ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗ ಕಾರು ಬಳಿಸಿದ್ದಕ್ಕೆ ದಂಡ ತೆತ್ತ ಪ್ರಧಾನಿ!

Last Updated 9 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

 ನವದೆಹಲಿ, (ಐಎಎನ್ಎಸ್): ಅಧಿಕಾರಕ್ಕೆ ಬರುತ್ತಿದ್ದಂತೆಯೇ ಭಾರತದ ಇಂದಿನ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಕರಣಗಳು ಪ್ರತಿದಿನವೂ ಸದ್ದು ಮಾಡತೊಡಗಿರುವ ಸಮಯದಲ್ಲಿ, ಕಚೇರಿ ಕೆಲಸಕ್ಕೆಂದು ನಿಯೋಜಿತವಾಗಿದ್ದ ವಾಹನವನ್ನು ಮಗ ಸ್ವಂತಕ್ಕೆ ಬಳಿಸಿದ್ದಕ್ಕಾಗಿ ಎರಡನೇ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ದಂಡ ತೆತ್ತಿದ್ದಾರೆ!

ಈ ಘಟನೆ ಶಾಸ್ತ್ರಿ ಅವರ ಮಗ ಸುನೀಲ್ ಶಾಸ್ತ್ರಿ ಅವರು ಬರೆದಿರುವ  ~ಲಾಲ ಬಹಾದ್ದೂರ ಶಾಸ್ತ್ರಿ: ಪಾಸ್ಟ್ ಫಾರವರ್ಡ್~ (ಕೊನಾರ್ಕ) ಪುಸ್ತಕದಲ್ಲಿ ದಾಖಲಾಗಿದೆ. ಸುನೀಲ್ ಶಾಸ್ತ್ರಿ ಅವರು ಕಾಂಗ್ರೆಸ್ ಪಕ್ಷದ  ರಾಜಕಾರಣಿಯಾಗಿದ್ದಾರೆ. ಜೊತೆಗೆ ಅವರು ಈ ಹಿಂದೆ ಉತ್ತರ ಪ್ರದೇಶದಲ್ಲಿ ಸಚಿವರಾಗಿದ್ದರು.

ತಂದೆಯು ಹುದ್ದಗೆ ಅನುಗುಣವಾಗಿ ತಾನೊಂದು ಐಷರಾಮಿ ಕಾರಿನಲ್ಲಿ ಪ್ರಯಾಣಿಸಬೇಕೆಂದು ಮಗ ಸುನೀಲ್ ಶಾಸ್ತ್ರಿ ಕನಸು ಕಂಡಿದ್ದರು. ಅದರಂತೆ ಲಾಲ್ ಬಹಾದ್ದೂರ ಶಾಸ್ತ್ರಿ  ಅವರಿಗೆ ಕಚೇರಿ ಬಳಕೆಗೆ ಷೆವರಲೆಟ್ ಇಂಪಾಲಾ ಕಾರೊಂದನ್ನು ಒದಗಿಸಲಾಗಿತ್ತು.

~ಒಂದು ದಿನ ತಂದೆಯ ವೈಯಕ್ತಿಕ ಕಾರ್ಯದರ್ಶಿಗೆ ಫೋನ್ ಮಾಡಿ ಆ ಕಾರನ್ನು ಮನೆಗೆ ತರಿಸಿಕೊಂಡು ನಾನು ಓಡಿಸಿದೆ. ಆದರೆ, ವಿಷಯ ತಿಳಿದ ತಂದೆ, ಚಾಲಕನನ್ನು ಕರೆಯಸಿಕೊಂಡು ವಾಹನ ಚಾಲನೆಯ ವಿವರದ ಪುಸ್ತಕದಲ್ಲಿ ದಾಖಲಾದ 14 ಕಿ.ಲೋ ಮೀಟರ್ ದೂರವನ್ನು ವ್ಯಯಕ್ತಿಕ ಬಳಕೆ ಎಂದು ನಮೂದಿಸಿ, ಅದಕ್ಕೆ ಸರಿಯಾಗಿ ದುಡ್ಡು ಕಟ್ಟಿದರು~ ಎಂದು ಸುನೀಲ್ ಶಾಸ್ತ್ರಿ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಲಾಲ್ ಬಹಾದ್ದೂರ ಶಾಸ್ತ್ರಿ ಅವರು ತಮ್ಮ ಹಳೆಯ ಖಾದಿ ಕುರ್ತಾಗಳನ್ನು ಕತ್ತರಿಸಿಕೊಂಡು ಕರವಸ್ತ್ರವಾಗಿ ಬಳಸುತ್ತಿದ್ದರು.  ಇಂಥ ಅನೇಕ ಪ್ರಾಮಾಣಿಕತೆ ಮೆರೆಯುವ ಮತ್ತು ಸರಳ ಜೀವನದ ಘಟನೆಗಳು  ಆ ಪುಸ್ತಕದಲ್ಲಿ ದಾಖಲಾಗಿವೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT