸರಕ್ಕೆ ಒಡ್ಡಿಕೊಳ್ಳುವುದರಿಂದ ಕಣ್ಣಿನ ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಗಂಡು ಮಕ್ಕಳು ಹೆಚ್ಚು ಸಾಹಸಮಯ ಮತ್ತು ಜಗಳಗಂಟರಾಗಿ ಇರುವುದರಿಂದ ಹೆಚ್ಚು ಕಣ್ಣಿನ ಗಾಯಗಳನ್ನು ಮಾಡಿಕೊಳ್ಳುತ್ತಾರೆ.

5 ರಿಂದ 14 ವರ್ಷದೊಳಗಿನ ಮಕ್ಕಳು ಆಟ ಆಡುವಾಗ ಸಾಮಾನ್ಯವಾಗಿ ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ, ಪ್ರಾಣಿಯ ಬಾಲದಿಂದ, ಪಕ್ಷಿಗಳ ರೆಕ್ಕೆಗಳಿಂದ, ಗಿಲ್ಲಿದಾಂಡು ಮತ್ತು ಮೀನಿನ ಕೊಕ್ಕೆಯಿಂದ ಗಾಯ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಮಕ್ಕಳಿಗೆ ಕಣ್ಣಿನ ಗಾಯ ಆಗುವ ಸಾಮಾನ್ಯ ಸ್ಥಳಗಳೆಂದರೆ ಮನೆ, ರಸ್ತೆಯ ಮೇಲೆ, ಆಟ ಆಡುವಾಗ, ಶಾಲೆಯಲ್ಲಿ.

ಕಣ್ಣಿನ ಗಾಯಗಳು ವಿವಿಧ ಭೌಗೋಳಿಕ ಪ್ರದೇಶಗಳಿಗನುಸಾರವಾಗಿ ವೈವಿಧ್ಯತೆ ಮತ್ತು ಗತಿಯಲ್ಲಿ ಭಿನ್ನವಾಗಿರುತ್ತವೆ. ಭಾರತ ದೇಶದಲ್ಲಿ ಮೊನಚು ಮತ್ತು ಕಬ್ಬಿ ಣದ ವಸ್ತುಗಳಿಂದಾದ ಕಣ್ಣಿನ ಗಾಯಗಳು ಸಾಮಾನ್ಯವಾಗಿ ಕಂಡು ಬರುತ್ತವೆ.

ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಪಕ್ಷಿಯ ರೆಕ್ಕೆ ಮತ್ತು ಪ್ರಾಣಿಯ ಕೋಡಿನಿಂದ ಗಾಯಗೊಳ್ಳುವುದು ಸಾಮಾನ್ಯ. ಟಿ. ವಿ. ದೃಶ್ಯಗಳಿಂದ ಪ್ರಭಾವಿತರಾಗಿ ಬಿಲ್ಲು ಮತ್ತು ಬಾಣಗಳಿಂದ ಮಕ್ಕಳು ಗಾಯಗೊಂಡಿರುವುದಿದೆ. ಹಾಗೆಯೇ ದೀಪಾವ ಳಿಯ ಸಮಯದಲ್ಲಿ ಪಟಾಕಿ ಹಾಗೂ ಹೋಳಿ ಹಬ್ಬದಲ್ಲಿ ಬಣ್ಣದ ನೀರಿನ ಬಲೂನು ಗಳಿಂದ ವರ್ಷದಿಂದ ವರ್ಷಕ್ಕೆ ಹೆಚ್ಚು ಮಕ್ಕಳು ಕಣ್ಣು ಕಳೆದುಕೊಳ್ಳುತ್ತಿದ್ದಾರೆ.

ಮಗು ಕಣ್ಣಿನ ಗಾಯ ಮಾಡಿಕೊಂಡು ಬಂದಾಗ
-ಯಾವ ವಸ್ತುವಿನಿಂದ ಗಾಯವಾಗಿದೆ ಎಂದು ತಿಳಿದುಕೊಳ್ಳುವುದು.
-ಗಾಯಗೊಂಡ ಕಣ್ಣನು ಸಮಾಧಾನದಿಂದ ಪರೀಕ್ಷಿಸುವುದು.
-ದೃಷ್ಟಿಯ ತೀಕ್ಷ್ಣತೆಯನ್ನು ನಿಷ್ಕರ್ಷಿಸುವುದು.

-ಮಗುವಿನ ಕಣ್ಣು ರೆಪ್ಪೆ, ಮುಖ, ಕಣ್ಣು ಗೂಡು, ಕಣ್ಣಿನ ಚಲನೆ ಹಾಗೂ ಸ್ಥಿತಿಗತಿ ಕುರಿತು ಬಾಹ್ಯವಾಗಿ ಪರೀಕ್ಷಿಸುವುದು.

-ಕಣ್ಣಿನ ಗುಡ್ಡಿಯ ಮೌಲ್ಯ ಮಾಪನದಲ್ಲಿ ಸಂಯೋಜಿಕ, ಕಣ್ಣಿನ ಪಾರದರ್ಶಕ ಪಟಿಲ ಕಾಂತಿಯಾ, ಕಣ್ಣು (ಕಣ್ಣು ಗುಡ್ಡೆಯ ಸುತ್ತಲಿರುವ ವರ್ತುಲ), ಕಣ್ಣಿನ ಮುಂಭಾಗ ಮಸೂರಗಳ ಬಗ್ಗೆ ಪರೀಕ್ಷಿಸಬೇಕು.

-ವರ್ತುಲದ ಹಿನ್ನೆಲೆಯ ಪರೀಕ್ಷೆ.
-ಗಾಯಗೊಂಡ ಕಣ್ಣನ್ನು ಅರಿವಳಿಕೆ ನೀಡುವ ಮೂಲಕ ಪರೀಕ್ಷೆಗೆ ಒಳಪಡಿಸುವುದು ಅವಶ್ಯಕ.

ಕಣ್ಣಿನ ಗಾಯಗಳ ವರ್ಗೀಕರಣ
-ಗಾಯದ ಆಧಾರದ ಮೇಲೆ ಯಾವ ಪ್ರಕಾರದ ಗಾಯ ಎಂದು ತಿಳಿಯುವುದು.
-ಪರೀಕ್ಷೆ ಮಾಡುವ ಸಮಯದಲ್ಲಿ ದೃಷ್ಟಿಯ ತೀಕ್ಷ್ಣತೆಯ ಆಧಾರದ ಮೇಲೆ ಗಾಯದ ಪ್ರಮಾಣವನ್ನು ನಿರ್ಧರಿಸುವುದು.

ಯಾಂತ್ರಿಕ ಗಾಯಗಳು ಮುಚ್ಚಿದ ಕಣ್ಣು ಗುಡ್ಡೆ ಅಥವಾ ತೆರೆದ ಕಣ್ಣುಗುಡ್ಡೆ ಗಾಯಗಳಾಗಿರಬಹುದು. ಮುಚ್ಚಿದ ಕಣ್ಣುಗುಡ್ಡೆ ಗಾಯಗಳು ಈ ಕೆಳಕಂಡ ಕಾರಣಗಳಿಂದ ಆಗಬಹುದು.

-ಚೂಪಾದ (ಹರಿತವಲ್ಲದ) ವಸ್ತುಗಳ ಬಲವಾಗಿ ಬಡಿತದಿಂದ.
-ಸ್ವಲ್ಪ ಹರಿತವಿರುವ (ಚೂಪಾಗಿರುವ) ವಸ್ತುಗಳ ಬಲವಾಗಿ ಹೊಡೆತದಿಂದ.
-ಮೇಲುಭಾಗದಲ್ಲಿ ಕಸ ಕಡ್ಡಿ ಸೇರಿಕೊಳ್ಳುವುದು.

ತೆರೆದ ಕಣ್ಣುಗುಡ್ಡೆ ಗಾಯಗಳು: ಕಣ್ಣಿನ ಪಾರದರ್ಶಕ ಪಟಲ (ಕಾರ್ನಿಯಾ) ಮತ್ತು ಕಣ್ಣು ಗುಡ್ಡೆಯ ಬಿಳಿಭಾಗ (ಸ್ಕೇಲಾ) ಸಂಪೂರ್ಣವಾಗಿ ಗಾಯದಿಂದ ಉಬ್ಬಿಕೊಂಡಿರುತ್ತದೆ. ಇಂತಹ ಗಾಯವು ಚೂಪಾಗಿರುವ ವಸ್ತುಗಳಿಂದ ಬಲವಾಗಿ ಬಡಿದ ಆಘಾತ ಅಥವಾ ಹರಿತವಾದ (ಚೂಪಾದ ವಸ್ತುಗಳಿಂದ) ಆಘಾತಗಳಾಗಿರುತ್ತದೆ.

ಶಾರೀರಿಕವಾಗಿ  ಕಣ್ಣಿನ ಆಘಾತಗಳನ್ನು ಹೀಗೆ ವಿಭಜಿಸಲಾಗಿದೆ.
-ಕಣ್ಣಿನ ಮುಂಭಾಗ ಪ್ರದೇಶದಲ್ಲಿಯ ಆಘಾತ
-ಕಣ್ಣಿನ ಹಿಂಭಾಗ ಪ್ರದೇಶದಲ್ಲಿಯ ಆಘಾತ
-ಎರಡೂ ಪ್ರದೇಶದಲ್ಲಿಯ ಆಘಾತ

 ರಾಸಾಯನಿಕ ಗಾಯಗಳು
-ಶರೀರದಿಂದ ಸುಟ್ಟ ಗಾಯಗಳು ಆಮ್ಲದಿಂದ ಸುಟ್ಟಗಾಯಗಳಿಗಿಂತ ಅಪಾಯಕಾರಿ.
-ತಕ್ಷಣ ಸಾಕಷ್ಟು ಸಲ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ದೃಷ್ಟಿ ಕಳೆದುಕೊಳ್ಳುವುದನ್ನು ರಕ್ಷಿಸಬಹುದು.

ಕಣ್ಣಿನ ಗಾಯಗಳಿಂದಾಗುವ ಪರಿಣಾಮಗಳು ಹಲವು: ಅಂದರೆ ದೃಷ್ಟಿ ಹೀನತೆ,  ಕಣ್ಣಿನ ಕಾಂತಿ ಕಳೆದು ಕೊಳ್ಳಬಹುದು. ಮುಖದ ಗಾಯದಿಂದ ಬೇರೆ ಸಂಬಂಧಿತ ರೋಗಗಳು ಬರಬಹುದು. ಅಲ್ಲದೇ ವ್ಯಕ್ತಿತ್ವ ನ್ಯೂನತೆಗಳೂ ಉಂಟಾಗಬಹುದು.

ಕಣ್ಣಿನ ಆಘಾತಗಳನ್ನು ತಡೆಗಟ್ಟಬಹುದು
ಉತ್ತಮವಾದ ಸಂಬಂಧಿತ ಶಿಕ್ಷಣ ನೀಡುವುದು. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು. ಆಡುವಾಗ ಮೇಲ್ವಿಚಾರಣೆ ಮಾಡುವುದರೊಂದಿಗೆ ನಿಗಾ ವಹಿಸುವುದು. ಶಾಲೆಯಲ್ಲಿ, ಮನೆಯಲ್ಲಿ ಮಕ್ಕಳು ಆಟ ಆಡುವ ಸ್ಥಳಗಳಲ್ಲಿ, ರಸ್ತೆಯಲ್ಲಿ ಮಕ್ಕಳು ಗಾಯಗಳನ್ನು ಮಾಡಿಕೊಳ್ಳದಂತೆ ನಿಗಾವಹಿಸುವುದು ಮತ್ತು ಪಟಾಕಿಗಳನ್ನು ಹಚ್ಚುವಾಗ ಹೆಚ್ಚು ಕಾಳಜಿ ವಹಿಸುವುದು.

ಮಕ್ಕಳಲ್ಲಿ ಆಗುವ ಕಣ್ಣಿನ ಗಾಯಗಳನ್ನು ನಿಯಂತ್ರಿಸುವಲ್ಲಿ ಅಥವಾ ತಡೆಗಟ್ಟುವಲ್ಲಿ ಪಾಲಕರು, ಹಿರಿಯರು, ಶಿಕ್ಷಕರು ಮತ್ತು ಮಾಧ್ಯಮದವರು ಪ್ರಮುಖ ಪಾತ್ರ ವಹಿಸಬಲ್ಲರು. ಆದ್ದರಿಂದ ಇವರೆಲ್ಲರೂ ತಮ್ಮ ತಮ್ಮ ಸಂಬಂಧಿತ ಪಾತ್ರ ನಿರ್ವಹಿಸಿದರೆ ಮಕ್ಕಳಲ್ಲಾಗುವ ಕಣ್ಣಿನ ಗಾಯಗಳನ್ನು ತಡೆಗಟ್ಟಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT