ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಕ್ಕಳಿಗೆ ತಾಯಿಯಿಂದ ಸಂಸ್ಕಾರದ ಪಾಠ'

Last Updated 25 ಡಿಸೆಂಬರ್ 2012, 7:06 IST
ಅಕ್ಷರ ಗಾತ್ರ

ಹುಕ್ಕೇರಿ: `ಗುರು ಹಿರಿಯರಿಗೆ ಗೌರವ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುವಲ್ಲಿ ತಾಯಿಯ ಪಾತ್ರ ಮುಖ್ಯ' ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಸವಿತಾ ಹೇಳಿದರು.

ಅವರು ತಾಲ್ಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮೃದ್ಧಿ ಲಕ್ಷ್ಮೀ ಸ್ವಸಹಾಯ ಸಂಘಗಳ ಸಾಮೂಹಿಕ ಲಕ್ಷ್ಮಿ ಉಡಿ ತುಂಬುವ ಸಮಾರಂಭದಲ್ಲಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಶಿಕ್ಷಕಿ ಜಿ.ಆರ್. ಶೇಟಿ ಮಾತನಾಡಿ ಮನೆಯ ಪರಿಸರ, ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ  ಮಕ್ಕಳನ್ನು ಪುಸ್ತಕ ಓದುವುದರ ಜೊತೆ ಮಾನಸಿಕವಾಗಿ ತಯಾರು ಮಾಡಲು ಸಲಹೆ ನೀಡಿದರು.   

ಮೇಲ್ವಿಚಾರಕ ಮಂಜುನಾಥ ಮಾತನಾಡಿ ಗ್ರಾಮದ ಪ್ರತಿ ವ್ಯಕ್ತಿಯೂ ಸ್ವಸಹಾಯದ ಸಂಘದ ಮೂಲಕ  ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬಹುದು ಎಂದರು. ಶೋಭಾ ದೊಡ್ಡಲಿಂಗನ್ನವರ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ.ಮಾಜಿ ಅಧ್ಯಕ್ಷೆ ಶೇಖವ್ವಾ ಹಸರಾಣಿ, ಗುರುಸಾತವ್ವಾ ಗಣಾಚಾರಿ, ಸುನೀತಾ ಚೌಗಲಾ, ವಿಮಲಾ ಮಲಗೌಡನವರ, ಕಸ್ತೂರಿ ಮತ್ತಿತರು ಪಾಲ್ಗೊಂಡಿದ್ದರು. ಸೇವಾ ಪ್ರತಿನಿಧಿ ಶೋಭಾ ಗಣಾಚಾರಿ  ಸ್ವಾಗತಿಸಿದರು. ಅನೂಜ ಕಾರ್ಯಕ್ರಮ ನಿರೂಪಿಸಿದರು. ಶೈಲಾ ಉಪಾಧ್ಯ ವಂದಿಸಿದರು. 

`ಹೊಸ ವರ್ಷಾಚರಣೆ ತಡೆಯಿರಿ'
ಗೋಕಾಕ: ರಾಜ್ಯದ ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇದೇ 31ರಂದು ಹೊಸ ವರ್ಷದ ಅಂಗವಾಗಿ ನಡೆಯುತ್ತಿರುವ ತಪ್ಪು ಆಚರಣೆಯನ್ನು ತಡೆಯಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ ಕುಲಕರ್ಣಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷವನ್ನು ಯುಗಾದಿಯ ಬದಲು ಡಿಸೆಂಬರ್ 31ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಆಚರಿಸುತ್ತಿವುದು ಕೆಟ್ಟ ರೂಢಿ. ಅದು ಈಚೆಗೆ ಹೆಚ್ಚಾಗಿದೆ ಎಂದು ಹೇಳಿದರು.

ರಾತ್ರಿ ಯುವಕರು ತಂಡೋಪ ತಂಡವಾಗಿ ತೀರ್ಥಕ್ಷೇತ್ರಗಳು, ಪ್ರವಾಸಿ ಸ್ಥಳಗಳು, ಐತಿಹಾಸಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಅಮಲು ಪದಾರ್ಥಗಳ ಸೇವನೆ ಮಾಡುವ ಪ್ರಮಾಣ ಹೆಚ್ಚಾಗಿದೆ ಇದನ್ನು ಹಿಂದೂ ಜನಜಾಗೃತಿ ಸಮಿತಿಯು ವಿರೋಧಿಸುತ್ತಿದೆ ಎಂದರು.

ವಡೇರಹಟ್ಟಿಯ ನಾರಾಯಣ ಶರಣರು ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ದೇಶಿಯ ಸಂಸ್ಕೃತಿಯನ್ನುಉಳಿಸಿಕೊಳ್ಳಬೇಕಾಗಿದೆ ಎಂದರು. ಮಾರುತಿ ದೋಡಮೀಸೆ,  ಶ್ರಿಕಾಂತ ಹುಲ್ಲೋಳ್ಳಿ, ಮಂಜುನಾಥ ಶಿರವಾಳಕರ  ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT